ಆತ್ಮೀಯ ರೈತ ಬಾಂಧವರೇ, ಸೂರ್ಯಕಾಂತಿ ಬೆಳೆಯ ಬೆಂಬಲ ಬೆಲೆಯನ್ನು ಸರ್ಕಾರವು ಬಿಡುಗಡೆ ಮಾಡಿದೆ. ಒಂದು ಕ್ವಿಂಟಲ್ ಗೆ 6760 ರೂಪಾಯಿ ಗಳನ್ನು ಸರ್ಕಾರವು ನಿರ್ದಿಷ್ಟ ಬೆಲೆಯೆಂದು ಘೋಷಣೆ ಮಾಡಿದೆ. ಆದಕಾರಣ ಈಗ ಸರ್ಕಾರವು ಬೆಂಬಲ ಬೆಲೆಯಲ್ಲಿ ಈ ಸೂರ್ಯಕಾಂತಿ ಬೀಜಗಳನ್ನು ಕರೆದಿ ಮಾಡಲು ಪ್ರಾರಂಭ ಮಾಡಿದೆ. ಕೊಡಲೇ ನೀವು ನಿಮ್ಮ ಊರಿನ ಸೊಸೈಟಿಗೆ ಭೇಟಿ ನೀಡಿ ನಿಮ್ಮ ಊರಿನಲ್ಲೂ ಕೂಡ ಈಗ ನಿಮ್ಮ ಬೀಜಗಳನ್ನು ತೆಗೆದುಕೊಳ್ಳುತ್ತಾರೋ ಎಂದು ಖಚಿತಪಡಿಸಿಕೊಳ್ಳಿ.
ಈಗ ಯಾವ ಊರಿನಲ್ಲಿ ಬೆಂಬಲ ಬೆಲೆ ತೆಗೆದುಕೊಳ್ಳಲು ಪ್ರಾರಂಭವಾಗಿದೆ?
ಈಗ ಕುಕನೂರು ಯಲಬುರ್ಗಾ ಮತ್ತು ಕೆಲವು ಕಡೆ ಈಗಾಗಲೇ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರದ ಆದೇಶದ ಅನ್ವಯ 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ಶೀಘ್ರದಲ್ಲಿ ಜಿಲ್ಲೆಯ ಮೂರುಕಡೆ ಸೂರ್ಯಕಾಂತಿ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭ ಮಾಡಲಾಗುವುದು.
ಎಫ್.ಎ.ಕ್ಯು ಗುಣಮಟ್ಟದ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಲಿಗೆ 6,760 ರೂಪಾಯಿಗಳಂತೆ ಎಕರಿಗೆ ಗರಿಷ್ಠ 3 ಕ್ವಿಂಟಲ್ ಒಬ್ಬ ರೈತರಿಂದ ಗರಿಷ್ಠ 15 ವಿಂಟರ್ಗಳಂತೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಯಂತೆ, ಜಿಲ್ಲೆಯ ರೈತರಿಂದ ಖರೀದಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ತೀರ್ಮಾನಿಸಿದ್ದು, ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಕೆಓಎಫ್ ಅಡಿಯಲ್ಲಿ ಓಜಿಸಿಎಸ್ ಕೇಂದ್ರ ಅಳವಂಡಿಯಲ್ಲಿ, ಯಲಬುರ್ಗಾ ತಾಲೂಕಿನ ಕೆಓಎಫ್ ಅಡಿಯಲ್ಲಿ ಓಜಿಸಿಎಸ್ ಕೇಂದ್ರ ಬೇವೂರಿನಲ್ಲಿ, ಕುಕನೂರು ತಾಲೂಕಿನ ಕೆಓಎಫ್ ಅಡಿಯಲ್ಲಿ ಓಜಿಸಿಎಸ್ ಕೇಂದ್ರ ಮಂಡಲಗಿರಿ ಗ್ರಾಮದಲ್ಲಿ ಸೂರ್ಯಕಾಂತಿ ಮಾತ್ರ ಖರೀದಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಟಾಸ್ ಫೋರ್ಸ್ ಸಮಿತಿಯ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊರಗಡೆ ಮಾಡುವುದಕ್ಕಿಂತ ಬೆಂಬಲ ಬೆಲೆಯಲ್ಲಿ ಮಾರುವುದಿಂದ ನಿಮಗೆ ಅತಿ ಹೆಚ್ಚು ಲಾಭವಿದ್ದರೆ. ಆದಕಾರಣ ಕೂಡಲೇ ನೀವು ಸೂರ್ಯಕಾಂತಿ ಬೆಲೆಯನ್ನು ಬೆಂಬಲ ಬೆಲೆಯಲ್ಲಿ ಮಾರಬೇಕಾಗಿ ವಿನಂತಿ.
ಸರ್ಕಾರಿ ಜಮೀನು ಒತ್ತುವರಿಗೆ ಬ್ರೇಕ್ ಹಾಕಿದ ಸರ್ಕಾರ*
ಜೀವ ಜಲ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆಸಲು 3 ಲಕ್ಷ ಸಹಾಯಧನ*
ಎರಡು ದಿನದ ಅಣಬೆ ಕೃಷಿ ತರಬೇತಿ ಅಕ್ಟೋಬರ್ 5 ನೊಂದಣಿ ಮಾಡಲು ಕೊನೆಯ ದಿನಾಂಕ*