ಆತ್ಮೀಯ ರೈತ ಬಾಂಧವರೇ,
ಆಧಾರ್ ಲಿಂಕ್ ಆದ ರೈತರಿಗೆ ಬೆಳೆಹಾನಿ ಪರಿಹಾರ,ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ ಲಿಂಕ್ ಮಾಡಿರಿ. ರಾಜ್ಯದ ರೈತರಿಗೆ ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ ರಾಜ್ಯ ಸರ್ಕಾರದಿಂದ 3000 ರೂಪಾಯಿ ಒದಗಿಸಲಾಗಿದೆ. ಆಧಾರ್ ಲಿಂಕ್ ಮಾಡಿದ ನಂತರ ಪರಿಹಾರದ ಹಣ ರೈತರಿಗೆ ತಲುಪಲಿದೆ. ಹಾಗಾಗಿ ಕೂಡಲೇ ಆಧಾರ್ ಗೆ ಲಿಂಕ್ ಮಾಡುವುದು ಬಹುಮುಖ್ಯ ವಾಗಿದೆ.ಆಧಾರ್ ಲಿಂಕ್ ಆಗದವರ ಪಟ್ಟಿಯನ್ನು ಈಗ ಕೃಷಿ ಇಲಾಕೆ ಬಿಡುಗಡೆ ಮಾಡಿದೆ. ಅದನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳುವುದು ಹೇಗೆ ಎಂದು ಈ ಕೆಳಗೆ ನೋಡಿರಿ.
ಮೊದಲಿಗೆ ಈ ಕೆಳಗೆ ಕಾಣುತ್ತಿರುವ ಲಿಂಕ್ ಅನ್ನು ಪ್ರೆಸ್ ಮಾಡಿರಿ.
https://fruitspmk.karnataka.gov.in/MISReport/AadharNotSeededReport.aspx
ನಂತರ ನಿಮ್ಮ ಊರನ್ನು ಸೆಲೆಕ್ಟ್ ಮಾಡಿಕೊಳ್ಳಿ. ಮಾಡಿದಾಗ ಈ ಕೆಳಗೆ ಕಾಣುತ್ತಿರುವ ಹಾಗೆ ನಿಮ್ಮ ಹೆಸರುಗಳು ಲಭ್ಯವಾಗುತ್ತವೆ.
ರೈತರ ಮಕ್ಕಳು ಕೃಷಿ ವಿಜ್ಞಾನಿಯಾಗಲಿ : ಕುಲಪತಿ ಪಿ.ಎಲ್. ಪಾಟೀಲ
ರೈತರ ಮಕ್ಕಳು ಪಿಯುಸಿ. ನಂತರ ಬಿಎಸ್‌ಸಿ.ಯಲ್ಲಿ ಪಿ.ಸಿ.ಎಂ. ಜತೆ ಕಡ್ಡಾಯವಾಗಿ ಬಯಾಲಾಜಿ ವಿಷಯ ಪಡೆದು ವಿದ್ಯಾಭ್ಯಾಸ ಮಾಡುವವರಿಗೆ ಶೇ.50. ಸ್ಥಾನ ಮೀಸಲುವಿದೆ. ಕೃಷಿಕರ ಮಕ್ಕಳು ವಂಚಿತರಾಗದೇ ಇದರ ಜ್ಞಾನ ತಟ್ಟಬೇಕು. ಎಂಬ ನಮ್ಮ ಹಂಬಲವಿದೆ. ಎಂದು ಧಾರವಾಡ ಕೃಷಿ ವಿ.ವಿ.ದ ಕುಲಪತಿ ಪಿ.ಎಲ್. ಪಾಟೀಲ ಹೇಳಿದರು. ಉತ್ತರ ಕರ್ನಾಟಕದ 7.ಜಿಲ್ಲೆಗಳಲ್ಲಿ 26. ಕೃಷಿ ಸಂಶೋಧನಾ ಕೇಂದ್ರ, 26.ಸಮನ್ವಯ ಸಂಶೋಧನಾ ಯೋಜನಾ ಕೇಂದ್ರಗಳ ಮೂಲಕ ವಿವಿಧ ಬೆಳೆಗಳ ಮೇಲೆ ಹೊಸ ಹೊಸ ತಳಿ ಪರೀಕ್ಷೆ ಕ್ಷೇತ್ರೋತ್ಸವ ಮಾಡಿ ವಿಜ್ಞಾನಿಗಳ ಜತೆ ಬೀಜೋಪಚಾರ, ಕಳೆನಾಶಕ ರೋಗ ಬರದಂತೆ ತಡೆಗಟ್ಟಲು ನಿರಂತರ ಸಂಶೋಧನೆ ನಡೆಸಿ ರೈತರ ಹೊಸ ಸಂಶೋಧನೆ ಕ್ರೋಡಿಕರಿಸಿ ರೈತರಿಗೆ ಮಾಹಿತಿ ಒದಗಿಸುವ ಕೆಲಸ ನಡೆದಿದೆ. ಸೆಪ್ಟೆಂಬರ ತಿಂಗಳಲ್ಲಿ 4.ದಿನ ರೈತರ ಜಾತ್ರ ಹಮ್ಮಿಕೊಂಡು ಅಂದಾಜು 16.ಲಕ್ಷ ರೈತರಿಗೆ ಕೃಷಿ ಕ್ಷೇತ್ರದಲ್ಲಿ ಅನುಕೂಲ ಆಗುವ ಹೊಸ ತಂತ್ರಜ್ಞಾನ ಅಳವಡಿಕೆ ವಿವಿಧ ಸಾಧಕ-ಬಾದಕಗಳ ನಿವಾರಣೆ ವಿ.ವಿ.ದಿಂದ ನಡೆಯಲಿದೆ ಎಂದು ಪಾಟೀಲ ಹೇಳಿದರು.ಧಾರವಾಡದ ಎಆಯ್‌ಸಿಆರ್.ಪಿ. ಮುಖ್ಯಸ್ಥ ಡಾ.ಸೋಮನಗೌಡ ಜಿ. ಹಾಗು ವಿಜಯಪೂರದ ಕೃಷಿ ವಿಸ್ತರಣಾಧಿಕಾರಿ ಆರ್.ಬಿ. ಬೆಳ್ಳಿ ಮಾತನಾಡಿ, ಕಬ್ಬು ಬೆಳೆ ಒಂದೇ ಮುಖ್ಯವಲ್ಲ, ಸೋಯಾಬಿನ್, ತೊಗರಿ, ಗೋವಿನ ಜೋಳ ಹಾಗು ಪರ್ಯಾಯ ಬೆಳೆಗಳಾದಅರ್ಧದಷ್ಟು ಜಾನುವಾರುಗಳಿಲ್ಲ. ಕಾರಣ ಬದಲಾದ ನಮ್ಮ ಬೇಸಾಯ ಪದ್ಧತಿ ಎಂದು ಅವರು ವಿವರಿಸಿದರು. ಅಧ್ಯಕ್ಷತೆ ಧಾರವಾಡ ಕೃ.ವಿ.ವಿ.ದ ವಿಸ್ತರಣಾ ನಿರ್ದೆಶಕ ಎಸ್.ಎಸ್. ಅಂಗಡಿ, ಅತಿಥಿರಾಗಿ ಸಂಶೋಶಧನಾ ನಿರ್ದೆಶಕ ಡಿ.ಬಿ. ಸಾರವಾಡ, ಬಸವರಾಜ ಮಳಲಿ, ಶ್ರೀಕಾಂತ ಗುಜ್ಜನ್ನವರ, ಸಂತೋಷ ಪಾಟೀಲ, ನಾಗಪ್ಪ ಅಂಬಿ,ಡಾ.ಸೋಮನಗೌಡ, ವಿಜ್ಞಾನಿ ಸುಧಾ ಎಸ್. ಭವ್ಯ ಎಂ.ಆರ್. ಆರ್.ವಿ. ನಂದಗಾಂವಿ, ಡಾ.ಎಸ್.ಬಿ. ದೊಡಮನಿ ಇತರರಿದ್ದರು.
ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಕೇಂದ್ರ ಸರ್ಕಾರದಿಂದ ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲೆಯ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ನೀಡುವ ರಾಷ್ಟ್ರಪ್ರಶಸ್ತಿಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ದಿನಾಂಕ : 31-07-2024 ಕೊನೆಯ ದಿನವಾಗಿದ್ದು, 2 ಪಾಸ್ ಪೋರ್ಟ ಅಳತೆಯ ಭಾವಚಿತ್ರ (ವ್ಯಕ್ತಿ ವಿಭಾಗ), ಅರ್ಜಿದರರ ವ್ಯಕ್ತಿ, ಸಂಸ್ಥೆಗಳಿಂದ ವಿವರ ಹಾಗೂ ಸಾಧನೆಗಳ ಸಾರಾಂಶ ಪೂರಕ ದಾಖಲೆ (1ಪುಟಕ್ಕೆ ಮೀರದಂತೆ) ಹಾಗೂ ಇತರೆ ದಾಖಲೆಗಳೊಂದಿಗೆ ಅರ್ಜಿಯನ್ನು www.awards.gov.in & www.depwd.gov. in ವೆಬ್‌ಸೈಟ್‌ನಲ್ಲಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ತಮ್ಮ ಎಲ್ಲಾ ದಾಖಲಾತಿಗಳನ್ನು ಭರ್ತಿ ಮಾಡಿ ಸಲ್ಲಿಸಿದ ಅರ್ಜಿ ಮತ್ತು ದಾಖಲೆಗಳ ಪ್ರತಿಯನ್ನು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಪಂಚಾಯತ್ ಆವರಣ ವಿಜಯಪುರ ಕಚೇರಿಗೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ದೂ: 08352-796060 ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ಧೈವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳೆಯಿಂದ ನಳನಳಿಸುತ್ತಿರುವ ಬೆಳೆ
ಕಳೆದ ವಾರ ಸುರಿದ ಮಳೆಯಿಂದ ತಾಲ್ಲೂಕಿನ ಮಳೆಯಾಶ್ರಿತ ಭೂಮಿಯಲ್ಲಿನ ಬೆಳೆಗಳು ನಳನಳಿಸುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ತಿಂಗಳಿಂದ ಮಳೆಯಾಗದೆ ಮಳೆಯಾಶ್ರಿತ ಭೂಮಿಯಲ್ಲಿ ಬೆಳೆದು ಬಾಡುವ ಹಂತ ತಲುಪಿದ್ದ ತೊಗರಿ, ಸಜ್ಜೆ, ನವಣೆ, ಹತ್ತಿ, ಔಡಲ ಬೆಳೆಗಳಿಗೆ ಜೀವಕಳೆ ಬಂದಿದೆ.ಬಿಸಿಲಿನ ಪ್ರಖರತೆ ಪರಿಣಾಮ ಮಳೆಯಾಶ್ರಿತ ಭೂಮಿಯಲ್ಲಿ ಬೆಳೆದಿದ್ದ ತೊಗರಿ, ಹತ್ತಿ, ಸಜ್ಜೆ, ಬಾಡತೊಡಗಿದ್ದವು. ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಮತ್ತು ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ದೇವರಾಜ್ ರೈತರ ಜಮೀನುಗಳಿಗೆ ಭೇಟಿನೀಡಿ ಬೆಳೆಯ ಮಧ್ಯದ ಸಾಲುಗಳಲ್ಲಿ ಹರಗಿ ತೇವಾಂಶ ಹೆಚ್ಚಿಸಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.