Breaking
Tue. Dec 17th, 2024

ಹಳ್ಳಿಗಳಲ್ಲಿ ಬೆಳೆ ಪರಿಹಾರ ಆಗದವರ ಲಿಸ್ಟ್ ಅನ್ನು ಗ್ರಾಮ ಲೆಕ್ಕಾಧಿಕಾರಿಗಳು ಪ್ರಕಟಣೆ ಮಾಡಿದ್ದಾರೆ. ನಿಮ್ಮ ಹೆಸರನ್ನು ಕೂಡಲೇ ಚೆಕ್ ಮಾಡಿಕೊಳ್ಳಿ.

Spread the love

ಆತ್ಮೀಯ ರೈತ ಬಾಂಧವರೇ,
ಕಳೆದ ಒಂದು ವಾರದಿಂದ ಹಲವಾರು ಚರ್ಚೆಗಳಿಗೆ ಕಾರಣವಾದ ಮತ್ತು ಸಂಪುಟ ಸಭೆಯ ಸದಸ್ಯರಾದ ಹಲವಾರು ಖಾತೆಯ ಸಚಿವರು ಈಗಾಗಲೇ ಹೇಳಿದಂತೆ ಪ್ರತಿಯೊಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ಹೊಸ ಲಿಸ್ಟನ್ನು ನೀಡಿರುತ್ತಾರೆ. ಅದುವೇ ಹಳ್ಳಿವಾರು ಬೆಳೆ ಪರಿಹಾರದ ಲಿಸ್ಟ್ ಆಗಿದೆ. ಈ ಕೆಲಸಕ್ಕೆಂದೆ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಿದ್ದಾರೆಂದು ಕೃಷ್ಣೆ ಬೈರೇಗೌಡರು ಹೇಳಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಣೆ ಮಾಡಿರುವ ಈ ಲಿಸ್ಟ್ ನಲ್ಲಿ ಯಾರು ಈ ಎಫ್ ಐಡಿ ಖಾತೆಯನ್ನು ಹೊಂದಿದ್ದಾರೆ ಅವರ ಹೆಸರಿನಲ್ಲಿ ಯಾವುದೇ ರೀತಿಯ ಬ್ಯಾಂಕ್ ಖಾತೆ ಲಿಂಕ್ ಆಗಿರುವುದಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಇವರಿಗೆ ಬೆಳೆ ಪರಿಹಾರ ಹಣವನ್ನು ಜಮಾ ಮಾಡಲು ಸಾಧ್ಯವಿಲ್ಲ ಹೀಗಾಗಿ ಬೇಗನೆ ನಿಮ್ಮ ಬ್ಯಾಂಕುಗಳಿಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಅನ್ನು ನಿಮ್ಮ ಬ್ಯಾಂಕ್ ಶಾಖೆಗೆ ನೀಡಬೇಕು. ಇದರಿಂದ ಈ ಎಫ್ ಐ ಡಿ ಎಕ್ಸೆಪ್ಟ್ ಮಾಡಿಕೊಳ್ಳಲಾಗುತ್ತದೆ. ಇದರಿಂದ ಹಲವಾರು ರೈತರಿಗೆ ಉಪಯೋಗವಾಗುವುದು ಕೇವಲ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡುವುದರಿಂದ ನಿಮಗೆ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆಯೋ ಇಲ್ಲವೋ ಎಂದು ಕೂಡಲೇ ತಿಳಿದು ಬರುತ್ತದೆ ಮತ್ತು ಆ ಲಿಸ್ಟಿನಲ್ಲಿ ನಿಮ್ಮ ಹೆಸರು ಇದ್ದರೆ ಈ ಕೂಡಲೇ ಈ ಮೇಲೆ ಹೇಳಿದಂತೆ ನೀವು ಕೆಲಸವನ್ನು ಮಾಡಿಕೊಳ್ಳಬೇಕು. ಅದುವೇ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಮತ್ತು ಆಧಾರ್ ಕಾರ್ಡನ್ನು ತೆಗೆದುಕೊಂಡು ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಬೇಕು. ಹಾಗೂ ಇದರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳನ್ನು ಭೇಟಿ ನೀಡಬೇಕು ಹಾಗೂ ಈ ಕೆಲಸಕ್ಕೆ ಎಂದು ಹಲವಾರು ಸರಕಾರಿ ನೌಕರರನ್ನು ಸರ್ಕಾರವು ನೇಮಕ ಮಾಡಿದೆ.

ಹೆಚ್ಚುವರಿ ಬೆಳೆ ಪರಿಹಾರ ಮೂರನೇ ಕಂತಿನ ಹಣ ನಿಮಗೆ ಜಮಾ ಆಗಿದ್ಯೋ ಇಲ್ಲವೋ ಎಂದು ಹೀಗೆ ಚೆಕ್ ಮಾಡಿಕೊಳ್ಳಿ

ರೈತರಿಗೆ ಈಗ ಪರಿಹಾರ ಹಣ ಜಮಾ ಆಗುತ್ತದೆ ಮತ್ತು ಪರಿಹಾರ ಹಣ ಜಮಾ ಆಗಬೇಕಾದರೆ ಸರ್ಕಾರ ನಿಗದಿಪಡಿಸಿದ ಎಲ್ಲಾ ಶರತ್ತು ಗಳನ್ನು ರೈತರು ಹೊಂದಿರಬೇಕು. ಮೊದಲಿಗೆ ಬೆಳೆ ಸಮೀಕ್ಷೆ ಸರಿಯಾಗಿರಬೇಕು ಇದಾದ ನಂತರ ಸಮೀಕ್ಷೆ ಮಾಡಿದಂತೆ ಪಹನಿ ಪತ್ರಗಳಲ್ಲಿ ದಾಖಲೆಗಳು ಸರಿಯಾಗಿ ಹೊಂದಿರಬೇಕು ಮತ್ತು ನೀವು ಸರಿಯಾಗಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ ಪುಸ್ತಕ ಲಿಂಕ್ ಮಾಡಿಸಬೇಕು. ಮತ್ತು ಈಕ ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು.

ಹಂತ 1: ಈಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೊಂದು ವೆಬ್ ಪೇಜ್ ಓಪನ್ ಆಗುತ್ತದೆ, ಪೇಜ್ ಓಪನ್ ಆದ ನಂತರ ಅದರಲ್ಲಿ ನೇರವಾಗಿ ನಿಮಗೆ ವರ್ಷವನ್ನು ಆಯ್ಕೆ ಮಾಡಲು ಕೇಳುತ್ತದೆ ಆಗ ನೀವು 2023 ಮತ್ತು 24 ವರ್ಷವನ್ನಾಗಿ ಮಾಡಿಕೊಳ್ಳಿ ಮತ್ತು ಋತುಮಾನ ಎಂದು ಕೇಳಿದ್ದಲ್ಲಿ ಮುಂಗಾರು ಹಂಗಾಮ ಎಂದು ಆಯ್ಕೆ ಮಾಡಿಕೊಳ್ಳಿ ಮತ್ತು ಬೆಳೆ ಯಾವ ರೀತಿಯಾಗಿ ಹಾನಿಯಾಗಿದೆ ಅಥವಾ ವಿಪತ್ತಿನ ವೇದ ಯಾವುದೆಂದು ಕೇಳಿದ್ದಲ್ಲಿ ನೀವು ಬರ ಎಂದು ಆಯ್ಕೆ ಮಾಡಿಕೊಂಡು ನಂತರ ಆಪ್ಪನ್ ಮೇಲೆ ಕ್ಲಿಕ್ ಮಾಡಿ.

https://parihara.karnataka.gov.in/service92/

ಹಂತ 2: ನಿಮ್ಮ ಬಳಿ ಯಾವುದೇ ದಾಖಲೆ ಇರಲಿ ಅಂದರೆ ಮೊಬೈಲ್ ನಂಬರ್ fid ಅಥವಾ ನಿಮ್ಮ ಆಧಾರ್ ಸಂಖ್ಯೆ ಅಥವಾ ಜಮೀನಿನ ಸರ್ವೆ ನಂಬ‌ರ್ ನಾಲ್ಕರಲ್ಲಿ ಯಾವುದಾದರೂ ಒಂದು ದಾಖಲೆಯಿಂದ ನೀವು ನಿಮ್ಮ ಹೆಚ್ಚುವರಿ ಬರ ಪರಿಹಾರ ಪಡೆಯುವ ಮತ್ತು ಪಡೆದೆ ಇರೋದನ್ನು ತಿಳಿದುಕೊಳ್ಳಬಹುದು.

ಹಂತ 3: ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ ನೀವು ಆಯ್ಕೆ ಮಾಡಿಕೊಂಡ ದಾಖಲಾತಿಯ ಪ್ರತಿಯನ್ನು ಮುಂದೆ ಇಟ್ಟುಕೊಂಡು ಸೂಕ್ತವಾಗಿ ಅದನ್ನು ತುಂಬಬೇಕು. ಎಂಟ್ರಿ ಮಾಡಿದ ನಂತರ ನಿಮಗೆ ಮುಂದೆ ಒಂದು ಪಡೆಯಿರಿ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಸರಿಯಾಗಿ ಕ್ಲಿಕ್ ಮಾಡಬೇಕು.

ಹಂತ 4: ಈ ಒಂದು ವಿವರವೂ ನಿಮಗೆ ಕೆಳಗಡೆ ಮಾಹಿತಿ ಬರುತ್ತದೆ, ಈಗಾಗಲೇ ನಿಮಗೆ ಎರಡು ಕಂತುಗಳು ಜಮ ಆಗಿರುವುದು ಖಂಡಿತವಾಗಿಯೂ ತೋರಿಸಬೇಕು ಒಂದು ವೇಳೆ ಒಂದೇ ಕಂತು ಜಮಾ ಆಗಿ ಮತ್ತು ಇನ್ನೊಂದು ಕಂತಿನ ಹಣ ತೋರಿಸದೆ ಇದ್ದಲ್ಲಿ ಮೂರನೇ ಕಂತಿರ ಹಣ ಅಥವಾ ಹೆಚ್ಚುವರಿ ಬರ ಪರಿಹಾರ ಬರುವುದಿಲ್ಲ ನೀವು ಅವಾಗ ಅನರ್ಹ ಪಟ್ಟಿಯಲ್ಲಿ ಬರುತ್ತೀರಿ.

https://chat.whatsapp.com/DgyceSrfHaIHrMa62BudxU

Related Post

Leave a Reply

Your email address will not be published. Required fields are marked *