Breaking
Wed. Dec 18th, 2024
Spread the love

ಬೇಸಿಗೆ ರೈತರ ಬೆಳೆ ಸಮೀಕ್ಷೆ. E-KYC ಮೂಲಕ ಆಧಾರ್ ದೃಢೀಕರಿಸಿ. ಸೂಚನೆ: ಹೆಚ್ಚಿನ ವಿವರಗಳಿಗಾಗಿ ಬೆಳೆ ಸಮೀಕ್ಷೆ ಸಹಾಯವಾಣಿಗೆ ಕರೆಮಾಡಿ 8448447715.

ಕೆಳಗಿನ ರೀತಿಯಲ್ಲಿ ಮಾಡಿ

ಆಧಾರ್ನಲ್ಲಿರುವಂತೆ ಹೆಸರು Ananth Reddy P ಸಂಬಂಧ C/O Raghav Reddy P. ಹುಟ್ಟಿದ ದಿನಾಂಕ 06-12-1984. ವಿಳಾಸ No 1079/114th Main Chikkadevaraya Road Weavers Colony Pipeline Srinagar 560050. ಮೊಬೈಲ್ ಸಂಖ್ಯೆ 9241415151, ಲಿಂಗ M

FID No: FID1203000012366, ರೈತ ಹೆಸರು: AYYALI VENKATESH, ಗ್ರಾಮದ ಹೆಸರು ಸರ್ವೆ ನಂ, ಮಾಲೀಕ, ವಿಸ್ತೀರ್ಣ, ರದ್ದುಪಡಿ, ಸರ್ವೇ ನಂಬರ್ ಸೇರಿಸಿ, ಬೆಳೆ ಸಮೀಕ್ಷೆ ಆರಂಭಿಸು.

ಬೆಳೆ ಸಮೀಕ್ಷೆ ವರದಿ, ಅಪ್ಲೋಡ್ ಮಾಡಿ, ಮಾಹಿತಿ ನವೀಕರಿಸಿರಿ (ಫೂಟ್ಸ್ ದತ್ತಾಂಶದೊಂದಿಗೆ). ಜಮೀನಿನಲ್ಲಿ ಬೆಳದ ಬೆಳೆಯ ವಿವರಗಳನ್ನು ದಾಖಲಿಸಿ ನೀರಾವರಿ ವಿಧ ಆಯ್ಕೆ ಮಾಡಿ. ಮೊದಲನೇ ಛಾಯಾಚಿತ್ರ ಕಡ್ಡಾಯವಾಗಿ ಸೆರೆಹಿಡಿಯಬೇಕು ಮಾಹಿತಿ ಸೇರಿಸಿ.

ಕ್ರ.ಸಂ.1, ಬೆಳೆ, ಬೆಳೆ ವಿಸ್ತೀರ್ಣ, ಬೆಳೆ ವರ್ಗ ಪಾಳು, ಕೃಷಿಯೇತರ ಬಳಕೆ.

ಮಹಿಳೆಯರ ಉಜ್ವಲ್ ಭವಿಷ್ಯ ಹಾಗೂ ಭದ್ರತೆ ಪ್ರಧಾನಿ ಮೋದಿಯಿಂದ ಸಾಧ್ಯ

ದೇಶದಲ್ಲಿ ಮಹಿಳೆಯರ ಉಜ್ವಲ್ ಭವಿಷ್ಯ ಹಾಗೂ ಭದ್ರತೆ ಪ್ರಧಾನಿ ನರೇಂದ್ರ ಮೋದಿಯಿಂದ ಸಾಧ್ಯ ಎಂದು ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹೇಳಿದರು. ಅವರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ನವನಗರದ 28 ನೇ ವಾರ್ಡಿನ 8 ನೇ ಸೇಕ್ಟರ್‌ನಲ್ಲಿರುವ ನಗರಸಭೆ ಸದಸ್ಯೆ ಪ್ರಕಾಶ ಹಂಡಿ ಅವರ ಮನೆ ಆವರಣದಲ್ಲಿ ಹಮ್ಮಿಕೊಂಡ ಚುನಾವಣಾ ಪ್ರಚಾರದ ವಾರ್ಡ ಸಭೆಯನ್ನುದ್ದೇಶಿಸಿ ಮಾತನಾಡಿದರು.

ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲು ಲೋಕಸಭೆ ಮತ್ತು ರಾಜ್ಯಸಭೆಯಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿಗಾಗಿ ನಾರಿ ಶಕ್ತಿ ವಂದನಾ ಅಧಿನಿಯಮ ತರೂವ ಮೂಲಕ ಅವರ ಉಜ್ವಲ ಭವಿಷ್ಯ ಹಾಗೂ ಭದ್ರತೆಗೆ ಪ್ರಧಾನಿ ಮೋದಿ ಕಾರಣರಾಗಿದ್ದಾರೆ. ಅಲ್ಲದೆ ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದಡಿ ಹೆಣ್ಣುಮಕ್ಕಳ ವಿದ್ಯಾಭ್ಯಾಸ.ರಕ್ಷಣೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಅವರ ಹೆಸರಿನಲ್ಲಿ ಠೇವಣಿ ಇಡುವ ಪ್ರಧಾನಮಂತ್ರಿ ಸುಕನ್ಯಾ ಸಮೃದ್ಧಿ ಯೋಜನೆ ತಂದಿದ್ದಾರೆ.

ಮುಸ್ಲಿಂ ಹೆಣ್ಣು ಮಕ್ಕಳ ವ್ಯಯುಕ್ತಿಕ ಹಕ್ಕುಗಳ ರಕ್ಷಣೆಗಾಗಿ ಮತ್ತು ಅವರ ಗೌರವಯುತ ಬದುಕಿಗಾಗಿ ತ್ರವಳಿ ತಲಾಖೆ ನಿಷೇಧ, ಪ್ರತಿ ತಿಂಗಳ 9 ರಂದು ಎಲ್ಲಾ ಗರ್ಭಿಣಯರಿಗೆ ಪ್ರಧಾನ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನದಡಿ ಸಾರ್ವತ್ರಿಕವಾಗಿ ಸಮಗ್ರ ಮತ್ತು ಗುಣಮಟ್ಟದ ಪ್ರಸವ ಪೂರ್ವ ಆರೋಗ್ಯ ತಪಾಸಣೆ, ಅಗಸ್ಟ್ 2023 ರವರೆಗೆ 17.41.249 ಗರ್ಭಿಣಿಯರಿಗೆ ಪ್ರಸವಪೂವ ಆರೈಕೆ, ವೇತನ ಸಹಿತ ಹೇರಿಗೆ ರಜೆಯನ್ನು 12 ವಾರದಂದ 26ವಾರಕ್ಕೆ ಹೇಚ್ಚಳ ಮಾಡಲಾಗಿದೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಹೊಗೆ ಮುಕ್ತ ಮನೆ-ಆರೋಗ್ಯ ಯುಕ್ತ ಜೀವನಕ್ಕಾಗಿ 9.6 ಕೋಟಿ ಮನೆಗಳಿಗೆ ಉಚಿತ ಎಲ್.ಪಿ.ಜಿ ಸಂಪರ್ಕ ಕಲ್ಪಿಸಿದೆ.

ಮಹಿಳೆಯರಿಗೆ ಸಾಕಷ್ಟು ಯೋಜನೆಗಳನ್ನು ತಂದು ಅವರ ಬದುಕಿಗೆ ಕೇಂದ್ರ ಬಿಜೆಪಿ ಸರಕಾರ ಆಸರೆಯಾಗಿದೆ. ದೇಶದಲ್ಲಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿಗೆ ಮತ ನೀಡುವವಂತೆ ಮನವಿ ಮಾಡಿದರು. ಮಾಜಿ ಶಾಸಕ ಡಾ.ವೀರಣ್ಣ ಮಾವೀರ ದೇಶದಲ್ಲಿ ಚರಂತಿಮಠ ಮಾತನಾಡಿ ಹೊಸ 7 ಐಐಎಮ್, 7 ಐಐಟಿಗಳ ಸ್ಥಾಪನೆ, ಎಮ್ಸ್ ಗಳ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳ, ಹಾಗೂ ವಸಾಹತು ಶಾಹಿ ಮಾನಸಿಕತೆಗೆ ಅಂತ್ಯ ಹಾಡಲು, ಪ್ರಾದೇಶಿಕತೆಗೆ ಒತ್ತು ನೀಡಲು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಿದ್ದು ಅದರಿಂದ ನಮ್ಮ ಶಿಕ್ಷಣ ರಂಗದಲ್ಲಿ ಹೊಸ ಬೆಳಕು ಕಾಣಲಿದ್ದು ರಾಜ್ಯದಲ್ಲಿಯೂ ಕೂಡಾ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಬೇಕಿದೆ ಎಂದ ಅವರು ದೇಶ ಉಳಿಯಲು ಬಿಜೆಪಿಗೆ ಮತ ನೀಡುವುದು ಅವಶ್ಯ ಎಂದು ಜನರಿಗೆ ತಿಳಿಸಿ ಮತಯಾಚನೆ ಮಾಡಿದರು.

ಸಭೆಯಲ್ಲಿ ಪ್ರಕಾಶ ದಾಯಪುಲೆ, ಮೇಲಪ್ಪ ಬಾದೋಡಗಿ, ಚಂಬಣ್ಣ ಹಂಡಿ, ಬ್ಯಾಗ್ಯಶ್ರೀ ಹಂಡಿ, ರೇಖಾ ಉಂಕಿ,ಅಂಬರೀಷ ಕೊಳ್ಳಿ, ಮಲ್ಲಪ್ಪ ಮಮದಾಪುರ, ಅರವಿಂದ ಕಟ್ಟಿಮನಿ, ಮಂಜು ಪತ್ತಾರ, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಬೆಳಕು ನೀಡುವ, ಬಲ ತುಂಬುವ ಕಾರ್ಯ ಪ್ರತಿಯೊಬ್ಬರು ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸುವ ಮತ್ತು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮೃದ್ಧಿಯ ಬೆಳಕು ಹೆಚ್ಚಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಧಾರವಾಡ ನಗರದ ಕೆಸಿಸಿ ಬ್ಯಾಂಕ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಹಿಂದುಳಿ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಮತದಾರ ಜಾಗೃತಿಗಾಗಿ ಆಯೋಜಿಸಿದ್ದ ಪಂಜಿನೊಂದಿಕೆ ಚಾಲನೆ ನೀಡಿ, ಮಾತನಾಡಿದರು. ಮತದಾನ ನಮ್ಮ ಹೆಮ್ಮೆ. ಅದು ನಮ್ಮ ಅಭಿಮಾನದ ಸಂ- ಕೇತ. ಭಾರತೀಯರಾದ ನಾವು ಪ್ರತಿಯೊಬ್ಬರು ನಮ್ಮ ಸಂವಿದಾನ ನೀಡಿರುವ ಹಕ್ಕನ್ನು ತಪ್ಪದೇ ಚಲಾಯಿಸಬೇಕು. ಪ್ರತಿಯೊಬ್ಬರು ಚಲಾಯಿಸುವ ಮತ ದೇಶದ ಅಭಿವೃದ್ಧಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದರು.

ಮತದಾನವು ಪ್ರಜ್ವಲಿಸುವ ಜ್ಯೋತಿ ಇದ್ದಂತೆ, ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ ಯುವ ಸಮೂಹ ಮತ್ತು ಯುವ ಪಡೆ ಮತದಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ತಮ್ಮ ಕುಟುಂಬ ಸದಸ್ಯರು ಮತದಾನ ಮಾಡುವಂತೆ ಮಾಡುವ ಮೂಲಕ ಇನ್ನಷ್ಟು ಪ್ರಜಾಪ್ರಭುತ್ವ ಸದೃಢಗೊಳಿಸಲು ತಮ್ಮ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಆಗಿರುವ ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ., ಅವರು ಮಾತನಾಡಿ, ಜಿಲ್ಲೆಯ ಮತದಾನ ಹೆಚ್ಚಳಕ್ಕೆ ಎಲ್ಲರೂ ಕೈ ಜೋಡಿಸಬೇಕು. ಸುಶಿಕ್ಷಿತರ ಜಿಲ್ಲೆಯಲ್ಲಿ ಮತದಾನ ಕಡಿಮೆ ಆಗಬಾರದು. ಮತದಾನ ಹೆಚ್ಚಳಕ್ಕೆ ಜಿಲ್ಲೆಯ ಎಲ್ಲರೂ ಶ್ರಮಿಸಬೇಕು ಎಂದರು.

ಮತದಾನ ಜಾಗೃತಿಗಾಗಿ ವಿದ್ಯಾರ್ಥಿಗಳಿಂದ ಪಾಲಕರಿಗೆ ಓಲೆ, ಮತ ಚಿತ್ರ ಶಿಬಿರ, ಮಕ್ಕಳಿಗೆ ಸ್ಪರ್ಧೆ, ಜಾಥಾ ಮುಂತಾದವುಗಳ ಮೂಲಕ ಅರಿವು ಮೂಡಿಸಲಾಗಿದೆ, ಶಾಲಾ ಕಾಲೇಜು ವಿದ್ಯಾರ್ಥಿಗಳು ಮತಸೇವಕರಾಗಿ ತೊಡಗಿಸಿಕೊಳ್ಳಬೇಕು. ಪಂಜಿನ ಮೆರವಣಿಗೆ ಸಾರ್ವಜನಿಕರಲ್ಲಿ ಮತದಾನ ಅರಿವು ಹೆಚ್ಚಿಸುತ್ತದೆ ಎಂದು ಹೇಳಿದರು. ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಹಾಗೂ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರು ಮಾತನಾಡಿ, ಅವಳಿನಗರದಲ್ಲಿ ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಶೇ.85 ರಷ್ಟು ಮತದಾನ ಮಾಡಿಸುವ ಗುರಿ ಹೊಂದಲಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಮರ್ಗದರ್ಶನದಲ್ಲಿ ಅವಳಿನಗರದ ಪ್ರತಿ ವಾರ್ಡ್ ಮತ್ತು ಜನಸಂದಣಿ ಸ್ಥಳಗಳಲ್ಲಿ ಪಾಲಿಕೆ ಸಿಬ್ಬಂದಿಗಳು ವಿಭಿನ್ನವಾದ ಕಾರ್ಯಕ್ರಮಗಳ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ.

ಇನ್ನು ಹೆಚ್ಚುಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭಾ ಪಿ.. ಅವರು ವಂದಿಸಿದರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ ಕಾರ್ಯಕ್ರಮ ನಿರೂಪಿಸಿದರು. ಪಂಜಿನ ಮೆರವಣಿಗೆ ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ ಐಕಾನ್ ಜ್ಯೋತಿ ಸಣಕ್ಕಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಅಧೀನದ ಮೆಟ್ಟಿಕ ನಂತರದ ವಿವಿಧ ವೃತ್ತಿಪರ, ಪದವಿ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಭಾಗವಹಿಸಿದ್ದರು.

ಸಾರ್ವಜನಿಕರ ಗಮನ ಸೆಳೆದ ದಿವ್ಯ ಪಂಜಿನ ಮೆರವಣಿಗೆ ಜಾಥಾ ಕಾರ್ಯಕ್ರಮವು ಮಾರುಕಟ್ಟೆಯಲ್ಲಿ ರಾಣಾ ಪ್ರತಾಪ ಸಿಂಹ ಸರ್ಕಲ್. ಅಂಬೇಡ್ಕರ ಪ್ರತಿಮೆ ಬಳಿಯಿಂದ ಆಲೂರು ವೆಂಕಟರಾವ ವೃತ್ತದಲ್ಲಿ ಮಾನವ ಸರಪಳಿ ಸೃಷ್ಟಿಸಿ, ಜನರ ಗಮನ ಸೆಳೆಯಿತು. ಜಾಥಾದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ನೆರೆದ ಸಾರ್ವಜನಿಕರಿಗೆ ಮತದಾನ ದಿನದಂದು ತಪ್ಪದೇ ಮತದಾನ ಮಾಡವಂತೆ ಪ್ರತಿಜ್ಞಾ ಬೋಧಿಸಲಾಯಿತು. ಜಾಥಾವು ಮಹಾನಗರ ಪಾಲಿಕೆ ಆವರಣದಲ್ಲಿ ಮುಕ್ತಾಯಗೊಂಡಿತು.

Related Post

Leave a Reply

Your email address will not be published. Required fields are marked *