ಏಷ್ಟು ಹಣ ನೀಡುತ್ತಾರೆ?
• ಕುರಿ ದೊಡ್ಡಿ 70,000 ರೂ
• ಮೇಕೆ 70,000 ರೂ
• ದನದ ಕೊಟ್ಟಿಗೆ 57,000 ರೂ
• ಹಂದಿ ಶೆಡ್ 87,000
• ಕೋಳಿ ಶೆಡ್ 60,000 ರೂ
ಈ ಯೋಜನೆಯ ಫಲಾನುಭವಿಗಳು
• ಪರಿಶಿಷ್ಟ ಜಾತಿ
• ಪರಿಶಿಷ್ಟ ಪಂಗಡ
• ಭೂ ಸುಧಾರಣಾ ಫಲಾನುಭವಿಗಳು
• ಸಣ್ಣ ಮತ್ತು ಅತಿ ಸಣ್ಣ ರೈತರು
• ವಸತಿ ಯೋಜನೆಯ ಫಲಾನುಭವಿಗಳು
• ಅರಣ್ಯ ಹಕ್ಕು ಕಾಯ್ದೆ 2006ರ ಫಲಾನುಭವಿಗಳು
• ಅಲೆಮಾರಿ ಬುಡಕಟ್ಟುಗಳು
• ವಿಕಲಚೇತನ ಕುಟುಂಬಗಳು
• ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು
• ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು
• ಮಹಿಳಾ ಪ್ರಧಾನ ಕುಟುಂಬಗಳು
ಅರ್ಜಿ ಎಲ್ಲಿ ಸಲ್ಲಿಸಬೇಕು?
ಪಂಚಾಯತಿ ಅಲ್ಲಿ ಅರ್ಜಿ ಸಲ್ಲಿಸಿ. ನಂತರ ಎಲ್ಲಿ ಎಲ್ಲ ದಾಖಲೆಗಳನ್ನೂ ಪರಿಶೀಲಿಸಿ ನೀವು ಈ ಯೋಜನೆಯಿಂದ ಹಣ ಪಡೆಯಬಹುದು.
ಬಡ್ಡಿ ಸಮೇತ ಠೇವಣಿ ಹಣ ಹಿಂದಿರುಗಿಸದ ಧಾರವಾಡದ ದೈವಜ್ಞ ಪತ್ತಿನ ಸಹಕಾರಿ ಸಂಘಕ್ಕೆ ದಂಡ ವಿಧಿಸಿ, ದೂರುದಾರರಿಗೆ ಪರಿಹಾರ ನೀಡಲು ಆದೇಶ
ಆಕಾಶವಾಣಿ ರಸ್ತೆಯ ನಿವಾಸಿ ಸುಮೀತ್ರಾ ಶೇರ್ ಅನ್ನುವವರು 2018-19ರಲ್ಲಿ ಧಾರವಾಡದ ದೈವಜ್ಞ ಪತ್ತಿನ ಸಹಕಾರಿ ಸಂಘದಲ್ಲಿ ರೂ.3.90,000/- ಠೇವಣಿ ಇಟ್ಟಿದ್ದರು. ಅದರ ಮೇಲೆ ಶೇ.8.5 ರಂತೆ ಬಡ್ಡಿ ಕೊಡಲು ಎದುರುದಾರರ ಸಂಘದವರು ಒಪ್ಪಿದ್ದರು. ಅಲ್ಲದೇ ದೂರುದಾರರ ಉಳಿತಾಯ ಖಾತೆಯಲ್ಲಿ ರೂ.56,568/- ಹಣ ಬಾಕಿ ಇತ್ತು. ಅವಧಿ ಮುಗಿದರೂ ಎದುರುದಾರ ಸಂಘದವರು ದೂರುದಾರರಿಗೆ ಠೇವಣಿ ಹಣ ಅಥವಾ ಅದರ ಮೇಲೆ ಬಡ್ಡಿ ಕೊಟ್ಟಿರಲಿಲ್ಲ.
ಉಳಿತಾಯ ಖಾತೆಯ ಹಣವನ್ನು ಪಡೆಯಲು ಅವರು ಅನುಮತಿಸಿರಲಿಲ್ಲ. ಈ ಬಗ್ಗೆ ಹಲವು ಬಾರಿ ಎದುರದಾರ ಸಂಘದವರಿಗೆ ದೂರುದಾರರು ವಿನಂತಿಸಿದರೂ ಏನೂ ಪ್ರಯೋಜನ ಆಗಿರಲಿಲ್ಲ. ಅಂತಹ ಎದುರುದಾರದೈವಜ್ಞ ಪತ್ತಿನ ಸಹಕಾರಿ ಸಂಘದ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ.29/05/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಎದುರುದಾರ ದೈವಜ್ಞ ಪತ್ತಿನ ಸಹಕಾರಿ ಸಂಘದವರು ವಕೀಲರ ಮೂಲಕ ಹಾಜರಾಗಿ ತಮ್ಮ ಮೇಲಿನವರ ಸೂಚನೆಯಂತೆ ತಮ್ಮ ಸಂಘದಲ್ಲಿರುವ ಎಲ್ಲಾ ಸದಸ್ಯರ ಠೇವಣಿ ಮತ್ತು ಇತರೆ ಹಣವನ್ನು ಪಿ.ಎಮ್.ಸಿ. ಬ್ಯಾಂಕ್‌ನಲ್ಲಿ ಇಟ್ಟಿರುವುದಾಗಿ ಸದರಿ ಬ್ಯಾಂಕು ನಂತರ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ವಿಲೀನವಾಗಿದೆ. ಹೀಗಾಗಿ ತಾವು ಇಟ್ಟಿರುವ ಹಣವನ್ನು ಸದರಿ ಬ್ಯಾಂಕಿನಿಂದ ವಾಪಸ್ಸು ಪಡೆದು ಗ್ರಾಹಕರಾದ ದೂರುದಾರರಿಗೆ ಹಿಂದಿರುಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ತಮ್ಮಿಂದ ಯಾವುದೇ ರೀತಿ ಸೇವಾ ನ್ಯೂನ್ಯತೆ ಆಗಿಲ್ಲ ಅಂತಾ ಎದುರುದಾರ ದೈವಜ್ಞ ಪತ್ತಿನ ಸಹಕಾರಿ ಸಂಘದವರು ಹೇಳಿ ದೂರನ್ನು ವಜಾ ಮಾಡುವಂತೆ ಕೋರಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು ಸಿ. ಹಿರೇಮಠ ಅವರು ದೂರುದಾರರು ಮತ್ತು ಎದುರುದಾರ ಸಂಘದವರ ಮಧ್ಯೆ ಆಗಿರುವ ಒಪ್ಪಂದದಂತೆ ಬಡ್ಡಿ ಸಮೇತ ಠೇವಣಿ ಹಣವನ್ನು ಅವಧಿ ಮುಗಿದ ನಂತರ ವಾಪಸ್ಸು ಕೊಡುವುದು ಎದುರುದಾರರ ಸಂಘದವರ ಕರ್ತವ್ಯವಾಗಿದೆ. ಆದರೆ ದೂರುದಾರರ ಠೇವಣಿ ಹಣ ಹಿಂದಿರುಗಿಸದೇ ಇರುವುದು ಮತ್ತು ಅವರ ಉಳಿತಾಯ ಖಾತೆಯ ಹಣವನ್ನು ಪಡೆಯಲು ನಿರಾಕರಿಸಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ತೀರ್ಪು ನೀಡಿದ 3 ತಿಂಗಳ ಒಳಗಾಗಿ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನೊಂದಿಗೆ ವ್ಯವಹರಿಸಿ ದೂರುದಾರರ ಠೇವಣಿ ಹಣ ಮತ್ತು ಉಳಿತಾಯ ಖಾತೆಯ ಹಣ ರೂ.6,12,154/- ಮತ್ತು ಅದರ ಮೇಲೆ ಶೇ.8.05 ರಂತೆ ಬಡ್ಡಿ ಸಮೇತ ಲೆಕ್ಕ ಹಾಕಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ 25000/- 8gd ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಎದುರುದಾರ ಧಾರವಾಡದ ದೈವಜ್ಞ ಪತ್ತಿನ ಸಹಕಾರಿ ಸಂಘಕ್ಕೆ ಆಯೋಗ ನಿರ್ದೇಶಿಸಿದೆ.
Women Mental Health ಆನ್‌ಲೈನ್ ಉಪನ್ಯಾಸ
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಜನವರಿ 08 od 12 d “Women Mental Health” ಸಂಪನ್ಮೂಲ ತಜ್ಞರಿಂದ ಆನ್‌ಲೈನ್ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಜನವರಿ 8 ರಂದು ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ ಉಜಿಟಿಜಜಿಡಿ ಚಿಟಿಜ ಒಜಿಟಿಣಚಿಟ ಊಜಚಿಟಣ್ಣು ಕುರಿತು ನಿಮಾನ್ಸ್‌ನ ಡಾ. ಗೀತಾ ದೇಸಾಯಿ ಅವರು ಉಪನ್ಯಾಸ ನೀಡಲಿದ್ದಾರೆ.
10 ರಂದು ಮಧ್ಯಾಹ್ನ 3 ರಿಂದ ಸಂಜೆ 4. Pregnancy and Mental Health ಕುರಿತು ನಿಮಾನ್ಸ್‌ನ ಡಾ. ರಶ್ಮಿ ಅರಸಪ್ಪ ಅವರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗುವವರು ಲಿಂಕ್ ಬಳಸಿಕೊಳ್ಳಬಹುದು. ವಿಡಿಯೋ ಸಿಸ್ಟಮ್ನನ ವೆಬಿನಾರ್ ಜನವರಿ 11 ರಂದು ಮಧ್ಯಾಹ್ನ 3 ರಿಂದ o 4 dd Mental Health of Young Mother & ಡಾ. ಸುಂದರ್‌ನಾಗ್ ಗಂಜೇಕರ ಅವರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗುವವರು.
ನಿಮಾನ್ಸ್‌ನ ಡಾ. ವೀಣಾ ಸತ್ಯನಾರಾಯಣ ಅವರು ಉಪನ್ಯಾಸ ನೀಡಲಿದ್ದಾರೆ. ವಿಡಿಯೋ ಸಿಸ್ಟಮ್ನ ವೆಬಿನಾರ್. ಪದವಿಪೂರ್ವ, ವಿಜ್ಞಾನ ಮತ್ತು ತಂತ್ರಜ್ಞಾನ ಇಂಜಿನಿಯರಿಂಗ್, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಜನಸಾಮನ್ಯರು ಈ ಉಪನ್ಯಾಸ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆಯಬಹುದಾಗಿದೆ. ವೆಬಿನಾರ್ ಲಿಂಕ್ ಅಥವಾ ಅಕಾಡೆಮಿಯ ಯೂ ಟ್ಯೂಬ್ ಚಾನೆಲ್‌ನಲ್ಲಿ ಸಹ ವೀಕ್ಷಿಸಬಹುದಾಗಿದೆ. ಹೆಚ್ಚಿನ ಮಹಿತಿಗಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ದೂರವಾಣಿ ಸಂಖ್ಯೆ 080- 29721550 ಅಥವಾ ಜಾಲತಾಣದಲ್ಲಿ ಪಡೆಯಬಹುದಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ. ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.