Breaking
Tue. Dec 17th, 2024

ಮೂರನೇ ಕಂತಿನ ಬೆಳೆ ಪರಿಹಾರದ ಹಣ ಜಮಾ!! ಈ ರೈತರಿಗೆ ಮಾತ್ರ 3000 ರೂಪಾಯಿ ಜಮಾ ಕೂಡಲೇ ಚೆಕ್ ಮಾಡಿ

Spread the love

ರೈತ ಬಾಂಧವರೇ,
ಈಗಾಗಲೇ ಎಲ್ಲರಿಗೂ ಒಂದನೇ ಕಂತಿನ 2000 ಮತ್ತು ಎರಡನೇ ಕಂತಿನ 9,000 ರೂಪಾಯಿ ಬೆಳೆ ಹಾನಿ ಪರಿಹಾರದ ಹಣಗಳು ಜಮಾ ಆಗಿದೆ. ಈ ಹಿಂದೆ ತಿಳಿಸಿದಂತೆ ಯಾರು ಯಾರು ಫಲಾನುಭವಿಗಳು ಎಂಬ ಪಟ್ಟಿಯನ್ನು ಗ್ರಾಮ ಪಂಚಾಯಿತಿಯ ಫಲಕದಲ್ಲಿ ಅಂಟಿಸಿರುತ್ತಾರೆ. ಅಂಟಿಸಿರುವ ಎಲ್ಲ ರೈತರಿಗೂ ಈ ಎರಡರ ಕಂತಿನ ಹಣವು ಜಮಾ ಆಗಿದೆ. ಹಾಗಾದರೆ ಮೂರನೇ ಕಂತಿನ ಹಣ ಜಮಾ ಆಗಲು ಹಲವಾರು ಮಾನದಂಡಗಳನ್ನು ಸರ್ಕಾರ ನಿಗದಿಪಡಿಸಿದೆ. ಅದುವೇ ಕೇವಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಮೂರನೇ ಕಂತಿನ ಬೆಳೆ ಪರಿಹಾರದ ಹಣ ಜಮಾ ಮಾಡುವುದಾಗಿ ತಿಳಿಸಿಕೊಟ್ಟಿದೆ. ಹಾಗಾಗಿ ಈ ಸಣ್ಣ ಮತ್ತು ಅತಿ ಸಣ್ಣ ರೈತರು ಯಾರು ಎಂದು ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ಓದಿ :- 32 ಲಕ್ಷ ರೈತರ ಖಾತೆಗೆ 575 ಕೋಟಿ ಬೆಳೆಹಾನಿ ಪರಿಹಾರ ಜಮಾ ಆಗಿರುವ ಪಟ್ಟಿ ಬಿಡುಗಡೆ ನಿಮ್ಮ ಹೆಸರನ್ನು ಹೇಗೆ ಚೆಕ್ ಮಾಡಿ

ಸಣ್ಣ ರೈತರು ಎಂದರೆ ಯಾವ ರೈತರು 5 ಎಕರೆಗಿಂತ ಕಡಿಮೆ ಜಮೀನುಗಳನ್ನು ಹೊಂದಿರುತ್ತಾರೆ ಅವರಿಗೆ ಸಣ್ಣ ರೈತರಿಗೆ ಎಂದು ಕರೆಯುತ್ತಾರೆ. ಹಾಗೆಯೇ ಅತಿ ಸಣ್ಣ ರೈತರು ಎಂದರೆ 2.5 ಎಕರೆಗಿಂತ ಕಡಿಮೆ ಜಮೀನನ್ನು ಹೊಂದಿರುವ ರೈತರಿಗೆ ಅತಿ ಸಣ್ಣ ರೈತರು ಎಂದು ಕರೆಯುತ್ತಾರೆ. ಮೇಲೆ ತಿಳಿಸಿದಂತೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಮಾತ್ರ ಮೂರನೇ ಕಂತಿನ ಬೆಳೆ ಪರಿಹಾರದ 3000 ರೂಪಾಯಿ ಹಣವು ಜಮಾವಾಗುತ್ತದೆ. ಈಗಾಗಲೇ ರಾಜ್ಯದ ಹಲವಾರು ಭಾಗದ ರೈತರಿಗೆ ಎಂದರೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 3000 ರೂಪಾಯಿ ಹಣ ನಿನ್ನ ಜಮವಾಗಿದ್ದು ನಿಮಗೂ ಕೂಡ ಜಮಾ ಆಗಿರುತ್ತದೆ. ಇದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯೋಣ ಬನ್ನಿ.

ಇದನ್ನು ಓದಿ:-44.34 ಕೋಟಿ ಬೆಳೆವಿಮೆ ಹಣ ಬಿಡುಗಡೆ!! ರೈತರ ಖಾತೆಗೆ ಜಮಾ ಕೂಡಲೇ ಇಲ್ಲಿ ಚೆಕ್ ಮಾಡಿ

ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಇದರಲ್ಲಿ ಕರೆಂಟ್ ಇಯರ್ ಪಹಣಿ ಅಥವಾ ಆರ್ ಟಿ ಸಿ ಮೇಲೆ ಕ್ಲಿಕ್ ಮಾಡಬೇಕು.

https://landrecords.karnataka.gov.in/Service2

ಹಂತ 2: ಇದರಲ್ಲಿ ಮೊದಲಿಗೆ ನಿಮ್ಮ ಜಿಲ್ಲೆಯನ್ನು ಆಯ್ಕೆ

ಮಾಡಿಕೊಳ್ಳಬೇಕು. ಅದಾದ ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಅದಾದ ನಂತರ ನಿಮ್ಮ ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗೂ ನಿಮ್ಮ ಊರನ್ನು ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಸರ್ವೆ ನಂಬರ್ ಗೋ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಹಾಗೂ ಹಿಸ್ಸಾ ನಂಬರನ್ನು ಟೈಪ್ ಮಾಡಿಕೊಳ್ಳಬೇಕು ಇದಾದ ನಂತರ .

ಹಂತ 3: Fetch Details ಇದರ ಮೇಲೆ ಕ್ಲಿಕ್ ಮಾಡಬೇಕು ನೀವು ಕ್ಲಿಕ್ ಮಾಡಿದ ನಂತರ ಬಲಭಾಗದ ಕೆಳಗಡೆ ವ್ಯೂ ಎಂದು ಒಂದು ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಈಗ ನಿಮ್ಮ ಪಹಣಿ ಪತ್ರ ಅಂದರೆ ಹೀಗೆ ಪ್ರಸ್ತುತ ಪಹಣಿ ಪತ್ರ ಓಪನ್ ಆಗುತ್ತದೆ ಅದರಲ್ಲಿ ಎಷ್ಟು ಎಕರೆ ಜಮೀನು ಬರೆದಿದೆ ಎಂದು ತಿಳಿದುಕೊಳ್ಳಿ. ಇದರಲ್ಲಿ ಮೂರನೇ ಕಾಲಂ ಅನ್ನು ಗಮನಿಸಿ ಅಲ್ಲಿ ಎಕರೆಗುಂಟೆ ಎಷ್ಟಿದೆ ಅಂದರೆ ಪ್ರಸ್ತುತವಾಗಿ ನಿಖರವಾಗಿ ನಿಮ್ಮ ಹೆಸರಿನ ಮೇಲೆ ಅಂದರೆ ನಿಮ್ಮ ಸರ್ವೇ ನಂಬರ್ ಮೇಲೆ ಎಷ್ಟು ಜಮೀನು ಇದೆ ಎಂದು ಗೊತ್ತಾಗುತ್ತದೆ ಒಂದು ವೇಳೆ ಅದು 2.5 ಎಕರೆಗಿಂತ ಕಡಿಮೆ ಇದ್ದಲ್ಲಿ ನೀವು ಅತಿ ಸಣ್ಣ ರೈತರು ಎಂದು ಕರೆಯುತ್ತೇವೆ 5 ಹೆಕ್ಟರ್ ಕಿಂತ ಜಾಸ್ತಿ ಜಮೀನುಗಳನ್ನು ಹೊಂದಿರುವ ರೈತರನ್ನು ದೊಡ್ಡ ರೈತರು ಎಂದು ಕರೆಯಲಾಗುತ್ತದೆ . ಆದರೆ ಹೆಚ್ಚುವರಿ ಬರಗಾಲ ಪರಿಹಾರದ ಹಣ ಕೇವಲ ಸಣ್ಣ ರೈತರಿಗೆ ಮಾತ್ರ ಜಮಾವಾಗುತ್ತದೆ.

ಇದನ್ನೂ ಓದಿ : – ಗ್ರಾಮ ಪಂಚಾಯತಿಯಲ್ಲಿ ಹೊಸ ಪಟ್ಟಿ ಹಚ್ಚಿದ್ದಾರೆ ಈ ರೈತರು 3 ನೆಯ ಕಂತಿನ ಬರ ಪರಿಹಾರ ಹಣ ಪಡೆಯಲು ಅರ್ಹರು.

ಹವಾಮಾನ ಮುನ್ಸೂಚನೆ :- 26.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡದ ಮಂಗಳೂರು, ಬಂಟ್ವಾಳ ಸುತ್ತಮುತ್ತ ಭಾಗಗಳಲ್ಲಿ ಪುತ್ತೂರು ಒಂದೆರಡು ಕಡೆ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ದಕ್ಷಿಣ ಕನ್ನಡ ಹಾಗೂ ಉಡುಪಿ, ಉತ್ತರ ಕನ್ನಡ ಭಾಗಗಳಲ್ಲಿ ಮೋಡ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಅಡಿಕೆ ತೋಟಗಳಿಗೆ ಔಷಧಿ ಸಿಂಪಡಿಸಲು ಮೇ 30ರ ತನಕ ಅವಕಾಶವಿದೆ.

ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಮೇ 30ರ ತನಕ ಮಳೆಯ ಸಾಧ್ಯತೆ ಕಾಣುತ್ತಿಲ್ಲ. ಚಾಮರಾಜನಗರ ಒಂದೆರಡು ಕಡೆ, ರಾಮನಗರ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು. ಕರಾವಳಿ, ಮಲೆನಾಡು ಹೊರತುಪಡಿಸಿ ಮುಂದಿನ 10 ದಿನಗಳವರೆಗೂ ಮಳೆಯ ಸಾಧ್ಯತೆ ಕಾಣಿಸುತ್ತಿಲ್ಲ.

ಈಗಿನಂತೆ ಮೇ 25ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕುಂಠಿತವಾಗುವ ಲಕ್ಷಣಗಳಿದ್ದು, ಕರಾವಳಿಯ ಜಿಲ್ಲೆಗಳಲ್ಲಿ ಅಲ್ಲಲ್ಲಿ ದಿನದಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಬಂಗಾಳಕೂಲ್ಲಿಯಲ್ಲಿ ” ರೇಮಲ್ ” ಚಂಡಮಾರುತ ರೂಪುಗೊಳ್ಳುತ್ತಲಿದ್ದು, ಇದರ ತೀವ್ರತೆಯ ಮೇಲೆ ಮುಂಗಾರು ಮುಂದುವರಿಯುವಿಕೆ ಅವಲಂಬಿಸಿದೆ. ಈಗಿನ ಪ್ರಕಾರ ಮೇ 26ರಂದು ಬಾಂಗ್ಲಾದೇಶ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದ್ದು, ಮೇ 26 ಹಾಗೂ 27ರಂದು ಬಾಂಗ್ಲಾದೇಶ ಹಾಗೂ ಭಾರತದ ಈಶಾನ್ಯ ರಾಜ್ಯಗಳಲ್ಲಿ ಬಹಳಷ್ಟು ಅನಾಹುತ ಸೃಷ್ಠಿಸುವ ಸಾಧ್ಯತೆ ಇದೆ.

24.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚೆನೆ ಇದೆ. ದಕ್ಷಿಣ ಕನ್ನಡದ ಮಂಗಳೂರು, ಉಡುಪಿ ಕರಾವಳಿ ತೀರ ಭಾಗಗಳಲ್ಲಿ, ಮೂಡಬಿದರೆ, ಕಾರ್ಕಳ, ಬಂಟ್ವಾಳ, ಧರ್ಮಸ್ಥಳ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಉಳಿದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಕೊಡಗು ( ಸೋಮವಾರಪೇಟೆ ಸಹಿತ) ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ. ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.

ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ, ವಿಜಯಪುರ, ರಾಯಚೂರು, ಕಲಬುರ್ಗಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಅಥವಾ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ.

ಮೇ 23ರಂದು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಉತ್ತರಕ್ಕೆ ಚಲಿಸಿ ಮೇ 26 ಅಥವಾ 27ರಂದು ಬಂಗ್ಲಾದೇಶ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಈಗಿನಂತೆ ಮೇ 25ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.

Related Post

Leave a Reply

Your email address will not be published. Required fields are marked *