ಆತ್ಮೀಯ ರೈತ ಬಾಂಧವರೇ ,
ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ನಿಮ್ಮ ಖಾತೆಗೆ ಎಷ್ಟು ಪರಿಹಾರ ಬಂದಿದೆ. ಯಾವ ರೈತರು ಅರ್ಹರು ಮತ್ತು ಅನರ್ಹರು ಎಂಬ ಲಿಸ್ಟ್ ಅನ್ನು ಅವರ ಸೂಚನಾ ಫಲಕದಲ್ಲಿ ಹಚ್ಚಿದ್ದಾರೆ. ನೀವು ಕೂಡ ಇವತ್ತು ಹೋಗಿ ಲಿಸ್ಟ್ ಅನ್ನು ನೋಡಬಹುದು ಈಗಾಗಲೇ ಒಂದು ವಾರದಿಂದ ಆಯಾ ಗ್ರಾಮ ಪಂಚಾಯಿತಿಯಲ್ಲಿ ಬರುವ ರೈತರ ಲಿಸ್ಟನ್ನು ಪ್ರಕಟಣೆ ಬೋರ್ಡಿನಲ್ಲಿ ಹಚ್ಚಿದ್ದಾರೆ. ನಿಮಗೂ ಈಗ ಹಣ ಬಂದಿದೆ ಇಲ್ಲ ಅಂತ ಚೆಕ್ ಮಾಡಿಕೊಳ್ಳಲು ತುಂಬಾ ಸುಲಭವಾಗಿತ ನಿಮ್ಮ ಮೊಬೈಲ್ ನಲ್ಲಿ ನೋಡಬಹುದು ಆಗಿತ್ತು. ಏಕೆಂದರೆ ನೀವು ಆನ್ಸೆನ್ ನಲ್ಲಿ ಮಾತ್ರ ನೋಡುತ್ತಿದ್ದೀರಿ. ನೀವು ದಿನಕ್ಕೆ ಒಮ್ಮೆಯಾದರೂ ನಿಮ್ಮ ಊರಿನಲ್ಲಿ ಹೋಗುತ್ತೀರಿ ಅಲ್ಲಿ ನೀವು ನಿಮ್ಮ ಪಟ್ಟಿಯಲ್ಲಿ ಹೆಸರು ನೋಡಿದರೆ ತುಂಬಾ ಖುಷಿಯಾಗುತ್ತದೆ ಮತ್ತು ಯಾರಿಗೂ ಬಂತು ಯಾರಿಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು?
ಗ್ರಾಮ ಪಂಚಾಯಿತಿಯಲ್ಲಿ ಪ್ರಕಟಿಸಿರುವ ಪಟ್ಟಿಯನ್ನು ನೋಡುವುದು ಹೇಗೆ?
ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡ ಆನ್ನೈನ್ನಲ್ಲಿ ಲಭ್ಯವಿರುವ ಪಟ್ಟಿಯನ್ನೇ ಅವರು ಪ್ರಕಟಣೆ ಬೋರ್ಡಿನಲ್ಲಿ ಹಚ್ಚಿದ್ದಾರೆ. ಪಂಚಾಯತಿ ಅವರು ನಿಮ್ಮ ಹೆಸರು ಬೇಗನೆ ಹೇಳುತ್ತಾರೆ ನೀವು ಅದನ್ನು ತಿಳಿದುಕೊಳ್ಳಬಹುದು ಮತ್ತು ಓದಿದವರು ಓದದವರು ಎಲ್ಲರಿಗೂ ಹಣ ಬಂದಿರುವ ಹೆಸರನ್ನು ಬೇರೆಯವರು ನಿಮಗೆ ಹೇಳಿ ಹೇಳುತ್ತಾರೆ. ಯಾರಿಗೆ ಹೆಚ್ಚು ಬಂತು ಯಾರಿಗೆ ಕಡಿಮೆ ಬಂತು ಮತ್ತು ಯಾರಿಗೆ ಬಂದಿಲ್ಲ ಬರೆದಿದ್ದಕ್ಕೆ ಕಾರಣ ಏನು ಎಲ್ಲದನ್ನು ಸುಲಭವಾಗಿ ನೀವು ಚೆಕ್ ಮಾಡಿಕೊಳ್ಳಬಹುದು. ಹಾಗೆಯೇ ಯಾರಿಗೆ ಎಷ್ಟು ಕಂತಿನ ಹಣ ಜಮಾ ಆಗಿದೆ.
ಕೆಲ ರೈತರು ನೀರಾವರಿ ಪ್ರದೇಶದಲ್ಲಿದ್ದು ಕಬ್ಬು ಮತ್ತು ತೊಗರಿಯನ್ನು ಪ್ರಮುಖ ಬೆಳೆಯನ್ನಾಗಿ ಮಾಡಿಕೊಂಡಿರುವ ಕಾರಣದಿಂದಾಗಿ ಅವರ ಬೋರ್ವೆಲ್ ಗಳಲ್ಲಿ ನೀರು ಕಡಿಮೆಯಾಗಿದ್ದರಿಂದ ಈ ರೈತರು ಕೂಡ ಬರದಿಂದ ಬಳಲುತ್ತಿದ್ದು ಕಬ್ಬಿಗೆ ಎಕರೆಗೆ ಸರಿಸುಮಾರು 6,000 ಜಮಾವಾಗಬೇಕಾಗಿತ್ತು. ಹಲವಾರು ರೈತರಿಗೆ ಈ ಹಣ ಜಮವಾಗಿದ್ದು ಇನ್ನು ಕೆಲವು ರೈತರಿಗೆ ಇದು ಇನ್ನೂ ಜಮವಾಗಬೇಕಾಗಿದೆ. ಕರ್ನಾಟಕದ ಹಲವು ಭಾಗಗಳಲ್ಲಿ 60% ಜನ ವ್ಯವಸಾಯವನ್ನೇ ತಮ್ಮ ಜೀವನವಾಗಿ ಮಾಡಿಕೊಂಡದ್ದರಿಂದ ಈ ವರ್ಷ ಮಳೆಯಾಗದ ಕಾರಣ ಎಲ್ಲಾ ಬೆಳೆಗಳು ರೈತರಿಗೆ ಹಾನಿಯನ್ನು ಉಂಟು ಮಾಡಿದೆ. ಹಾಗಾಗಿ ಎಕರೆಗೆ ತಲಾ ಇಂತಿಷ್ಟು ಹಣವೆಂದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಳೆ ಹಾನಿ ಪರಿಹಾರವಾಗಿ ಜಮಾ ಮಾಡಿಕೊಡಲಾಗಿದೆ.
22.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ
ಮೇ 22 ರಂದು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮೇ 26ರಂದು ಮ್ಯಾನ್ಮಾರ್, ಬಾಂಗ್ಲಾದೇಶ ಕರಾವಳಿಗೆ ಅಪ್ಪಳಿಸುವ ಲಕ್ಷಣಗಳಿವೆ.
ವಾಯುಭಾರ ಕುಸಿತವು ಉತ್ತರಕ್ಕೆ ಚಲಿಸುತ್ತಿದ್ದಂತಯೇ ಮುಂಗಾರು ಸ್ವಲ್ಪ ಮಟ್ಟಿಗೆ ದುರ್ಬಲಗೊಳ್ಳುವ ಸಾಧ್ಯತೆಯಿದೆ.
ಕಾಸರಗೋಡು ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಮಂಗಳೂರು ಸ್ವಲ್ಪ ಜಾಸ್ತಿಯೇ ಇರಬಹುದು. ಕೊಡಗು ಉತ್ತಮ (ಸೋಮವಾರಪೇಟೆ ಸಾಮಾನ್ಯ), ಹಾಸನ ಸಾಮಾನ್ಯ, ಚಿಕ್ಕಮಗಳೂರಿನ ಮೂಡಿಗೆರೆ, ಬಾಳೆಹೊನ್ನೂರು, ಶಿೃಂಗೇರಿ ಕುದುರೆಮುಖ ಉತ್ತಮ, ಉಳಿದ ಭಾಗಗಳಲ್ಲಿ ಸಾಮಾನ್ಯ, ಶಿವಮೊಗ್ಗದ ಹೊಸನಗರ, ಸಾಗರ ಸುತ್ತಮುತ್ತ ಉತ್ತಮ, ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಮೈಸೂರು, ಚಾಮರಾಜನಗರ, ರಾಮನಗರ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
ಮಂಡ್ಯ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಉತ್ತರ ಒಳನಾಡು ಭಾಗಗಳಲ್ಲಿ ಮೇ 23 ರಂದು ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಆಮೇಲೆ ಕರಾವಳಿ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಬಿಸಿಲಿನ ವಾತಾವರಣ ಮುಂದುವರಿಯಲಿದೆ.
21.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಉತ್ತಮ, ದಕ್ಷಿಣ ಕನ್ನಡದ ಮಂಗಳೂರು, ಬಂಟ್ವಾಳ, ಮೂಡಬಿದರೆ, ಬೆಳ್ತಂಗಡಿ, ಉಡುಪಿಯ ಕಾರ್ಕಳ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಉಳಿದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. (ಕರಾವಳಿಯಾದ್ಯಂತ ಮುಂಗಾರು ರೀತಿಯ ವಾತಾವರಣ ಉಂಟಾಗಲಿದೆ).
ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ. (ಚಿಕ್ಕಮಗಳೂರು, ಶಿವಮೊಗ್ಗ ಅಲ್ಲಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ). ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಚಿತ್ರದುರ್ಗ ದಕ್ಷಿಣ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಚಿತ್ರದುರ್ಗ ಉತ್ತರ, ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ.
ಇದನ್ನೂ ಓದಿ :-
ಈಗಾಗಲೇ ಬೆಳೆ ಹಾನಿ ಪರಿಹಾರ ರೈತರ ಖಾತೆಗೆ ಹಣ ಜಮಾ ಆಗಿದೆ ಇದೀಗ ಬೆಳೆ ವಿಮೆ ಕೂಡ ಜಮಾ ಕೂಡಲೇ ಚೆಕ್ ಮಾಡಿ
ಬಳ್ಳಾರಿ, ಧಾರವಾಡ, ಬೆಳಗಾವಿ, ಗದಗ ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ.
20.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕರ್ನಾಟಕ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚೆನೆ ಇದೆ.
ಇದನ್ನು ಓದಿ:-ನನ್ನ ಖಾತೆಗೆ ನಿನ್ನೆ 4800 ರೂಪಾಯಿ ಬೆಳೆ ಪರಿಹಾರ ಹಣ ಜಮಾ ಆಗಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಪಾವಗಢ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಜಿಲ್ಲೆಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ.
ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟೆ, ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಕೆಲವು ಭಾಗಗಳಲ್ಲಿ ಅನಿರೀಕ್ಷಿತ ಮಳೆಯ ಸಾಧ್ಯತೆಯೂ ಇದೆ.
18.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು ಹೆಚ್ಚಿನ ಭಾಗಗಳಲ್ಲಿ, ಶಿವಮೊಗ್ಗ ಜಿಲ್ಲೆಯ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚೆನೆ ಇದೆ.
ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಪಾವಗಢ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ. ಚಿತ್ರದುರ್ಗ, ದಾವಣಗೆರೆ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ.