Breaking
Sat. Dec 21st, 2024

ಕೇವಲ ಹತ್ತು ವರ್ಷದಲ್ಲಿ ಸಾಲು ಸಾಲಾಗಿ ಪ್ರಶಸ್ತಿಗಳನ್ನು ಪಡೆದ ರೈತ ಈ ರೈತನ ಯಶಸ್ಸಿನ ಹಾದಿ

Spread the love

ಪ್ರಯೋಗ ಶೀಲ ಕೃಷಿಕ- ಧರೆಪ್ಪ ಪರಪ್ಪ ಕಿತ್ತೂರ ಬೆಳೆ ಹಾಗೂ ಜಾನುವಾರುಗಳಿಗೆ ಸಂಗೀತದ ಉಪಚಾರ ಕಬ್ಬು ಬೆಳೆಯಲ್ಲಿ ಅರಿಶಿಣದ ಮಿಶ್ರ ಬೆಳೆ, ಏಕಕಣ್ಣಿನ ಕಬ್ಬುನಾಟಿ, ಅರಿಶಿಣ ಮೌಲ್ಯವರ್ಧನೆ ಹಾಗೂ ಸ್ವಂತ ಮಾರಾಟ, ಹೀಗೆ ಹತ್ತು ಹಲವಾರು ವಿನೂತನ ಪ್ರಯೋಗಗಳನ್ನು ಮಾಡುತ್ತ ಕೃಷಿಯಲ್ಲಿ ಯಶಸ್ಸು ಕಂಡವರು ವಿರಳ. “ಬೇಸಾಯವೇ ಬೇಜಾರು’ ಎನ್ನುವ ಈ ದಿನಮಾನಗಳಲ್ಲಿ ಬೇಸರವಿಲ್ಲದೇ ಕೃಷಿಯನ್ನು ಒಪ್ಪಿ, ಅಪ್ಪಿಕೊಂಡ ಹಾಗೂ ಅದರಲ್ಲಿ ಪ್ರಯೋಗಶೀಲತೆಯಿಂದ ಪ್ರಶಸ್ತಿವರೆಗೆ ಯಶಸ್ಸು ಕಂಡವರೆಂದರೆ ಜಮಖಂಡಿ ತಾಲೂಕಿನ ತೇರದಾಳ ಗ್ರಾಮದ ಶ್ರೀ ಧರೆಪ್ಪ ಪರಪ್ಪ ಕಿತ್ತೂರ ರವರು. ದ್ವಿತೀಯ ಪಿಯುಸಿಯ ವರೆಗೆ ಮಾತ್ರ ಓದಿದ ಇವರು ತಮ್ಮ ೧೮ ಎಕರೆ ಜಮೀನಿನಲ್ಲಿ, ಕೃಷಿಯ ಜೊತೆಗೆ ಹೈನುಗಾರಿಕೆ, ಆಡು ಸಾಕಾಣಿಕೆ, ಮೊಲ ಸಾಕಾಣಿಕೆ, ಜಾತಿ ನಾಯಿಗಳ ಅಭಿವೃದ್ಧಿಯಂತಹ ಆದಾಯ ಪೂರಕ ಚಟುವಟಿಕೆಗಳನ್ನು ಕೈಗೊಂಡಿದ್ದು, ಸಂಪೂರ್ಣ ಸಾವಯವ ಕೃಷಿಕರಾಗಿದ್ದಾರೆ. ಆತ್ಮ ಯೋಜನೆಯ ಫಲಾನುಭವಿಯಾದ ಇವರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.ಕೃಷಿ ವೈವಿಧ್ಯತೆ ಗೋವಿನಜೋಳ, ಕಡಲೆ ಕೃಷಿ ಬೆಳೆಗಳು.ಹೂವು ತರಕಾರಿ ಬೆಳೆದ ಕೃಷಿ ಪಂಡಿತ ತಯಾರಿಸಿದ ಎರೆಹುಳುಗೊಬ್ಬರ, ಎರೆಜಲ, ಜೀವಾಮೃತ, ಪಂಚಗವ್ಯಗಳನ್ನು ಉಪಯೋಗಿಸಿಕೊಂಡು ಮಳೆ ನೀರುಕೊಯ್ದುಮಾಡಿಕೊಂಡು ಒಬ್ಬ ಸಾಂಪ್ರದಾಯಿಕ ಪದ್ಧತಿಯ “ಸಂಪೂರ್ಣ ಆಧುನಿಕ ರೈತ” ಎನಿಸಿಕೊಂಡಿದ್ದಾರೆ.

ಬೆಳೆ ವೈವಿಧ್ಯತೆ

ಇವರು ತಮ್ಮ ಹೊಲದಲ್ಲಿ ಕಬ್ಬು, ಚೆಂಡುಹೂ, ಹೂಕೋಸು (ಗೋಬಿ), ಎಲೆಕೋಸು (ಗೋಬಿ ಗಡ್ಡೆ), ಪಾಲಕ, ಮೆಂತ್ತೆ, ಕೋತಂಬರಿ, ಮೆಣಸಿನಕಾಯಿ, ಸಬ್ಬಸಗಿ ಪಲ್ಲೆ, ಶೇಂಗಾ, ಉಳ್ಳಾಗಡ್ಡಿ ಇತ್ಯಾದಿಗಳನ್ನು ಬೆಳೆದಿದ್ದಾರೆ. ಇದರಲ್ಲಿ ಕಬ್ಬು ಮುಖ್ಯ ಬೆಳೆ.ಕಣ್ಣಿನ ನಾಟಿ ಹಾಗೂ ೨೦೦೮- ೦೯ ರಿಂದ ಸತತವಾಗಿ ಹೆಕ್ಟೇರಿಗೆ ೧೨೫-೧೫೦ ಟನ್‌ ಕಬ್ಬಿನ ಇಳುವರಿ ಪಡೆದಿದ್ದಾರೆ. ಸಮಯೋಜತ ನಿರ್ಧಾರ, ಮೌಲ್ಯವರ್ಧನೆ, ಸ್ಥಳೀಯ ಸಂಪನ್ಮೂಲಗಳ ಸಮರ್ಥ ಬಳಕೆ, ಹೆಚ್ಚು ಮಿಶ್ರಬೆಳೆ ಮತ್ತು ಸರಣಿ ಬೆಳೆಅಳವಡಿಕೆ ಯಿಂದ ಯಶಸ್ಸು ಕಂಡ ಶ್ರೀ ಧರೆಪ್ಪ ಕಿತ್ತೂರ ರವರು, ತಮ್ಮ ಸುತ್ತಮುತ್ತಅನ ರೈತರಿಗೆ ಒಬ್ಬ ಯಶಸ್ವಿ ಕೃಷಿಕರಾಗಿ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಆಡು ನೀಡುತ್ತ ಕೃಷಿಯಿಂದ ಜನ ವಿಮುಖರಾಗದಂತೆ ಪ್ರೇರಣಿ ನೀಡುತ್ತಿದ್ದಾರೆ. ಕಣ್ಣಿನ ನಾಟಿ ಹಾಗೂ ೨೦೦೮- ೦೯ ರಿಂದ ಸತತವಾಗಿ ಹೆಕ್ಟೇರಿಗೆ ೧೨೫-೧೫೦ ಟನ್‌ ಕಬ್ಬಿನ ಇಳುವರಿ ಪಡೆದಿದ್ದಾರೆ. ಕಬ್ಬಿನಲ್ಲಿ ಅಂತರ್‌ ಬೆಳೆಯಾಗಿ ಅರಿಶಿಣ. ಅರಿಷಿಣ ಬೆಳೆಗೆ ಪ್ಲಾಸ್ಟಿಕ್ ಮುಚ್ಚಿಗೆ ಹಾಗೂ ಮೌಲ್ಯವರ್ಧನೆ (ಸ್ವತಃ ಅರಿಷಿಣ ಪುಡಿ ತಯಾರಿಸಿ ಸಾವಯವ ಅರಿಷಿಣ ಪುಡಿ ಮಾರಾಟ). ಅಂತರ್ ಬೆಳೆಯಾಗಿ ಹೆಚ್ಚು ತರಕಾರಿ ಬೆಳೆಗಳು, ರಾತ್ರಿ ೧೦ ಘಂಟೆಯಿಂದ ಬೆಳಿಗ್ಗೆ ೪ ಘಂಟೆಯವರೆಗೆ ಬೆಳೆ ಹಾಗೂ ಜಾನುವಾರುಗಳಿಗೆ ಸಂಗೀತದ ಉಪಚಾರದಿಂದ ಇಳುವರಿಯಲ್ಲಿ ಸಕಾರಾತ್ಮಕ ವ್ಯತ್ಯಾಸ. ಜಾನುವಾರುಗಳು ಸ್ವ-ನೀರು ಕುಡಿಯಲು ಸೈಫನ್ ವ್ಯವಸ್ಥೆ ಅಳವಡಿಕೆ.

ಹೊಸ ಪ್ರಯೋಗ

ಮೇ ತಿಂಗಳಿನಲ್ಲಿ ಅರಿಷಿಣದ ನಾಟಿ, ಅರಿಷಿಣದ ನಾಟಿಯ ಒಂದು ತಿಂಗಳ ನಂತರ ಕಬ್ಬುನಾಟಿ, ಅರಿಷಿಣದಲ್ಲಿ ಸಾಲಿನಿಂದ ಸಾಲಿಗೆ ೪.೫ ಅಡಿ ಅಂತರ ಹಾಗೂ ಕಬ್ಬಿನಲ್ಲಿ ಸಾಲಿನಿಂದ ಸಾಲಿಗೆ ೯ ಅಡಿ ಅಂತರ, ನೆರಳು ಪ್ರಿಯ ಅರಿಷಿಣವನ್ನು ಕಬ್ಬಿನಲ್ಲಿ ಬೆಳೆಯುವುದರಿಂದ ನೈಸರ್ಗಿಕ ನೆರಳು ಲಭ್ಯವಾಗಿ, ನವೆಂಬರ ಡಿಸೆಂಬರ ತಿಂಗಳಲ್ಲಿ ಬೀಳುವ ಮಂಜಿನಿಂದ ಅರಿಷಿಣದ ಎಲೆಗಳಿಗೆ ಹಾನಿಯಾಗಿ ದ್ಯುತಿಸಂಶ್ಲೇಷಣಾ ಕ್ರಿಯೆಗೆ ತೊಂದರೆಯಾಗಿ ಇಳುವರಿ ಹಾಗೂ ಹಣ ಹಾಳಾಗುವುದನ್ನು ತಡೆಯಬಹುದಾಗಿದೆ ಎನ್ನುತ್ತಾರೆ ಶ್ರೀ ಧರೆಪ್ಪ. ಕಿತ್ತೂರ ಅವರ ಇನ್ನೊಂದು ವಿಶೇಷ ಎಂದರೆ ಬೆಳೆಗಳಿಗೂ ಜೀವ ಇದೆ, ಅವುಗಳಿಗೂ ಸಂಗೀತ ಬೇಕು ಎಂದು ಬೆಳೆದ ಬೆಳೆಗಳಿಗೆ, ಜಾನುವಾರುಗಳಿಗೆ ಪ್ರತಿದಿನ ರಾತ್ರಿ ಸಂಗೀತ ಸೇವೆ ನಡೆಯುತ್ತದೆ. ಎರಡು ಕಡೆ ಸೌಂಡ್ ಬಾಕ್ಸ್ ಅಳವಡಿಸಿದ್ದು, ಪ್ರತಿದಿನ ರಾತ್ರಿ ೧೦ ರಿಂದ ಬೆಳಿಗ್ಗೆ ೬ ಗಂಟೆಯವರೆಗೆ ತಬಲಾ, ಶಹನಾಯಿ, ಕ್ಲಾಸಿಕಲ್ಸ್ ಸೇರಿದಂತೆ ಬೇರೆ ಬೇರೆ ತರಹದ ಸಂಗೀತ ಕೇಳಿಸುತ್ತಾರೆ.

ಹನಿ ನೀರಾವರಿ

ತಮ್ಮ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಮಾಡಿಕೊಂಡಿದ್ದಾರೆ.. ರಾಸಾಯನಿಕ ಗೊಬ್ಬರ ಬಳಸದೇ ಕೇವಲ ಸಾವಯವ ಗೊಬ್ಬರ ಮಾತ್ರ ಬಳಸುತ್ತಿದ್ದಾರೆ. ಕೋಳಿ, ಎರೆಹುಳುಗೊಬ್ಬರ ಹಾಗೂ ೨೦ ಚಕ್ಕಡಿ ತಿಪ್ಪೆಗೊಬ್ಬರ ಮಾತ್ರ ಹಾಕಿದ್ದಾರೆ. ಇನ್ನೊಂದು ವಿಶೇಷ ಎಂದರೆ ಪ್ರತಿವಾರ ಜೀವಸಾರ ಘಟಕದಿಂದ (ಬಯೋಡೈಜೆಸ್ಟರ್) ಹನಿ ನೀರಾವರಿ ಮೂಲಕ ಬೆಳೆಗಳಿಗೆ ಬಿಡುತ್ತಾರೆ. ತೋಟಗಾರಿಕೆ ಬೆಳೆಗಳಾದ ಬಾಳೆ, ಪಪ್ಪಾಯಿ, ಚಿಕ್ಕು, ರಾಂಫಲ, ಸೀತಾಫಲ, ಅಂಜೂರ, ಮೋಸಂಬಿ, ಪಶ್ಚಿಮ ಬಂಗಾಲದ ಬಾರೆ ಹಣ್ಣು, ಮಾವು, ಪೇರಲ, ನೆಲ್ಲಿ, ತೆಂಗು, ಅಡಿಕೆ, ಕಲ್ಲಂಗಡಿ, ನುಗ್ಗೆಕಾಯಿ, ಗಜ್ಜರಿ, ಗೆಣಸು ಮುಂತಾದವು ಬೆಳೆಸಿದ್ದಾರೆ. ಮೌಲ್ಯವರ್ಧನೆ: ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಅರಿಷಿಣ ಪುಡಿಮಾಡುವ ಯಂತ್ರದಿಂದ ಅರಿಷಿಣ ಪುಡಿ ತಯಾರಿಸಿ ಸ್ವತಃ ಮಾರಾಟ ಮಾಡುವುದರಿಂದ ೨-೩ ಪಟ್ಟು ಲಾಭ ಪಡೆಯಬಹುದು ಎನ್ನುವ ಅವರು ಮಾರುಕಟ್ಟೆಯಲ್ಲಿ ಅರಿಷಿಣ ಬೆಲೆ ಪ್ರತಿ ಕಿ. ಗ್ರಾಂ ಗೆ ೧೦೦/- ಇದ್ದರೆ ಪ್ರಸ್ತುತ ವರ್ಷ (೨೦೧೩) ಅರಿಷಿಣ ಪುಡಿಯ ದರ ಪ್ರತಿ ಕಿ.ಗ್ರಾಂ ಗೆ ರೂ. ೨೦೦/- ಇದೆ. (೨೦೧೨ ರಲ್ಲಿ ಕಿ. ಗ್ರಾಂ ಗೆ ರೂ. ೩೦೦/- ಇತ್ತು) ಎನ್ನುತ್ತಾರೆ.

ಅರಸಿ ಕೊಂಡು ಬಂದ ಪ್ರಶಸ್ತಿಗಳು

೨೦೦೬-೦೭ ರಲ್ಲಿ ಕರ್ನಾಟಕ ಸರ್ಕಾರದಿಂದ ಸಮಗ್ರ
ಕೃಷಿ ಪಂಡಿತ ಪ್ರಶಸ್ತಿ. ೨೦೧೧-೧೨ ನೆಯ ಸಾಲಿನಲ್ಲಿ ಗೋದಿ ಬೆಳೆಯಲ್ಲಿ ಹೆಚ್ಚು ಉತ್ಪಾದನೆ ಮಾಡಿದ್ದಕ್ಕೆ (೨.೭೭ ಕ್ವಿಂ. ಪ್ರತಿ ಹೆಕ್ಟೇರಿಗೆ) ಮೊದಲನೇಯ ಬಹುಮಾನ. ಕೃಷಿ ವಿಶ್ವವಿದ್ಯಾಲಯ ಧಾರವಾಡ ಸಾವಯವ ಬೆಲ್ಲದ. ತಂತ್ರಜ್ಞಾನ ಸಂಸ್ಥೆ ಇವರಿಂದ ಪ್ರಮಾಣ ಪತ್ರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ ಇವರಿಂದ “ಶ್ರೇಷ್ಠ ತೋಟಗಾರಿಕೆ ರೈತ” ಪ್ರಶಸ್ತಿ-೨೦೧೩. ಕರ್ನಾಟಕ ಸರ್ಕಾರದಿಂದ ೨೦೧೨ ರಲ್ಲಿ ಆಯೋಜಿಸಿದ ಕೃಷಿ ಅಧ್ಯಯನದ ಚೀನಾ ಪ್ರವಾಸದಲ್ಲಿಯೂ ಭಾಗವಹಿಸಿದ ಇವರು ‘ಹೈನುಗಾರಿಕೆ ಅಣ್ಣ’, ‘ಕರ್ನಾಟಕ ಸೇವಾರತ್ನ’, ‘ರಾಜ್ಯಮಟ್ಟದ ಸದ್ಭಾವನಾ ಪ್ರಶಸ್ತಿ’, ‘ಚೆನ್ನಮ್ಮ ಪ್ರತಿಭಾ ಪುರಸ್ಕಾರ’ ಇತ್ಯಾದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ದಿನಾಂಕ: ೧೨.೨.೨೦೧೪ ರಂದು ಮಹಾರಾಷ್ಟ್ರದ ನಾಗಪೂರದ ‘ಕೃಷಿ ವಸಂತ ಉತ್ಸವದಲ್ಲಿ ರೈತ-ಕೃಷಿ ವಿಜ್ಞಾನಿ ತಾಂತ್ರಿಕ ಸಂವಾದದಲ್ಲಿಯೂ ಇವರು ಭಾಗವಹಿಸಿದ್ದರು.

ತಮ್ಮ ಈ ಎಲ್ಲ ಯಶಸ್ಸಿಗೆ ಅವರೇ ಹೇಳುವಂತೆ ಸಮಯೋಚಿತ ನಿರ್ಧಾರ, ಮೌಲ್ಯವರ್ಧನೆ, ಸ್ಥಳೀಯ ಸಂಪನ್ಮೂಲಗಳ ಸಮರ್ಥ ಬಳಕೆ ಹೆಚ್ಚು ಹೆಚ್ಚು ಮಿಶ್ರಬೆಳೆ ಹಾಗೂ ಸರಣಿ ಬೆಳೆಯ ಪ್ರಯೋಗಗಳ ಜೊತೆಗೆ ಕೃಷಿ ವಿಜ್ಞಾನಿಗಳ ಮಾರ್ಗದರ್ಶನ ಮತ್ತು ಆತ್ಮಾ ಯೋಜನೆಯ ಪ್ರೋತ್ಸಾಹ, ಇದೆಲ್ಲವನ್ನು ವಿನಮ್ರತೆಯಿಂದ ಸ್ಮರಿಸುವ ಶ್ರೀ ಧರೆಪ್ಪರವರು ತಮ್ಮ ಸುತ್ತುಮುತ್ತಲಿನ ರೈತರಿಗೆ ಒಬ್ಬ ಯಶಸ್ವಿ ಕೃಷಿಕರಾಗಿ ಮಾರ್ಗದರ್ಶನವನ್ನು ಮತ್ತು ಪ್ರೋತ್ಸಾಹವನ್ನು ನೀಡುತ್ತ ಕೃಷಿಯಿಂದ ಜನ ವಿಮುಖರಾಗದಂತೆ ಪ್ರೇರಣೆ ನೀಡುತ್ತಿದ್ದಾರೆ. ಸಂಪರ್ಕ ವಿಳಾಸ: ಧರೆಪ್ಪ ಪರಪ್ಪ ಕಿತ್ತೂರ, ಷೋ: ತೇರದಾಳ, ತಾ: ಜಮಖಂಡಿ, ಜಿ: ಬಾಗಲಕೋಟ.

ಇದನ್ನೂ ಓದಿ :- ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ ಉಚಿತ ಗ್ಯಾಸ್ ಸಬ್ಸಡಿ 10 ಕೋಟಿ ಮಹಿಳೆಯರಿಗೆ ಲಾಭವಾಗಲಿದೆ ತಕ್ಷಣ ಅರ್ಜಿ ಸಲ್ಲಿಸಿ

ಇದನ್ನೂ ಓದಿ :- ನಿಮ್ಮ ಬೋರ್ವೆಲ್ ನಲ್ಲಿ ನೀರು ಬರುತ್ತಿಲ್ಲವೇ?ತಕ್ಷಣವೇ ರೀಚಾರ್ಜ್ ಮಾಡಿಸಿ ಸರ್ಕಾರದಿಂದ ಸಬ್ಸಿಡಿ ಕೂಡ ಲಭ್ಯ ಇದರ ಸಂಪೂರ್ಣ ಮಾಹಿತಿ ನಿಮಗಾಗಿ

ಇದನ್ನೂ ಓದಿ :- ಕೇವಲ ಈ ಕೆಲಸ ಮಾಡಿ ಅರ್ಜಿ ಸಲ್ಲಿಸಿ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗಲಿದೆ 2.5 ಲಕ್ಷ ರೂಪಾಯಿ ಹಣ

Related Post

Leave a Reply

Your email address will not be published. Required fields are marked *