Breaking
Tue. Dec 17th, 2024

ಸರ್ಕಾರವು 113 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ

Spread the love

2023ನೇ ಸಾಲಿನ ನೈಋತ್ಯ ಮುಂಗಾರು ರಾಜ್ಯಕ್ಕೆ ದಿನಾಂಕ: 08.06,2023 ರಂದು ಪ್ರವೇಶಿಸಿ ರಾಜ್ಯದ ಎಲ್ಲೆಡೆ 14 ದಿನಗಳಲ್ಲಿ ವ್ಯಾಪಿಸಿತು. ಮುಂಗಾರು ಪ್ರವೇಶ ಮತ್ತು ವ್ಯಾಪಿಸಲು ಸಾಮಾನ್ಯ ದಿನಾಂಕಕ್ಕಿಂತ ಒಂದು ವಾರ ತಡವಾಗಿದೆ. ಜೂನ್ ಮಾಣೆಯಲ್ಲಿ ಮುಂಗಾರು ದುರ್ಬಲಗೊಂಡು ವಾಡಿಕೆಗಿಂತ ಶೇ.56% ಮಳೆ ಕೊರತೆ ಉಂಟಾಯಿತು ಜುಲೈ ಮಾಹೆಯಲ್ಲಿ ಮುಂಗಾರು ಚುರುಕುಗೊಂಡು ವಾಡಿಕೆಗಿಂತ ಶೇ.29% ಹೆಚ್ಚು ಮಳೆಯಾಗಿದ್ದು, ಈ ಮಳೆಯು ಕೇವಲ ಒಂದು ವಾರ ಮಾತ್ರ ಕೇಂದ್ರೀಕೃತವಾಗಿತ್ತು.

ಆಗಸ್ಟ್ ಮಾಹೆಯಲ್ಲಿ ವಾಡಿಕೆಗಿಂತ ಶೇ.73% ಮಳೆ ಕೊರತೆಯಾಗಿದ್ದು, ಕಳೆದ 125 ವರ್ಷಗಳಲ್ಲಿ ಅತಿ ಕಡಿಮ ಮಳೆ ದಾಖಲಾಗಿರುವುದು ಕಂಡು ಬಂದಿರುತ್ತದೆ. ರಾಜ್ಯದ ಮಳೆ, ಬೆಳೆ, ಜಲಾಶಯಗಳ ಸಂಗ್ರಹಣಾ ಅಂತರ್ಜಲ, ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಕುರಿತು ಕಾಲಕಾಲಕ್ಕೆ, ರಾಜ್ಯ, ಹವಮಾನ ಅವಲೋಕನಾ ಸಮಿತಿಯು ಪರಿಶೀಲಿಸಿದ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಸರ್ಕಾರದ ಮುಖ್ಯ ಕಾರ್ಯದರ್ಶಿರವರು ಅವಲೋಕಿಸಿರುತ್ತಾರೆ.

ಕೇಂದ್ರ ಸರ್ಕಾರದ ಬರ ಕೈಪಿಡಿ-2020 ರನ್ನಯ ಕಡ್ಡಾಯ ಮತ್ತು ತತ್ಪರಿಣಾಮ ಸೂಚಕಗಳ ನಿರಂತರ ಮೇಲ್ವಿಚಾರಣೆಯ ಆಧಾರದ ಮೇಲೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ದಿನಾಂಕ:01-06-2023 ರಿಂದ 19.08.2023ಅವಧಿಯ ವರದಿಯಂತೆ ರಾಜ್ಯದಲ್ಲಿ 487 ಮಿ.ಮಿ. ಮಳೆಯಾಗಿದ್ದು, ವಾಡಿಕೆ ಮಳೆ (635 ಮಿ.ಮಿ.)ಗೆ ಹೋಲಿಸಿದಾಗ ಶೇ.23% ರಷ್ಟು ಮಳೆ ಕೊರತೆ `ಕಂಡು ಬಂದಿರುತ್ತದೆ, ಬರ ಕೈಪಿಡಿ-2020 ರ ಮಾರ್ಗಸೂಚಿಯನ್ವಯ ಬರ ಘೋಷಿಸಲು ಸೂಚಿಸಿರುವ ಕಡ್ಡಾಯ ಮಾನದಂಡಗಳಾದ ಶೇ.60%ಕ್ಕಿಂತ ಹೆಚ್ಚು ಮಳೆ ಕೊರತೆ ಅಥವಾ ಸತತ ಮೂರು ವಾರಗಳಲ್ಲಿ ಶುಷ್ಕ, ವಾತಾವರಣ ಹಾಗೂ ತತ್ಪರಿಣಾಮ ಮಾನದಂಡಗಳಾದ ತೇವಾಂಶ ಕೊರತೆ, ಉಪಗ್ರಹ ಆಧಾರಿತ ಬೆಳ ಸೂಚ್ಯಾಂಕ, ಬೆಳೆ ಬಿತ್ತನೆ ಪ್ರದೇಶ ಹಾಗೂ ಜಲಸಂಪನ್ಮೂಲ ಸೂಚ್ಯಾಂಕದಲ್ಲಿನ ತೀವ್ರತೆಯನ್ನು ಆಧರಿಸಿ ಮೌಲ್ಯಮಾಪನ ಮಾಡಿ ಒಟ್ಟಾರ 113 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿದೆ.

ದಿನಾಂಕ:22.08.2023 ರಂದು ನಡೆದ ಸಂಪುಟ ಉಪಸಮಿತಿಯ ಸಭೆಯು ಬರ ಕೈಪಿಡಿ-2020 ರ ಪ್ಯಾರಾ 3.26 ರ ನಿಬಂಧನಗಳನ್ನಯ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಯ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಅಧಿಕಾರಿ/ಇತರೆ ಸಿಬ್ಬಂದಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿ ಬರ ಪರಿಸ್ಥಿತಿ ಕಂಡುಬಂದ 113 ತಾಲೂಕುಗಳ 1519 ಗ್ರಾಮಗಳನ್ನು Random ಆಗಿ ಗುರುತಿಸಿ ಇವುಗಳಲ್ಲಿನ ಒಟ್ಟು 14,228 ಪ್ಲಾಟ್‌ಗಳಲ್ಲಿ ಮೊಬೈಲ್ App ಮೂಲಕ ಬೆಳೆ ಹಾನಿ ಕ್ಷೇತ್ರ ದೃಢಿಕರಣ (Ground Truthing)ನ್ನು ಕೈಗೊಂಡಿರುತ್ತಾರೆ. ಅದರಂತೆ ಮೇಲೆ (3)ರಲ್ಲಿ ಓದಲಾದ ದಿನಾಂಕ: 25.08.2023 ರಲ್ಲಿ ಸುತ್ತೋಲೆಯನ್ನು ಹೊರಡಿಸಿ ಬೆಳೆ ಸಮೀಕ್ಷೆ ನಡೆಸುವಂತೆ ತಿಳಿಸಿದ. ಅದರಂತೆ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವ 62 ತಾಲೂಕುಗಳನ್ನು ನೀವು ಬರ ಹಾಗೂ 33% -50%ರಷ್ಟು ಬೆಳೆ ನಷ್ಟವನ್ನು ವರದಿ ಮಾಡಿರುವ 51 ತಾಲ್ಲೂಕುಗಳು ಸಾಧಾರಣ ಬರ ಎಂದು ವರ್ಗೀಕರಿಸಲಾಗಿದೆ.

ದಿನಾಂಕ:1-6-2023 ರಿಂದ 02.09.2023 ಅವಧಿಯಲ್ಲಿ ರಾಜ್ಯದಲ್ಲಿ 512 ಮಿಮಿ ಮಳೆಯಾಗಿದ್ದು, ವಾಡಿಕೆ ಮಳೆ (701ಮಿಮಿಗೆ ಹೋಲಿಸಿದಾಗ ಶೇ.27%ರಷ್ಟು ಮಳೆಕೊರತೆ ಕಂಡು ಬಂದಿದ, ಬರ ಮಾನದಂಡಗಳನ್ನು ಪರಿಗಣಿಸಿ ಹೊಸದಾಗಿ 83 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿರುವ ತಾಲೂಕುಗಳೆಂದು KSNDMC ಸಂಸ್ಥೆಯು ವರದಿ ನೀಡಿದೆ. ಈ ಬಗ್ಗೆ ದಿನಾಂಕ: 04-09-2023ರಂದು ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈಗಾಗಲೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಸಾಧಾರಣ ಬರವೆಂದು ಗುರುತಿಸಲಾದ 51 ತಾಲ್ಲೂಕುಗಳ ಜೊತೆಗೆ ದಿನಾಂಕ: 02-9-2023 ವರದಿಯನುಸಾರ ರಾಜ್ಯದಲ್ಲಿ 83 ತಾಲ್ಲೂಕುಗಳು ಸೇರಿ 134 ತಾಲೂಕುಗಳಲ್ಲಿ ಬೆಳೆ ಹಾನಿ ಕ್ಷೇತ್ರ ದೃಢೀಕರಣ (Ground Truthing) ಕೈಗೊಳ್ಳುವಂತೆ ಹಾಗೂ ಸದರಿ ಪ್ರಸ್ತಾವನೆಯ ಬಗೆ, ಸಚಿವ ಸಂಪುಟಕ್ಕೆ ಮಂಡಿಸುವಂತೆ ತೀರ್ಮಾನಿಸಲಾಯಿತು. ಅದರಂತ ಮೇಲೆ 3)ರಲ್ಲಿ ಓದಲಾದ ದಿನಾಂಕ: 04.09.2023 ರಲ್ಲಿ ಸುತ್ತೋಲೆಯನ್ನು ಹೊರಡಿಸಿ ಬೆಳೆ ಸಮೀಕ್ಷೆ ನಡೆಸುವಂತೆ ತಿಳಿಸಿದೆ.

ಕುಸುಬೆ ಹೂವಿನ ಚಹಾ ಸೇವನೆ ಲಾಭಗಳು, ಹೃದಯ ರೋಗ ಮತ್ತು ಶ್ವಾಸಕೋಶ ತೊಂದರೆಗೆ ಇಲ್ಲಿದೆ ಔಷಧಿ

ರಸ ಗೊಬ್ಬರಗಳ ಬೆಲೆ ಏರಿಕೆ? ರಷ್ಯಾದಿಂದ ಬರುವ ರಸಗೊಬ್ಬರಗಳ ರಿಯಾಯಿತಿ ರದ್ದು

ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಹೇಗೆ?

Related Post

Leave a Reply

Your email address will not be published. Required fields are marked *