Breaking
Tue. Dec 17th, 2024

ಈ ವರ್ಷದ ಬೆಳೆ ವಿಮೆಗೆ ಸೇರ್ಪಡಿಸಲಾದ ಬೆಳೆಗಳಲ್ಲಿ ಇಷ್ಟನ್ನು ಬಿಡುಗಡೆ ಮಾಡಲಾಗಿದೆ.

By mveeresh277 May15,2024
Spread the love

ಆತ್ಮೀಯ ರೈತ ಬಾಂಧವರೇ,

ಕೇಂದ್ರ ಸರ್ಕಾರದ ದಿನಾಂಕ:25-04-2018ರ ಪತ್ರದಲ್ಲಿ, 2018-19 ಹಾಗೂ ನಂತರದ ವರ್ಷಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿರುತ್ತದೆ.

ಕೇಂದ್ರ ಸರ್ಕಾರದ ದಿನಾಂಕ:28-09-2018ರ ಪತ್ರದಲ್ಲಿ, ಪರಿಷ್ಕೃತ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಮಾರ್ಪಡಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಮಾರ್ಗಸೂಚಿಯನ್ನು ಒದಗಿಸಲಾಗಿರುತ್ತದೆ.

ಕೃಷಿ ನಿರ್ದೇಶನ  2020- 21ನೇ ಸಾಲಿನಿಂದ ಪರಿಷ್ಕೃತ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ Revamped PMFBY ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿಯನ್ನು ನೀಡಿರುತ್ತದೆ.

2020-21ನೇ ಸಾಲಿನಿಂದ ಬೆಳೆ ಸಾಲ ಪಡೆದ ರೈತರಿಗಾಗಿ ಕಡ್ಡಾಯವಾಗಿ ಬೆಳೆ ವಿಮ ನೋಂದಣಿಯ ಬದಲು Opting out facility ಯನ್ನು ಒದಗಿಸಲಾಗಿದೆ.

ದಿನಾಂಕ:06.02.2023 ರಂದು ನಡೆದ ರಾಜ್ಯ ಮಟ್ಟದ ಬೆಳೆ ವಿಮೆ ಸಮನ್ವಯ ಸಮಿತಿ ಸಭೆಯು ರಾಜ್ಯದಲ್ಲಿ ಪರಿಷ್ಕೃತ ಮಾರ್ಗಸೂಚಿಯನ್ವಯ ಪುಧಾನ ಮಂತ್ರಿ ಫಸಲ್ ಬಿಮಾ ಯೋಜನೆ & ಮಾರ್ಪಡಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು 2023-24ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡುತ್ತಾ, ಯೋಜನೆಯ ಸಮರ್ಪಕ ಅನುಷ್ಠಾನ ಕುರಿತು ಹಲವಾರು ನಿರ್ದೇಶನಗಳನ್ನು ನೀಡಿರುತ್ತದೆ.

ಕೃಷಿ ಆಯುಕ್ತರ ಪ್ರಸ್ತಾವನೆ ದಿನಾಂಕ:30.09.2023 ರಲ್ಲಿ 2023-24ರ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿವಿಧ ಬೆಳೆಗಳನ್ನು ತಾಲ್ಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಸೂಚಿಸುವಂತೆ ಕೋರಿರುತ್ತಾರೆ.

ರಾಜ್ಯದಲ್ಲಿ ಪರಿಷ್ಕೃತ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (Revamped PMFBY) ಯನ್ನು ಅನುಷ್ಠಾನಗೊಳಿಸಲು ಜಿಲ್ಲೆಗಳ ಕ್ಲಸ್ಟರ್ ವಾರು (ಗುಂಪುವಾರು) ವಿಮಾ ಸಂಸ್ಥೆಗಳನ್ನು ಹಾಗೂ ವಿಮಾ ಸಂಸ್ಥೆಗಳು ಕ್ಲಸ್ಟರ್‌ವಾರು ನಮೂದಿಸಿರುವ ಅತಿ ಕಡಿಮೆ ವೈಟೆಡ್ ಪ್ರೀಮಿಯಂ ದರಗಳನ್ನು  ನಿಗದಿಪಡಿಸಲು ಪ್ರಸ್ತುತ ಮುಂದಿನ ಮೂರು ವರ್ಷಗಳಿಗೆ ಕರೆದಿರುವ ಟೆಂಡ‌ರ್ ಅನ್ನು ಆರ್ಥಿಕ ಇಲಾಖೆ, ಈ ಕಂಪನಿಗಳ ಟೆಂಡರ್ ನಿಗದಿಪಡಿಸಲಾಗಿದೆ.

ದಿನಾಂಕ:19.06.2023 ರಲ್ಲಿ ನೀಡಿರುವ ಸಹಮತದನ್ವಯ ಕೃಷಿ ಬೆಳೆಗಳಿಗೆ ಮಾತ್ರ [ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಮಾತ್ರ (PMFBY)] ಅಳವಡಿಸಿಕೊಳ್ಳಲು, ಮೂರು ವರ್ಷಗಳ ಬದಲಿಗೆ ಕೇವಲ 2023-24ನೇ ಸಾಲಿನ ಆರ್ಥಿಕ ವರ್ಷಕ್ಕೆ ಸೀಮಿತಗೊಳಿಸಿ ಅನುಮೋದನೆ ನೀಡಿದೆ. ರಾಜ್ಯದಲ್ಲಿ 2023-24ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಮುಂದಿನ ಅಂಶಗಳನ್ನೊಳಗೊಂಡಂತೆ ಅನುಷ್ಠಾನಗೊಳಿಸಲು ಸರ್ಕಾರವು ಈ ಮೂಲಕ ಮಂಜೂರಾತಿ ನೀಡಿದೆ. ಇದರಿಂದ ರೈತರು ತಮ್ಮ ತಮ್ಮ ಬೆಳೆ ವಿಮೆಯನ್ನು ತುಂಬಲು ಅಧಿಸೂಚನೆಯನ್ನು ನೀಡಿದೆ. ಈ ಕೆಳಗೆ ಪ್ರಕಟಿಸಿರುವ ಬೆಳೆಗಳನ್ನು ಕರ್ನಾಟಕ ರಾಜ್ಯ ಸರ್ಕಾರ ಬೆಳಗಿನ ಪಟ್ಟಿಯಲ್ಲಿ ಸೇರಿಸಿ ರೈತರಿಗೆ ಇನ್ನು ಸಹಾಯ ಮಾಡುವಲ್ಲಿ ಯಶಸ್ವಿಯಾಗಿದೆ.

1) ಮುಖ್ಯ ಬೆಳೆಗಳನ್ನು ಹಾಗೂ ಇತರ ಬೆಳೆಗಳನ್ನು ತಾಲ್ಲೂಕುವಾರು ಪರಿಗಣಿಸುವುದು. ಆಯಾ ತಾಲ್ಲೂಕಿನಲ್ಲಿ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತ್/ ನಗರ ಸ್ಥಳೀಯ ಸಂಸ್ಥೆಗಳನ್ನು ವಿಮಾ ಘಟಕವಾಗಿ ಹಾಗೂ ಇತರೆ ಬೆಳೆಗಳಿಗೆ ಹೋಬಳಿಯನ್ನು ವಿಮಾ ಘಟಕವಾಗಿ ಪರಿಗಣಿಸುವುದು. 2023-24ರ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಅಧಿಸೂಚಿಸುವ ವಿವಿಧ ಆಹಾರ, ಎಣ್ಣೆಕಾಳು, ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳ ಪಟ್ಟಿ ಈ ಕೆಳಗಿನಂತಿರುತ್ತದೆ.

2) ತಾಲ್ಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಸೂಚಿಸಬೇಕಾದರೆ ಆ ಬೆಳೆಯ ವಿಸ್ತೀರ್ಣ ಕನಿಷ್ಠ 50 ಹೆಕ್ಟೇರ್ ಇರಬೇಕು. ಹೋಬಳಿ ಮಟ್ಟದಲ್ಲಿ ಬೆಳೆಗಳನ್ನು ಅಧಿಸೂಚಿಸಲು ಆ ಬೆಳೆಯ ವಿಸ್ತೀರ್ಣ ಕನಿಷ್ಠ 125 ಹೆಕ್ಟೇರ್ (100 ಹೆಕ್ಟೇರ್-ತೋಟಗಾರಿಕೆ ಬೆಳೆಗಳಿಗೆ) ಇರತಕ್ಕದ್ದು.

3) 2023-24ನೇ ಸಾಲಿನ ಹಿಂಗಾರು ಹಂಗಾಮಿನ ತಾಲೂಕುವಾರು ಮುಖ್ಯ ಬೆಳೆಗಳ ಹಾಗೂ ಇತರೆ ಬೆಳೆಗಳ ಪಟ್ಟಿಯನ್ನು ಅನುಬಂಧ-1(ಎ) ರಲ್ಲಿ ಹಾಗೂ ಬೇಸಿಗೆ ಹಂಗಾಮಿನ ತಾಲ್ಲೂಕುವಾರು ಮುಖ್ಯ ಬೆಳೆಗಳ ಹಾಗೂ ಇತರೆ ಬೆಳೆಗಳ ಪಟ್ಟಿಯನ್ನು ಅನುಬಂಧ-1(ಬಿ) ರಲ್ಲಿ ನೀಡಿದೆ.

4) ಹಿಂಗಾರು ಹಂಗಾಮಿನ ವಿವಿಧ ಆಹಾರ, ಎಣ್ಣೆಕಾಳು, ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆವಾರು ಮುಖ್ಯ ಬೆಳೆಗಳ ವಿಮಾ ಘಟಕಗಳ ಪಟ್ಟಿಯನ್ನು ಅನುಬಂಧ-2(ಎ) ರಲ್ಲಿ ಮತ್ತು ಇತರೆ ಬೆಳೆಗಳ ವಿಮಾ ಘಟಕಗಳ ಪಟ್ಟಿಯನ್ನು ಅನುಬಂಧ-2(ಬಿ) ರಲ್ಲಿ ನೀಡಿದೆ.

5) ಬೇಸಿಗೆ ಹಂಗಾಮಿನ ವಿವಿಧ ಆಹಾರ, ಎಣ್ಣೆ ಕಾಳು, ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳವಾರು ಮುಖ್ಯ ಬೆಳೆಗಳ ವಿಮಾ ಘಟಕಗಳ ಪಟ್ಟಿಯನ್ನು ಅನುಬಂಧ-3(ಎ) ರಲ್ಲಿ ಮತ್ತು ಇತರೆ ಬೆಳೆಗಳ ವಿಮಾ ಘಟಕಗಳ ಪಟ್ಟಿಯನ್ನು ಅನುಬಂಧ-3(ಬಿ) ರಲ್ಲಿ ನೀಡಿದೆ.

6)ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ 2023-24 ನೇ ಸಾಲಿನ ಹಿಂಗಾರು

ಹಂಗಾಮಿನಲ್ಲಿ ವಿವಿಧ ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳನ್ನು ವಿವಿಧ ವಿಮಾ ಘಟಕಗಳಿಗೆ ಅಳವಡಿಸಿ ಸರ್ಕಾರದ ಅಧಿಸೂಚನೆಯನ್ನು ತೋಟಗಾರಿಕೆ ಇಲಾಖೆಯಿಂದ ಪಡೆಯತಕ್ಕದ್ದು.

ಇದನ್ನು ಓದಿ :- ಈಗಾಗಲೇ ಬೆಳೆ ಹಾನಿ ಪರಿಹಾರ ರೈತರ ಖಾತೆಗೆ ಹಣ ಜಮಾ ಆಗಿದೆ ಇದೀಗ ಬೆಳೆ ವಿಮೆ ಕೂಡ ಜಮಾ ಕೂಡಲೇ ಚೆಕ್ ಮಾಡಿ

7) 2023-24ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಗಳಿಗೆ ನಿಗಧಿಪಡಿಸಲಾಗಿರುವ ಇಂಡೆಮ್ಮಿಟಿ ಮಟ್ಟ, ವಿಮಾ ಮೊತ್ತ ಮತ್ತು ಶೇಕಡವಾರು ಗರಿಷ್ಠ ರೈತರ ಪಾಲಿನ ವಿಮಾ ಕಂತಿನ ವಿವರಗಳನ್ನು ಅನುಬಂಧ-4 ರಲ್ಲಿ ನೀಡಿದೆ.

8) 2023-24ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಗಳಿಗೆ ಇಂಡಮ್ಮಿ ಮೊತ್ತವನ್ನು ನೀರಾವರಿ ಬೆಳೆಗಳಿಗೆ ಶೇ.90 ಹಾಗೂ ಮಳೆ ಆಶ್ರಿತ ಬೆಳೆಗಳಿಗೆ ಶೇ.80 ಎಂದು ನಿಗದಿಪಡಿಸಲಾಗಿದೆ.

9) ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳವಾರು ಬೆಳೆ ಸಾಲದ ಪ್ರಮಾಣದ (Scale of finance) ಆಧಾರದ ಮೇಲೆ ನಿರ್ಧರಿಸಲಾಗಿದೆ.

ಇದನ್ನೂ ಓದಿ :- ಬೆಳೆ ಪರಿಹಾರ ಎಲ್ಲರಿಗೂ ಬಂದಿದೆ ನಿಮಗೆ ಮಾತ್ರ ಬಂದಿಲ್ಲವೇ?? ಈ ದಾಖಲಾತಿಗಳನ್ನು ತಗೆದುಕೊಂಡು ಕೂಡಲೇ ಈ ಕಚೇರಿಗೆ ಹೋಗಿ

10) ಪ್ರಾರಂಭಿಕ ಇಳುವರಿ (Threshold Yield) ಲೆಕ್ಕ ಹಾಕುವಾಗ ಹಿಂದಿನ 7 ವರ್ಷಗಳು ಅಂದರೆ 2016- 17 ನೇ ವರ್ಷದಿಂದ 2022-23 ವರ್ಷದವರೆಗಿನ ಇಳುವರಿಯನ್ನು ಪರಿಗಣಿಸಿ ಇದರಲ್ಲಿ ಉತ್ತಮ 5 ವರ್ಷಗಳ ಸರಾಸರಿ ಇಳುವರಿಯನ್ನು ಪರಿಗಣಿಸುವುದು.

11) Revamped PMFBY ಯೋಜನೆಯಡಿ ಒಟ್ಟು ವಿಮಾ ಕಂತಿನ ದರದಲ್ಲಿ ರೈತರ ವಂತಿಗೆ ಹೊರತು ಪಡಿಸಿದ ನಂತರ ಉಳಿದ ವಿಮಾ ಕಂತಿನ ರಿಯಾಯಿತಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರವು 50:50 ಅನುಪಾತದಲ್ಲಿ ಸಮವಾಗಿ ಭರಿಸುತ್ತವೆ. ಆದರೆ ಕೇಂದ್ರ ಸರ್ಕಾರವು Capping Limit ನಿಗದಿಪಡಿಸಿದ್ದು, ನೀರಾವರಿ ಜಿಲ್ಲೆಗಳ ಬೆಳೆಗಳಿಗೆ ವಿಮಾ ಕಂತಿನ ಶೇ.25 ರವರೆಗೆ ಹಾಗೂ ಮಳೆಯಾಶ್ರಿತ ಜಿಲ್ಲೆಗಳ ಬೆಳೆಗಳಿಗೆ ವಿಮಾ ಕಂತಿನ ಶೇ.30 ರವರೆಗೆ ಕೇಂದ್ರ ಸರ್ಕಾರವು ಭರಿಸುತ್ತದೆ. ಪುಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರವು Capping Limit ನಿಗಧಿಪಡಿಸಿದ್ದು ಕೇಂದ್ರ ಸರ್ಕಾರದ Capping Limit ನಂತರ ಹೆಚ್ಚುವರಿಯಾಗಿ ಶೇ.10 ರಷ್ಟು ಭರಿಸುತ್ತದೆ. ಅಂದರೆ, ನೀರಾವರಿ ಜಿಲ್ಲೆಗಳ ಬೆಳೆಗಳಿಗೆ ವಿಮಾ ಕಂತಿನ ಶೇ.35 ರವರೆಗೆ ಹಾಗೂ ಮಳೆಯಾಶ್ರಿತ ಜಿಲ್ಲೆಗಳ ಬೆಳೆಗಳಿಗೆ ವಿಮಾ ಕಂತಿನ ಶೇ.40 ರವರೆಗೆ ಮಾತ್ರ ರಾಜ್ಯ ಸರ್ಕಾರವು ಭರಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ Capping limit ಮೀರಿದಂತಹ ಕೆಲವು ಜಿಲ್ಲಾ ಬೆಳೆ ಸಂಯೋಜನೆಗಳಲ್ಲಿ ವಿಮಾ ಕಂತಿನ ದರಗಳು ನಿಗಧಿಯಾದಲ್ಲಿ ಅಂತಹ ಜಿಲ್ಲಾ ಬೆಳೆ ಸಂಯೋಜನೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮೋದನೆಗೊಳಿಸಿದೆ.

12) ಈ ಯೋಜನೆಯಡಿ ಪ್ರಸ್ತುತ ಸಾಲು ಹಾಗೂ ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಇಚ್ಛೆಯುಳ್ಳ ಬೆಳೆ ಸಾಲ ಪಡೆದ/ಪಡೆಯದ ರೈತರು ಯೋಜನೆಯಡಿ ಭಾಗವಹಿಸಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ/ ಕಂದಾಯ ರಶೀದಿ / ಖಾತೆ ಪುಸ್ತಕ / ಪಾಸ್ ಪುಸ್ತಕ ಮತ್ತು ಆಧಾರ್ ಸಂಖ್ಯೆ ನೀಡುವುದು, ಮುಂದುವರೆದು, 2023-24ನೇ ಸಾಲಿನಿಂದ ಬೆಳೆ ವಿಮೆ ನೋಂದಣಿಗಾಗಿ ರೈತರು ಕಡ್ಡಾಯವಾಗಿ FRUITS ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡಿದ್ದು, FRUITS ID ಹೊಂದಿರತಕ್ಕದ್ದು.

13) Revamped PMFBY ಮಾರ್ಗಸೂಚಿಯನ್ವಯ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿಯಲ್ಲಿ ಒಳಪಡಿಸಲಾಗುವುದು, ತದನಂತರ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡೆಯದೇ ಇದ್ದಲ್ಲಿ ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು. ಸಂಬಂಧಿಸಿದ ಬ್ಯಾಂಕುಗಳು ಈ ರೀತಿ ಸ್ವೀಕರಿಸಲಾದ ಮುಚ್ಚಳಿಕೆ ಪತ್ರಗಳನ್ನು ಇತರೆ ದಾಖಲೆಗಳೊಂದಿಗೆ ವ್ಯವಸ್ಥಿತವಾಗಿ ನಿರ್ವಹಿಸತಕ್ಕದ್ದು.

14) ಬೆಳೆ ಸಾಲ ಪಡೆಯುವ ರೈತರಿಗೆ ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿದಲ್ಲಿ, ಮಂಜೂರಾದ ಬೆಳೆ ಸಾಲದ ಮೊತ್ತದ ಜೊತೆಗೆ ರೈತರ ವಿಮಾ ಕಂತನ್ನು ಹೆಚ್ಚುವರಿ ಸಾಲವನ್ನಾಗಿ ನಿಯಮಾನುಸಾರ ಮಂಜೂರು ಮಾಡತಕ್ಕದ್ದು.

15) ಈ ಯೋಜನೆಯ ಮಾರ್ಗಸೂಚಿಗಳನ್ವಯ ಆರ್ಥಿಕ ಸಂಸ್ಥೆಗಳು / ಬ್ಯಾಂಕ್ / ಸಾಮಾನ್ಯ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ರೈತರನ್ನು ಬೆಳೆ ವಿಮೆಗೆ ನೋಂದಾಯಿಸಿದಾಗ ಬೆಳೆ ವಿಮೆ ಪ್ರಸ್ಥಾವನೆಗಳನ್ನು ಹಾಗೂ ವಿಮಾ ಕಂತನ್ನು ನಿಗಧಿತ ಸಮಯದೊಳಗೆ ನಿಯಮಾನುಸಾರ ಅನುಷ್ಠಾನ ವಿಮಾ ಸಂಸ್ಥೆಗಳಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳತಕ್ಕದ್ದು. ನೋಂದಣಿ ಪ್ರಕ್ರಿಯೆಯ ಹಂತದಲ್ಲಿ ಮೇಲೆ ತಿಳಿಸಿದ ಸಂಸ್ಥೆಗಳ ನಿರ್ಲಕ್ಷದಿಂದ ಯಾವುದೇ ಲೋಪದೋಷಗಳು ಉಂಟಾದಲ್ಲಿ ಬೆಳೆವಿಮೆ ಪರಿಹಾರಕ್ಕೆ ಸಂಬಂಧಿಸಿದ ಕಂಪನಿಗಳು ನೇರ ಹೊನೆಯಾಗಿರುತ್ತದೆ. ಇದರಲ್ಲಿ ಕೃಷಿ ಇಲಾಖೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಯಾವುದೇ ಪ್ರಮುಖ ಪಾತ್ರ ಇರುವುದಿಲ್ಲ ಹಾಗಾಗಿ ರೈತರು ನೇರವಾಗಿ ಆ ಕಂಪನಿಗಳನ್ನು ಸಂಪರ್ಕಿಸಬಹುದಾಗಿದೆ. ಆ ಕಂಪನಿಗಳ ಲಿಸ್ಟನ್ನು ಸದ್ಯದಲ್ಲೇ ಕೃಷಿ ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತದೆ. 20-2023 ನೇ ಸಾಲಿನ ಬೆಳೆ ವಿಮೆ ಸರ್ವೆಯನ್ನು ಮಾಡಲಾದ ಕರ್ನಾಟಕದಲ್ಲಿ ಬಜಾಜ್ ಕಂಪನಿ ಗೆ ನೀಡಲಾಗುತ್ತು. ಆದರೆ ಈ ಸಾಲಿನಲ್ಲಿ ಆ ಟೆಂಡರ್ ಯಾರಿಗೆ ದೊರಕುತ್ತದೆ ಎಂದು ಕೆಲವೇ ಸಮಯದಲ್ಲಿ ತಿಳಿದು ಬರುತ್ತದೆ.

16) 2023-24 ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆ ವಿಮೆಗೆ ನೋಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರಿಗೆ ಜಿಲ್ಲಾವಾರು ಹಾಗೂ ಬೆಳೆವಾರು ಕೊನೆಯ ದಿನಾಂಕವನ್ನು ಬಿತ್ತನೆ ಅವಧಿ ಮತ್ತು ಕಟಾವು ಅವಧಿಯನ್ನು ಹಾಗೂ ಗ್ರಾಮ ಪಂಚಾಯಿತಿ ವಿಮಾ ಘಟಕಗಳಲ್ಲಿ ಬಿತ್ತನೆ ವಿಫಲಗೊಂಡಲ್ಲಿ/ ಮೊಳಕೆ ಬಾರದಿದ್ದರೆ Prevented sowing Invoke Annexure-I, Annexure-II, Annexure-III 2, Annexure-IV ໖ .

17) ಯೋಜನೆಯಡಿಯಲ್ಲಿ ಬೆಳೆ ಸಾಲ ಪಡೆಯದ ರೈತರು ಅಂದಾಜು/ಅಪೇಕ್ಷಿತ ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲೇ ಪಾಲ್ಗೊಳ್ಳಬಹುದು. ಬೆಳೆ ಸಾಲ ಪಡೆಯದ ರೈತರು ಬೆಳೆ ವಿಮೆಗೆ ನೋಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದ್ದಲ್ಲಿ ಹಾಗೂ ಬೆಳೆ ಸಾಲ ಪಡೆದ ರೈತರು ಸಾಲದ ಅರ್ಜಿಯಲ್ಲಿ ನಮೂದಿಸಿದ ಬೆಳೆ ಬದಲಾಗಿ ಬೇರೆ ಬೆಳೆ ಬಿತ್ತನೆ ಮಾಡಿದ್ದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ನಿಗಧಿಪಡಿಸಿದ ಅವಧಿಯೊಳಗಾಗಿ ನೋಂದಾಯಿಸಿದ ಆರ್ಥಿಕ ಸಂಸ್ಥೆಗಳಲ್ಲಿ ಬಿತ್ತನೆ ದೃಢೀಕರಣ ಪತ್ರ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸತಕ್ಕದ್ದು. ಅಂತಹ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನು ರೈತರು ಭರಿಸತಕ್ಕದ್ದು ಅಥವಾ ಹೆಚ್ಚುವರಿ ವಿಮಾ ಕಂತನ್ನು ಪಾವತಿಸಿದ್ದಲ್ಲಿ ರೈತರಿಗೆ ಸಂಸ್ಥೆಗಳಿಂದ ಮರುಪಾವತಿಸತಕ್ಕದ್ದು.

18) ಆರ್ಥಿಕ ಸಂಸ್ಥೆಗಳು/ಬ್ಯಾಂಕುಗಳು “ಸಂರಕ್ಷಣೆ” ಪೋರ್ಟಲ್ ಮೂಲಕ ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರಿಗೆ ಸಂಬಂಧಿಸಿದ ಪ್ರಸ್ತಾವನೆಗಳ ವಿವರಗಳನ್ನು ದಾಖಲಿಸಲು ಹಾಗೂ ರೈತರ ಪ್ರಸ್ತಾವನೆಗಳನ್ನು ಮತ್ತು ವಿಮಾ ಕಂತಿನ ಮೊತ್ತವನ್ನು ವಿಮಾ ಸಂಸ್ಥೆಗಳಿಗೆ ವರ್ಗಾಯಿಸಲು ರೈತರು ನೋಂದಣಿ ಮಾಡುವ ಕೊನೆಯ ದಿನಾಂಕದಿಂದ 15 ದಿನಗಳೊಳಗಾಗಿ ಅಂತಿಮಗೊಳಿಸತಕ್ಕದ್ದು.

19) ಆರ್ಥಿಕ ಸಂಸ್ಥೆಗಳು/ಬ್ಯಾಂಕುಗಳಿಗೆ ವಿಮಾ ಸಂಸ್ಥೆಯ ರೈತರ ವಿಮಾ ಕಂತಿನ ಮೊತ್ತದಲ್ಲಿ ಶೇ.4 ರಷ್ಯನ್ನು ಸೇವಾ ಶುಲ್ಕವಾಗಿ ನೀಡತಕ್ಕದ್ದು.

20) ಸಾಮಾನ್ಯ ಸೇವಾ ಕೇಂದ್ರ ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಾಯಿಸಿದ ಬೆಳೆ ಸಾಲ ಪಡೆಯದ ರೈತರ ವಿವರಗಳನ್ನು ಸಂರಕ್ಷಣೆ” ಪೋರ್ಟಲ್ ನಲ್ಲಿ ದಾಖಲಿಸಲು ಹಾಗೂ ರೈತರ ಪ್ರಸ್ತಾವನೆಗಳನ್ನು ಮತ್ತು ವಿಮಾ ಕಂತಿನ ಮೊತ್ತವನ್ನು ವಿಮಾ ಸಂಸ್ಥೆಗಳಿಗೆ ವರ್ಗಾಯಿಸಲು ರೈತರು ನೋಂದಣಿ ಮಾಡುವ ಕೊನೆಯ ದಿನಾಂಕದಂದೇ ಅಂತಿಮಗೊಳಿಸತಕ್ಕದ್ದು.

21) ಸಾಮಾನ್ಯ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಾಯಿಸಿದ ಬೆಳೆ ಸಾಲ ಪಡೆಯದ ರೈತರ ವಿವರಗಳನ್ನು ಪೋರ್ಟಲ್ ನಲ್ಲಿ ದಾಖಲಿಸಲು ಪ್ರತಿ ಅರ್ಜಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಸೇವಾ ಶುಲ್ಕವನ್ನು ವಿಮಾ ಸಂಸ್ಥೆಯು ಸಾಮಾನ್ಯ ಸೇವಾ ಕೇಂದ್ರಗಳಿಗೆ ನೀಡತಕ್ಕದ್ದು.

22) ಬ್ಯಾಂಕುಗಳು ಅಧಿಕೃತವಾಗಿ ವಿಮೆ ಮಾಡಿಸಿದ ರೈತರ ಎಲ್ಲಾ ವಿವರಗಳ ಪ್ರಸ್ತಾವನೆಯನ್ನು *ಸಂರಕ್ಷಣೆ” ಪೋರ್ಟಲ್ ನಲ್ಲಿ ಅಳವಡಿಸಿ ವಿಮಾ ಸಂಸ್ಥೆಗೆ ಸಲ್ಲಿಸುವುದು. ಅಲ್ಲಿಯವರೆಗೆ ಬ್ಯಾಂಕುಗಳಿಗೆ ವಿಮಾ ಸಂಸ್ಥೆಗಳು ಸೇವಾ ಶುಲ್ಕವನ್ನು ಬಿಡುಗಡೆ ಮಾಡಬಾರದು.

23) ವಿಮಾ ಸಂಸ್ಥೆಯು ಬೆಳೆ ವಿಮಾ ನಷ್ಟ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಿದ ವಿವರಗಳನ್ನು ಬ್ಯಾಂಕುಗಳಿಗೆ ಹಾಗೂ ಸಂಬಂಧಿಸಿದ ಜಿಲ್ಲಾ ಕಛೇರಿಗಳಿಗೆ ನೀಡತಕ್ಕದ್ದು ಹಾಗೂ ಬ್ಯಾಂಕುಗಳು/ ಜಿಲ್ಲಾ ಕಛೇರಿಗಳು ಈ ವಿವರಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸತಕ್ಕದ್ದು.

24) ನೆರೆ/ಪ್ರವಾಹಗಳಿಂದ ಬೆಳೆ ಹಾನಿ ಆಗಿರುವ ಪ್ರದೇಶದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗೆ ನೋಂದಾಯಿಸಿದ ರೈತರಿಗೆ ಸೂಕ್ತ “Prevented Sowing Risk”, “On Account payment due to Midseason Adversity” and “Localised Risk” ಸಲುವಾಗಿ ಜಿಲ್ಲಾ ಮಟ್ಟದ ಜಂಟಿ ಸಮಿತಿ ರಚಿಸಿ, ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಕೃಷಿ ಆಯುಕ್ತರು ಹೊರಡಿಸಿರುವ ಸುತ್ತೋಲೆಯನ್ನು ಅನುಬಂಧ-5 ರಲ್ಲಿ ನೀಡಿದೆ.

25) 2023-24 ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇಕಡಾ 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ/ ಮೊಳಕೆಯೊಡೆಯುವುದು ವಿಫಲಗೊಂಡಲ್ಲಿ (Prevented/failed sowing and Prevented planting/germination failure risks) ವಿಮಾ ಮೊತ್ತದ ಗರಿಷ್ಠ ಶೇಕಡಾ 25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಿ ಮುಂದಿನ ಅವಧಿಗೆ ವಿಮೆಯನ್ನು ರದ್ದುಪಡಿಸತಕ್ಕದ್ದು. ಈ ಸಂಬಂಧ ಬಿತ್ತನೆ ಕ್ಷೇತ್ರದ ವರದಿಯನ್ನು ಘೋಷಿಸಲು ಹಾಗೂ ಅಗತ್ಯ ದಾಖಲೆಗಳಾದ ಮಳೆ ಮತ್ತು ಇತರೆ ಹವಾಮಾನದ ವರದಿಯನ್ನು ನೀಡಲು ಜಿಲ್ಲೆಗಳ ಜಿಲ್ಲಾಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಇಂತಹ ಸಂದರ್ಭಗಳು ಉದ್ಭವವಾದಲ್ಲಿ ವಿಮಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಇಲಾಖಾ ಅಧಿಕಾರಿಗಳು ಸೇರಿದಂತೆ ಮಾರ್ಗಸೂಚಿಯನ್ವಯ ಜಂಟಿ ಸಮೀಕ್ಷೆಯನ್ನು ಕೈಗೊಂಡು ವರದಿಯನ್ನು ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ Prevented sowing/Planting Risk invoke ಮಾಡುವ ಕೊನೆಯ ದಿನಾಂಕದ 7 ದಿನಗಳು ಮುಂಚಿತವಾಗಿ ಕೃಷಿ ಇಲಾಖೆ ಕೇಂದ್ರ ಕಛೇರಿಗೆ ನಿಗಧಿತ ನಮೂನೆಯಲ್ಲಿ [ಅನುಬಂಧ-5 (a)] ಸಲ್ಲಿಸತಕ್ಕದ್ದು. ಜಿಲ್ಲೆಗಳಿಂದ ಪ್ರಸ್ತಾವನೆಗಳು ಸ್ವೀಕೃತವಾದ ನಂತರ, ಪ್ರಸ್ತಾವನೆಗಳನ್ನು ಮಾರ್ಗಸೂಚಿಯನ್ವಯ ಕೃಷಿ Prevented sowing/ Planting Risk ಘಟಕವಾರು ಅಧಿಸೂಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸತಕ್ಕದ್ದು.

26) Prevented sowing/Planting Risk invoke ជ ನಂತರ ಒಂದು ತಿಂಗಳೊಳಗೆ ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಮೇಲಿನಂತೆ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸತಕ್ಕದ್ದು.

27) 2023-24 ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಸಂಭವಿಸುವ ಹವಾಮಾನ ವೈಪರೀತ್ಯಗಳಾದ ಹೆಚ್ಚಿನ ಮಳೆ ನೆರೆ/ಪುವಾಹಗಳಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶ ಕೊರತೆ (Prolonged dry spell), ತೀವು ಬರಗಾಲದಿಂದ ಯಾವುದೇ ಅಧಿಸೂಚಿತ ವಿಮಾ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ ಮೊದಲು (On Account payment due to Mid Season Adversity), ನಿರೀಕ್ಷಿತ ಇಳುವರಿಯು ಪ್ರಾರಂಭಿಕ ಇಳುವರಿಯ ಶೇಕಡಾ 50 ಕ್ಕಿಂತ ಕಡಿಮೆ ಇದೆ ಎಂದು ಅಂದಾಜಿಸಿದಲ್ಲಿ, ವಿಮಾ ಘಟಕವಾರು ವರದಿಯನ್ನಾಧರಿಸಿ ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇಕಡಾ 25 ರಷ್ಟು ಹಣವನ್ನು ಮುಂಚಿತವಾಗಿ ವಿಮಾ ಸಂಸ್ಥೆಯು ನೀಡತಕ್ಕದ್ದು.

Related Post

Leave a Reply

Your email address will not be published. Required fields are marked *