Breaking
Tue. Dec 17th, 2024

ವಿಮೆ ಕಂಪನಿಯಿಂದ 4 ಲಕ್ಷ ರೂಪಾಯಿ ಬೆಳೆ ವಿಮೆ ಪಡೆದ ರೈತನ ಕಥೆ

Spread the love

ಆತ್ಮೀಯ ರೈತ ಬಾಂಧವರೇ, ಅತಿವೃಷ್ಟಿಯಿಂದ ಸಂಭವಿಸಿದ ಬೆಳೆಹಾನಿಗೆ ಸೂಕ್ತ ಬೆಳೆವಿಮೆ ಪರಿಹಾರ ನೀಡದ್ದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಶಹಾಬಾದ ತಾಲ್ಲೂಕಿನ ಹೊನಗುಂಟಾ ಗ್ರಾಮದ ರೈತ ಈರಣ್ಣ ಶಿವಶಂಕ್ರಪ್ಪ ಎಂಬುವರಿಗೆ 4 ವರ್ಷದ ಬಳಿಕ ಪರಿಹಾರ ಲಭಿಸಿದೆ. ಇಲ್ಲಿನ ಜನತಾ ನ್ಯಾಯಾಲಯವು ಈರಣ್ಣ ಶಿವಶಂಕ್ರಪ್ಪ ಅವರಿಗೆ 4.40 ಲಕ್ಷ ಬೆಳೆ ವಿಮ ಪರಿಹಾರ ನೀಡಲು universal sompo general insurance ಕಂಪನಿಗೆ ಅದೇಶಿಸಿದೆ. ಅದರಂತೆ ಡಿಡಿ ರೂಪದಲ್ಲಿ ಪಾವತಿಯಾಗಿದೆ.

ಮಹಾತ್ಮ ಗಾಂಧೀಜಿ ಗ್ರಾಹಕರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ, ವಕೀಲ ವೈಜನಾಥ ಎಸ್‌. ಝಳಕಿ ಅವರು ವಾದ ಮಂಡಿಸಿದ್ದರು. 2016 ರಲ್ಲಿ ಈರಣ್ಣ ಅವರ 20 ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಬೆಳೆ ಅತಿವೃಷ್ಟಿಯಿಂದ ಹಾನಿಯಾಗಿತ್ತು. ಪ್ರಧಾನ ಮಂತ್ರಿ ಕಲಬುರಗಿಯಲ್ಲಿ ವಕೀಲ ವೈಜನಾಥ ಎಸ್‌ಝಳಕಿ ಅವರಿಂದ ಬೆಳೆ ವಿಮೆ ಪರಿಹಾರದ ಡಿ.ಡಿ ಸ್ವೀಕರಿಸಿದ ರೈತ ಈರಣ್ಣ ಶಿವಶಂಕ್ರಪ್ಪ. ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದ ಅವರು ಬೆಳೆ ಹಾನಿಗೆ ಪರಿಹಾರ ಕೋರಿ ಯೂನಿವರ್ಸಲ್ ಜನರಲ್ ಇನ್ಸುರೆನ್ಸ್ ಕಂಪನಿಯ ಮೊರೆ ಹೋದರು. ಬೆಳೆ ಸಾಲ ನೀಡಿದ್ದ ಬ್ಯಾಂಕ್ ಶಾಖೆ, ಕೃಷಿ ಇಲಾಖೆಗೂ ಲಿಖಿತ ದೂರು ಸಲ್ಲಿಸಿದ್ದರು.

ವಿಮಾ ಕಂಪನಿಯವರು ಜಮೀನಿಗೆ ಬಂದು ಬೆಳೆ ಹಾನಿ ಪರಿಶೀಲಿಸಿ ರೈತನಿಗೆ 72,158 ಬೆಳೆವಿಮೆ ಪರಿಹಾರ ನೀಡಿದರು. ಪರಿಹಾರ ಮೊತ್ತ ಅವೈಜ್ಞಾನಿಕವಾಗಿದೆ. ಸಂಪೂರ್ಣ ಹಾನಿಯನ್ನು ಗಮನಿಸಿ ನಿಯಮದ ಪ್ರಕಾರ 3,31,854 ನೀಡುವಂತೆ ಈರಣ್ಣ ವಿಮಾ ಕಂಪನಿಗೆ ಕೋರಿದರು. ಕಂಪನಿಯಿಂದ ಸ್ಪಂದನೆ ಸಿಗದಿದ್ದಾಗ, ಗ್ರಾಹಕರ ಹಿತರಕ್ಷಣಾ ತಾರಾಮ ಉಮರ್ಜೀಕರ ಮೂಲಕ 2018ರಲ್ಲಿ ಕಾಯಂ ಜನತಾ ನ್ಯಾಯಾಲಯದಲ್ಲಿ ವಿಮಾ ಕಂಪನಿ ವಿರುದ್ಧ ದೂರು ದಾಖಲಿಸಿ, ಬೆಳೆವಿಮೆ ಪರಿಹಾರ ಕೋರಿದರು. ‘ಕಂಪನಿ ಕೊಟ್ಟ 32,158 ಪರಿಹಾರ ಮೊತ್ತವು ಅಸಮಂಜಸ, ಅವೈಜ್ಞಾನಿಕ ಎಂದು ಜನತಾ ನ್ಯಾಯಾಲಯ ತಳ್ಳಿ ಹಾಕಿತು.

ಸೂಕ್ತ ದಾಖಲೆಗಳನ್ನು ಸಲ್ಲಿಸಲು ವಿಮಾ ಕಂಪನಿ ವಿಫಲವಾಗಿದೆ. ಬೆಳೆವಿಮೆ ನಿಯಮಾವಳಿಯಂತೆ 73.29 ಲಕ್ಷಕ್ಕೆ ಪ್ರಕರಣ ದಾಖಲಾದ ದಿನದಿಂದ ಶೇ 6ರಷ್ಟು ಬಡ್ಡಿ, 75 ಸಾವಿರ ಪ್ರಕರಣದ ವೆಚ್ಚ ಸೇರಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತು’ ಎಂದು ವೈಜನಾಥ ಎಸ್.ಝಳಕಿ ‘ಪ್ರಜಾವಾಣಿ’ಗೆ ತಿಳಿಸಿದರು. ಆದೇಶ ಹೊರಡಿಸಿ ಎರಡು ತಿಂಗಳಾದರೂ ವಿಮಾ ಕಂಪನಿ ಪರಿಹಾರ ನೀಡಲಿಲ್ಲ. ಜುಲೈ 20220 20ರಂದು ಹಿರಿಯ ಸಿವಿಲ್ ಮೊರೆ ಹೋದರು. ನ್ಯಾಯಾಲಯದಿಂದ ಸಮನ್ಸ್ ಬಂದ ಬಳಿಕ ವಿಮಾ ಕಂಪನಿಯು ಈರಣ್ಣ ಅವರಿಗೆ 34,40,056 ಬೆಳೆವಿಮಾ ಪರಿಹಾರದ ಡಿಡಿ ನೀಡಿತು’ ಎಂದರು.

ಇದನ್ನೂ ಓದಿ :- ರಾಜ್ಯದಲ್ಲಿ ಮುಂದಿನ ಐದು ದಿನ ಈ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಮೇ 20 ರಿಂದ 24 ರವರೆಗೆ ಹಗುರದಿಂದ ಕೂಡಿದ ಸಾಧಾರಣ ಮಳೆ ಸುರಿಯಲಿದೆ

ಇದನ್ನೂ ಓದಿ :- 2000 ರೂಪಾಯಿ ನೋಟು ಬಂದ್ ಮಾಡಿದ ಕೇಂದ್ರ ಸರ್ಕಾರ ನಿಮ್ಮ ಹಣ ಬದಲಾಯಿಸಿ ಕೊಳ್ಳಲು ಯಾವಾಗ ಕೊನೆಯ ದಿನಾಂಕ ?

ಇದನ್ನೂ ಓದಿ :- ಮಹಿಳಯರಿಗಾಗಿ ಉಚಿತ ಬಸ್ ಪ್ರಯಾಣ,ಯುವಕರಿಗೆ 2000 ರೂಪಾಯಿ ಹಣ ಜಮಾ ಯಾರೆಲ್ಲ ಅರ್ಹರು ಎಂದು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಿ

Related Post

Leave a Reply

Your email address will not be published. Required fields are marked *