ಆತ್ಮೀಯ ನಾಗರಿಕರೇ, ಭಾರತ ಸರ್ಕಾರವು ಹೆಣ್ಣುಮಕ್ಕಳ ಸಮೃದ್ಧಿಗಾಗಿ ಒಂದು ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಭಾರತ ಸರ್ಕಾರವು 22 ಜನವರಿ 2015 ರಂದು ಈ ಯೋಜನೆಯನ್ನು ಪ್ರಾರಂಭಗೊಳಿಸಿತು ಎಂಬ ಅಭಿಯಾನದ ಅಡಿಯಲ್ಲಿ ಇದನ್ನು ಆರಂಭಿಸಲಾಯಿತು. ಅದರ ಹೆಸರು ‘ಸುಕನ್ಯಾ ಸಮೃದ್ಧಿ ಖಾತೆ’. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಹೆಣ್ಣುಮಕ್ಕಳ ಉನ್ನತ ಶಿಕ್ಷಣ ಮತ್ತು ಅವರ ಮದುವೆಗೆ ಸಹಾಯವಾಗಲೆಂದು.
ಸುಕನ್ಯಾ ಸಮೃದ್ಧಿ ಖಾತೆಯನ್ನು ತೆಗೆಯುವ ತಂತ್ರಾಂಶ ಇಲ್ಲಿದೆ ನೋಡಿ https://www-nsiindia-gov-in.translate.goog/InternalPage.aspx?Id_Pk=89&_x_tr_sch=http&_x_tr_sl=en&_x_tr_tl=kn&_x_tr_hl=kn&_x_tr_pto=tc
ಸುಕನ್ಯಾ ಸಮೃದ್ಧಿ ಯೋಜನೆಯ ವಿಶಿಷ್ಟತೆಗಳೇನು?
ಮೊದಲನೇ ಯಾಗಿ ಈ ಖಾತೆಯನ್ನುಹೆಣ್ಣು ಮಕ್ಕಳ ಉದ್ಧಾರಕ್ಕಾಗಿ ಸರ್ಕಾರವು ಸ್ಥಾಪಿಸಿದೆ. ಆ ಹೆಣ್ಣು ಮಗುವಿನ ಉನ್ನತ ಶಿಕ್ಷಣಕ್ಕಾಗಿ ಭಾಗಶಃ ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಈ ಖಾತೆ ಹೊಂದಿದೆ ಮತ್ತು ಹೆಣ್ಣು ಮಗುವಿನ ಮದುವೆಗೆ ಎಲ್ಲಾ ಹಣವನ್ನು ತೆಗೆಯುವ ಅವಕಾಶ ಇಲ್ಲಿ ದೊರೆತಿದೆ. ಈ ಖಾತೆಯೂ ಸುರಕ್ಷಿತ ಮತ್ತು ಖಾತರಿಯ ಆದಾಯ.
ಮತ್ತು ಈ ಖಾತೆಯಿಂದಆದಾಯ ತೆರಿಗೆ ಪ್ರಯೋಜನಗಳು ಇವೆ. ಬೇರೆ ಉಳಿತಾಯ ಯೋಜನೆಗಳಿಗೆ ಈ ಯೋಜನೆಯನ್ನು ಕಲಿಸಿದರೆ ಅತಿ ಹೆಚ್ಚಿನ ಬಡ್ಡಿ ದರವನ್ನು ಪಡೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಯಾವಾಗ ತೆಗೆಯಬೇಕು?
ಮಗು ಹುಟ್ಟಿದ ಎರಡು ವರ್ಷದ ಒಳಗೆ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆದಲ್ಲಿ ಈ ಖಾತೆಯ ಉದ್ದೇಶದ ಸದುಪಯೋಗ ಆಗುತ್ತದೆ. ನಂತರದ ವರ್ಷಗಳಲ್ಲಿ ತೆರೆದ ಖಾತೆ ಉದ್ದೇಶದ ಉಪಯೋಗ ಬರುವುದು ಸ್ವಲ್ಪ ಕಷ್ಟ. ಮೊದಲು ನೀವು ಹೆಣ್ಣು ಮಗುವನ್ನು ಹೊಂದಿದ್ದರೆ, ಆ ಹೆಣ್ಣು ಮಗುವಿನ ಹೆಸರಿನಲ್ಲಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಎಸ್‌ಎಸ್‌ಎ ಖಾತೆ ತೆರೆಯಬೇಕು. ಮೊದಲ 15 ವರ್ಷಗಳ ಕಾಲ ಪ್ರತಿ ವರ್ಷ ಮೊತ್ತವನ್ನು ರೂ. 250 ರಿಂದ ರೂ. 1.5 ಲಕ್ಷದವರೆಗೆ ಕಟ್ಟಬೇಕು. ನಂತರ ನೀವು 16 ನೇ ವರ್ಷದಿಂದ ಠೇವಣಿ ಇಡಬೇಕಾಗಿಲ್ಲ 21ನೇ ವರ್ಷಕ್ಕೆ ಸರ್ಕಾರವು ಘೋಷಿಸುವ ಬಡ್ಡಿ ದರದಂತೆ ಖಾತೆಯು ವಾರ್ಷಿಕ ಬಡ್ಡಿಯನ್ನು ಗಳಿಸುತ್ತಾ ಹೋಗುತ್ತದೆ.
21 ವರ್ಷಗಳು ಪೂರ್ಣಗೊಂಡ ನಂತರ ಖಾತೆಯು ಸಂಪೂರ್ಣವಾಗಿ ಪಕ್ವವಾಗುತ್ತದೆ ಮತ್ತು ಆ ಹೆಣ್ಣು ಮಗು ದೊಡ್ಡವರಾದ ನಂತರ ಅಂದರೆ ಸಂಪೂರ್ಣವಾಗಿ ಮೆಚುರಿಟಿಯನ್ನು ಹೊಂದಿದ ಮೇಲೆ ಒಟ್ಟು ಮೊತ್ತವನ್ನು ಹಿಂಪಡೆಯಬಹುದು, ಇದರ ನಂತರ ಆ ಖಾತೆಯನ್ನು ಮುಚ್ಚಬೇಕು.
ಮೊದಲು ಈ ಖಾತೆಯನ್ನು ಯಾರು ತೆಗೆಯಬೇಕು ಎಂದು ತಿಳಿಯೋಣ?
ಹೆಣ್ಣು ಮಗುವಿನ ಪೋಷಕರು ಅಥವಾ ಕಾನೂನು ಪಾಲಕರು ಈ ಖಾತೆಯನ್ನು ತೆರೆಯಬೇಕು ಅಥವಾ ಹೆಣ್ಣು ಮಗುವನ್ನು ದತ್ತು ಪಡೆದ ಮಾಲೀಕರು ಆ ಹೆಣ್ಣು ಮಗುವಿನ ಉದ್ದಾರಕ್ಕಾಗಿ ಈ ಖಾತೆಯನ್ನು ತೆರೆಯುವುದು ಸೂಕ್ತ. ಇಲ್ಲಿ ಪಾಲಕರು ಆ ಹೆಣ್ಣು ಮಗುವಿನ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇರುವಾಗಲೇ ಈ ಖಾತೆಯನ್ನು ತೆರೆಯಬೇಕು.
ಈಗ ಒಂದು ಉದಾಹರಣೆ ತೆಗೆದುಕೊಂಡು ಈ ಯೋಜನೆ ಹೇಗೆ ಎಂದು ತಿಳಿಯೋಣ?
ಯೋಜನೆಯ ಪ್ರಾರಂಭ ದಿನಾಂಕ: 03-ಜುಲೈ-2020
ಯೋಜನೆಯ ಅಂತಿಮ ದಿನಾಂಕ : 03-ಜುಲೈ-2041
ನೀವು ಪ್ರತಿ ತಿಂಗಳು ₹500 ಕಟ್ಟಬೇಕು
ಒಟ್ಟು ಠೇವಣಿಗಳು : ರೂ.90,000.00 ಗಳಿಸಿದ ಬಡ್ಡಿ : ರೂ..165185 ಪಾವತಿಸಬೇಕಾದ ಒಟ್ಟು ಮೊತ್ತ : ರೂ.255185
“ಬೇಟಿ ಬಚಾವೋ, ಬೇಟಿ ಪಢಾವೋ” ಅಂದರೆ “ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವಿಗೆ ಶಿಕ್ಷಣ ನೀಡಿ”. ಈ ಉದ್ದೇಶವನ್ನು ಇಟ್ಟುಕೊಂಡು ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದು ತುಂಬಾ ಹೆಣ್ಣು ಮಕ್ಕಳ ಜೀವನೋದ್ಧಾರಕ್ಕಾಗಿ ಸಹಾಯವಾಗಿದೆ. ಕೆಳಗಿನ ಲಿಂಕ್ ಅನ್ನು ಬಳಸಿಕೊಂಡು ಈ ತಂತ್ರಾಂಶಕ್ಕೆ ಭೇಟಿ ಕೊಡಿ https://www-nsiindia-gov-in.translate.goog/InternalPage.aspx?Id_Pk=89&_x_tr_sch=http&_x_tr_sl=en&_x_tr_tl=kn&_x_tr_hl=kn&_x_tr_pto=tc
ಇದನ್ನೂ ಓದಿ :- ಅಕ್ರಮ ಸಕ್ರಮ ಯೋಜನೆ
ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಿಹಿ ಸುದ್ದಿ ಆ ಜಮೀನು ಈಗ ನಿಮ್ಮ ಹೆಸರಿಗೆ ಕೂಡಲೇ ಅರ್ಜಿ ಸಲ್ಲಿಸಿ