Breaking
Wed. Dec 18th, 2024

ಈ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗಿದೆ, ಬರದವರ್ ಸಮಸ್ಯೆ ಪರಿಹರಿಸಲು ದಾರಿ

Spread the love

ನಿನ್ನೆ ಮಧ್ಯಾಹ್ನ 2.36 ಗಂಟೆಗೆ ನಮ್ಮ ತಾಯಿಯ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ ಆಗಿದೆ. ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಯಾಂಪ್‌ಗಳ ಆಯೋಜನೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಯಾಂಪ್‌ಗಳನ್ನು ಆಯೋಜಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿರುವ ಹಿನ್ನೆಲೆ ಡಿಸೆಂಬರ್ 27 ರಿಂದ 29 ರವರೆಗೆ ಕ್ಯಾಂಪ್‌ಗಳನ್ನು ಆಯೋಜಿಸಲಾಗಿದೆ.

ಸರ್ಕಾರವು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿ ಹೊಂದಿರುವ ಗೃಹಲಕ್ಷ್ಮಿ ಯೋಜನೆಗೆ ಜುಲೈ 19 ರಂದು ಚಾಲನೆ ನೀಡಿರುತ್ತದೆ. ಇದುವರೆಗೂ 1.17 ಕೋಟಿ ಮಹಿಳಾ ಕುಟುಂಬ ಮುಖ್ಯಸ್ಥರು ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದು, ಪ್ರತಿ ತಿಂಗಳು ಅವರುಗಳ ಬ್ಯಾಂಕ್ ಖಾತೆಗೆ ರೂ.2,000/-ಗಳನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿ ಮಾಡಲಾಗುತ್ತಿದೆ.

ಈ ಪ್ರಕ್ರಿಯೆಯಲ್ಲಿ ಸುಮಾರು 2.5 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡದೇ ಇರುವುದು ಮತ್ತು ಸುಮಾರು 70,000 ನಿಷ್ಕ್ರಿಯ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿರುವುದು ಕಂಡು ಬಂದಿರುತ್ತದೆ. ಈ ಫಲಾನುಭವಿಗಳು ಹೊಸ ಬ್ಯಾಂಕ್ ಖಾತೆ ತೆರೆಯಲು ಇಚ್ಚಿಸಿರುವುದು ಗಮನಕ್ಕೆ ಬಂದಿರುತ್ತದೆ. ಬಹಳಷ್ಟು ಫಲಾನುಭವಿಗಳು ನೇರ ನಗದು ವರ್ಗಾವಣೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡುವುದು ಅಗತ್ಯವಿರುತ್ತದೆ.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಕ್ಯಾಂಪ್‌ಗಳನ್ನು ಆಯೋಜಿಸತಕ್ಕದ್ದು. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಮತ್ತು ಬ್ಯಾಂಕ್ ಸಂಬಂಧಿಸಿದ ಸಮಸ್ಯೆಗಳನ್ನು ಈ ಕ್ಯಾಂಪ್‌ಗಳಲ್ಲಿ ಪರಿಹರಿಸತಕ್ಕದ್ದು. ಸ್ಥಳೀಯ ಬಾಪೂಜಿ ಸೇವಾ ಕೇಂದ್ರದ ಗಣಕ ಯಂತ್ರ ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತರು & Electronic Delivery of Citizen Services (EDCS) ತಂಡಗಳು ಈ ಕ್ಯಾಂಪ್‌ಗಳಲ್ಲಿ ಭಾಗವಹಿಸಬೇಕು.

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ ಪ್ರತಿನಿಧಿಗಳು ಮತ್ತು ಇತರೆ ಬ್ಯಾಂಕ್‌ಗಳ ಪ್ರತಿನಿಧಿಗಳು ಈ ಕ್ಯಾಂಪ್‌ಗಳಲ್ಲಿ ಭಾಗವಹಿಸತಕ್ಕದ್ದು. ಕ್ಯಾಂಪ್‌ಗಳಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡುವುದು. ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ಅಧಾರ್ ಜೋಡಣೆ ಮಾಡುವುದು. ಇ-ಕೆವೈಸಿ ಅಪ್‌ಡೇಟ್ ಮಾಡುವುದು. ಗೃಹಲಕ್ಷ್ಮಿ ಅರ್ಜಿಯ ಸ್ಥಿತಿ ಪರಿಶೀಲಿಸುವುದು. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಇತರೆ ಸಮಸ್ಯೆಗಳನ್ನು ಪರಿಹರಿಸುವುದು. ಕ್ಯಾಂಪ್‌ಗಳನ್ನು ಆಯೋಜಿಸುವ ಕುರಿತು ಡಿಸೆಂಬರ್ 22 ರಂದು ಕ್ಯಾಂಪ್ ಆಯೋಜಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ಆಯೋಜಿಸುವುದು.

ಪ್ರತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಿಸೆಂಬರ್ 27 ರಿಂದ 29 ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕ್ಯಾಂಪ್‌ಗಳನ್ನು ಆಯೋಜಿಸುವುದು. ಕ್ಯಾಂಪ್ ಆಯೋಜಿಸುವ ಕುರಿತು ಫಲಾನುಭವಿಗಳಿಗೆ ಇಡಿಸಿಎಸ್ ರವರು ಎಸ್‌ಎಂಎಸ್ ಮೂಲಕ ಮಾಹಿತಿ ನೀಡುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕ್ಷೇತ್ರಮಟ್ಟದ ಸಿಬ್ಬಂದಿಗಳು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮಾಹಿತಿ ನೀಡಿ, ಅವರನ್ನು ಕ್ಯಾಂಪ್‌ಗಳಿಗೆ ಕರೆತರುವ ಜವಾಬ್ದಾರಿ ನಿರ್ವಹಿಸುವುದು.

ಕ್ಯಾಂಪ್ ಆಯೋಜಿಸುವ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪತ್ರಿಕೆ ಮತ್ತು ಇತರೆ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡತಕ್ಕದ್ದು. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಕ್ಯಾಂಪ್‌ಗಳನ್ನು ಆಯೋಜಿಸಿ ಯಶಸ್ವಿಗೊಳಿಸುವಂತೆ ಅಧಿಕೃತ ಪ್ರಕಟಣೆ ತಿಳಿಸಿದೆ.

ಹರ್ಬಲ್ ಸ್ಪಟೆಜಿಯಿಂದ ಹರ್ಬಲ್ ಸೊಳ್ಳೆ ಮತ್ತು ಜಿರಳೆಗಳ ನಿವಾರಕ

ನೈಸರ್ಗಿಕ ಮತ್ತು ಪರಿಸರ ಸ್ನೇಹಿ ಕೀಟ ನಿಯಂತ್ರಣ ಪರಿಹಾರಗಳನ್ನು ಒದಗಿಸುವ ಹೆಸರಾಂತ ಹೆಸರು ಹರ್ಬಲ್ ಸ್ಪಟೆಜಿ, ಎರಡು ಹೊಸ ಪ್ರಮಾಣೀಕೃತ ಆಯುರ್ವೇದ ಏರೋಸಾಲ್(ವಾಯುದ್ರವ) ಕೀಟ ನಿವಾರಕಗಳನ್ನು ಹೆಮ್ಮೆಯಿಂದ ಅನಾವರಣಗೊಳಿಸಿದೆ. ಹರ್ಬಲ್ ಸ್ಪಟೆಜಿ ಆಯುರ್ವೇದ ಸೊಳ್ಳೆ ನಿವಾರಕ ಏರೋಸಾಲ್: ಡೀಟ್-ಮುಕ್ತ, ವಿಷಕಾರಿಯಲ್ಲದ ಮತ್ತು ಶೇ.100 ಗಿಡಮೂಲಿಕೆಗಳ ಬಳಕೆಯಿಂದ ತಯಾರಿಸಲಾಗಿದೆ. ಆಯುಷ್ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟಿರುವ.

ಈ ಉತ್ಪನ್ನವು ಸೊಳ್ಳೆಗಳನ್ನು ತಕ್ಷಣವೇ ಹಿಮ್ಮೆಟ್ಟಿಸುತ್ತದೆ ಆದರೆ ಪ್ರೋಟೋಕಾಲ್ ಪ್ರಕಾರ ನಿಯಮಿತ ಬಳಕೆಯೊಂದಿಗೆ ಇದು ಸೊಳ್ಳೆಗಳಿಂದ ದೀರ್ಘಾವಧಿಯ ಪರಿಹಾರವನ್ನು ನೀಡುತ್ತದೆ. ಹರ್ಬಲ್ ಸ್ಪಟೆಜಿ ಆಯುರ್ವೇದ ಜಿರಳೆ ನಿವಾರಕ ಏರೋಸಾಲ್: ಇದು ಪರಿಣಾಮಕಾರಿ ಮತ್ತು ವಿಷಕಾರಿಯಲ್ಲದ ಪರಿಹಾರವಾಗಿದೆ. ಆಯುಷ್ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟಿದೆ. ಈ ಉತ್ಪನ್ನವು ಜಿರಳೆಗಳನ್ನು ತಕ್ಷಣವೇ ಹಿಮ್ಮೆಟ್ಟಿಸುತ್ತದೆ.

ನಿಯಮಿತ ಬಳಕೆಯೊಂದಿಗೆ ಇದು ಜಿರಳೆಗಳಿಂದ ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತದೆ. ಅನುಕೂಲಕರ ಏರೋಸಾಲ್ ಸ್ಪೇನಲ್ಲಿ ಶಕ್ತಿಯುತವಾದ ರಕ್ಷಣೆಯನ್ನು ಪಡೆಯಿರಿ. ನೈಸರ್ಗಿಕ ಪದಾರ್ಥಗಳೊಂದಿಗೆ ನಿಮ್ಮ ಮನೆಯನ್ನು ಜಿರಳೆ ಮುಕ್ತವಾಗಿರಿಸಿಕೊಳ್ಳಿ. ಈ ಸಂದರ್ಭದಲ್ಲಿ ಮಾತನಾಡಿದ ಹರ್ಬಲ್ ಸ್ಪಟೆಜಿಯ ಸಹ ಸಂಸ್ಥಾಪಕ ಜಾನ್ ಥಾಮಸ್, “ಹರ್ಬಲ್ ಸ್ಪಟೆಜಿ ಆಯುರ್ವೇದ ಏರೋಸಾಲ್ ನಿವಾರಕ ಸ್ನೇಗಳು ರಾಸಾಯನಿಕ ಆಯ್ಕೆಗಳಿಗೆ ನೈಸರ್ಗಿಕ ಮತ್ತು ಸುರಕ್ಷಿತ ಪರ್ಯಾಯವನ್ನು ನೀಡುತ್ತವೆ ಎಂದು ಹೇಳಿದ್ದಾರೆ.

ನನ್ನ ಭಾರತ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಯುವಜನರಿಗೆ ಕರೆ

ಕೊಪ್ಪಳ : ನನ್ನ ಭಾರತ (ಮೇರಾ ಯುವ ಭಾರತ) ಇದು ಪ್ರಧಾನ ಮಂತ್ರಿಗಳ ಉದ್ದೇಶಿತ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮವು ಅಕ್ಟೋಬರ್ 31 ರಂದು ದೆಹಲಿಯಲ್ಲಿ ಉದ್ಘಾಟನೆಗೊಂಡಿರುತ್ತದೆ.

ವಿಕಸಿತ ಭಾರತ ಕಾರ್ಯಕ್ರಮಕ್ಕೆ, ಯುವಜನರ ಸಬಲೀಕರಣ, ಯುವ ಮುಂದಾಳತ್ವ, ವಿವಿಧ ಅಭಿವೃದ್ಧಿ ಯೋಜನೆಗಳು, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆ ಕಾರ್ಯಕ್ರಮಗಳು, ಸಚಿವಾಲಯಗಳ/ಇಲಾಖೆಗಳ ಮಾಹಿತಿಗಳನ್ನು ಈ ಪೋರ್ಟಲ್ ಮೂಲಕ ತಿಳಿದುಕೊಳ್ಳುವುದು ಯುವಜನರಿಗೆ ಮುಖ್ಯವಾಗಿರುತ್ತದೆ ಎಂದು ಕೇಂದ್ರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಸಚಿವರಾದ ಅನುರಾಗ್‌ಸಿಂಘ ಠಾಕೂರ ರವರು ಸಭೆಯ ಮೂಲಕ ತಿಳಿಸಿರುತ್ತಾರೆ.

ಆದ್ದರಿಂದ ನನ್ನ ಭಾರತ ಪೋರ್ಟಲ್‌ನಲ್ಲಿ ಯುವ ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಮುಕ್ತ ಅವಕಾಶವಿದ್ದು, ಆಸಕ್ತರು ಪೋರ್ಟಲ್ www.mybharat.gov.in ಗೆ ಲಾಗಿನ್ ಆಗಿ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಯಾವುದೇ ಶುಲ್ಕವಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಅಧಿಕಾರಿ, ನೆಹರು ಯುವ ಕೇಂದ್ರ, ಕೊಪ್ಪಳ, ಮೋ: 08539-230116 ಇಲ್ಲಿಗೆ ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕರಿ ಮಾಂಟು ಪತ್ತಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *