1. ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ
2. ಕಾರ್ಡ್ ಚೀಟಿ ತಿದ್ದುಪಡಿಗೆ ಶೀಘ್ರ ಅವಕಾಶ
3. ವೈದ್ಯಕೀಯ ಚಿಕಿತ್ಸೆಗಾಗಿ ಆಂಧ್ರ ಮಾದರಿ ಕಾರ್ಡ್
4. ದುಡ್ಡಿನ ಬದಲಿಗೆ ಸೆಪ್ಟೆಂಬರ್‌ನಿಂದ ಮತ್ತೈದು ಕೆಜಿ ಅಕ್ಕಿ
5. ಕಾರ್ಡ್ ದಾರರ ಅನರ್ಹ ಬಿಪಿಎಲ್ ಪತ್ತೆಗೆ ತನಿಖೆ
ಪಡಿತರ ಚೀಟಿಗೆ ಸಂಬಂಧಿಸಿದಂತೆ ಇರುವ ಎಲ್ಲ ಸಮಸ್ಯೆ-ಸವಾಲುಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲು ನಿರ್ಧರಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಐದು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ, ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾಹಿತಿ ನೀಡಿದ್ದಾರೆ.
ಹೊಸದಾಗಿ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ ಹೊ ಲಕ್ಷ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಕಾರ್ಡ್ ವಿತರಿಸಲು ನಿರ್ಧರಿಸಲಾಗಿದೆ. ಚುನಾವಣೆ ಕಾರಣದಿಂದ ಹೊಸ ಪಡಿತರ ಚೀಟಿ ವಿತರಣೆ ಕಾರ್ಯ ಸ್ಥಗಿತಗೊಂಡಿದ್ದು, ಜುಲೈ ಅಂತ್ಯಕ್ಕೆ ಒಟ್ಟು 2,95,986 ಅರ್ಜಿ ಬಾಕಿ ಉಳಿದಿವೆ. ಪರಿಶೀಲಿಸಲಾಗುವುದು. ಬಳಿಕ ಅರ್ಹ ಫಲಾನುಭವಿಗಳ ಮಾಹಿತಿಯನ್ನು ಜಿಲ್ಲೆಗಳಿಂದ ಪಡೆದು ನಂತರ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದು ಹೊಸ ಕಾರ್ಡ್ ವಿತರಣೆಗೆ ಕ್ರಮ ವಹಿಸಲಾಗುವುದು.
ತುರ್ತು ವೈದ್ಯಕೀಯ ಕಾರಣಗಳಿಗೆ ಹೊಸ ಪಡಿತರ ಚೀಟಿ ವಿತರಣೆಗೆ ಅನುಮತಿ ನೀಡಲಾಗುವುದು. ಆರೋಗ್ಯಕ್ಕಾಗಿ ಕಾರ್ಡ್: ಆಂಧ್ರಪ್ರದೇಶ ಮಾದರಿಯಲ್ಲಿ ಆರೋಗ್ಯ ಚಿಕಿತ್ಸೆಗೆ ಸೀಮಿತವಾಗಿ ಬಿಪಿಎಲ್ ಕಾರ್ಡ್ ವಿತರಿಸಲು ಚಿಂತನ ನಡೆಸಲಾಗಿದೆ ಎಂದು ಸಚಿವ ಮುನಿಯಪ್ಪಹಳಿದರು. ಆ ರಾಜ್ಯದಲ್ಲಿ ಪಡಿತರ ಪಡೆಯುವವರಿಗೆ ‘ಎ’ ಕಾರ್ಡ್ ಹಾಗೂ ವೈದ್ಯಕೀಯ ಚಿಕಿತ್ಸೆಯಷ್ಟೇ ಬಯಸುವವರಿಗೆ ‘ಬಿ’ ಕಾರ್ಡ್ ನೀಡುವ ವ್ಯವಸ್ಥೆ ಇದೆ. ಹಾಗಾಗಿ ಒಂದು ತಂಡವನ್ನು ಅಂಧಕ್ಕೆ ಕಳುಹಿಸಿ ವರದಿ ಪಡೆದು ಮುಂದಿನ ಕ್ರಮ ವಹಿಸಲು ನಿರ್ಧರಿಸಲಾಗುವುದು.
ಅನರ್ಹರ ಪತ್ತೆಗೆ ತನಿಖೆ
ರಾಜ್ಯದಲ್ಲಿ ಶ್ರೀಮಂತರು, ಸ್ಥಿತಿವಂತರು ಸೇರಿದಂತೆ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದರೆ ಆ ಬಗ್ಗೆ ಸಮಗ್ರ ತನಿಖೆ ನಡೆಸಲು ಸರಕಾರ ಗಂಭೀರ ಚಿಂತನೆ ನಡೆಸಿದೆ. ಹಾಗಾಗಿ ಐಷಾರಾಮಿ ಬಿಪಿಎಲ್ ಸೌಲಭ್ಯ ಅನುಭವಿಸುತ್ತಿದ್ದ ಕಾರುಗಳನ್ನು ಹೊಂದಿದ್ದೂ ರುವ ಅನರ್ಹರಿಗೂ ಇದರಿಂದ ಬಿಸಿ ತಟ್ಟುವ ನಿರೀಕ್ಷೆಯಿದೆ. ಬಡವರಿಗೆ ನೆರವಾಗಲು ಬಿಪಿಎಲ್ ಕಾರ್ಡ್ ವಿತರಿಸಿ ಉಚಿತವಾಗಿ ಪಡಿತರ ನೀಡಲಾಗುತ್ತಿದೆ. ಆದರೆ ಶ್ರೀಮಂತರು ಸೇರಿದಂತೆ ಅನರ್ಹರು ಕಾರ್ಡ್ ಪಡೆದಿರುವ ದೂರುಗಳ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲಾಗುವುದು. ಅಂತಿಮ ನಿರ್ಧಾರ ತೆಗೆದುಕೊಂಡ ಬಳಿಕ ತನಿಖೆ ಸ್ವರೂಪದ ಬಗ್ಗೆ ತಿಳಿಸಲಾಗುವುದು ಎಂದು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
*ತೊಗರಿಯಲ್ಲಿ ಬಲೆ ಕಟ್ಟುವ ಕೀಟ ಹತೋಟಿ*
ಬೆಳೆಗಳಲ್ಲಿ ಕೀಟಪೀಡೆ ಹೆಚ್ಚಾಗಲು ಕಾರಣಗಳು, ಇಲ್ಲಿದೆ ಸಂಪೂರ್ಣ ಮಾಹಿತಿ
ಕೇವಲ ಆರು ತಿಂಗಳಿಗೆ ಎರಡು ಕೆಜಿ ಬರುವಂತಹ ಮೀನು ಮರಿಗಳು ಇವರ ಬಳಿ ಸಿಗುತ್ತದೆ