ಆತ್ಮೀಯ ರೈತ ಬಾಂಧವರೇ,
2023-24ನೇ ಸಾಲಿನ ಬೆಳೆ ಹಾನಿ ಪರಿಹಾರವನ್ನು ಮೊನ್ನೆ ತಾನೆ ಮಾನ್ಯ ಪ್ರಧಾನಮಂತ್ರಿಗಳಾದ ಮೋದಿಯವರು ಬಿಡುಗಡೆ ಮಾಡಿದ್ದಾರೆ. ಇದಕ್ಕಿಂತ ಮೊದಲು ಜನವರಿ ತಿಂಗಳಲ್ಲಿ ಶ್ರೀ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು 2,000 ರೂ . ಹಣಗಳನ್ನು ನೇರ ಖಾತೆಗೆ ಜಮಾ ಮಾಡಿದ್ದರು. ಆದರೆ ಈ ಎರಡು ಎಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಬೆಳೆ ಹಾನಿ ಪರಿಹಾರ ಇನ್ನು ಕೆಲವು ರೈತರಿಗೆ ಜಮಾ ಆಗಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ನಾವು ನಿನ್ನೆ ತಿಳಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಥವಾ ತಹಶೀಲ್ದಾರ್ ಎಂದರೆ ಉಪ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ನಿಮ್ಮ ಟ್ರಾನ್ಸಾಕ್ಷನ್ ಪೆಂಡಿಂಗ್ ನಲ್ಲಿ ಇರುತ್ತದೆ. ಅವರು ಅಪ್ರೂವ್ ಮಾಡಿದ ನಂತರವೇ ನಿಮಗೆ ಹಣವು ಜಮಾವಾಗುತ್ತದೆ.
ಈ ಬಗ್ಗೆ ಮಾತನಾಡಿದ ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಗೋವಿಂದ ರೆಡ್ಡಿ ಅವರು ಒಂದು ಹೇಳಿಕೆಯನ್ನು ನೀಡಿದ್ದಾರೆ. ಅದುವೇ, ಬೀದರ ಜಿಲ್ಲೆಯ ಎಂಟು ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿರುವುದು ತಮ್ಮಗೆಲ್ಲರಿಗೂ ತಿಳಿದಿರುವ ವಿಷಯವಾಗಿರುತ್ತದೆ, ಜಿಲ್ಲೆಯ ಒಟ್ಟು 11075 ರೈತರ ಬ್ಯಾಂಕ ಖಾತೆಗಳಿಗೆ ಹಲವಾರು ಕಾರಣಾಂತರಗಳಿಂದ ಪರಿಹಾರ ಜಮೆಯಾಗದೇ ಬಾಕಿ ಉಳಿದಿದೆ. ಪರಿಹಾರ ಜಮೆಯಾಗದೇ ಬಾಕಿ ಇರುವ ರೈತರು ಸಹಾಯವಾಣಿ ಕೇಂದ್ರಕ್ಕೆ, ತಹಸೀಲ್ದಾರರಿಗೆ ಕಛೇರಿಗೆ ಕರೆ ಮಾಡಿ ನ್ಯೂನತೆಗಳನ್ನು ಸರಿಪಡಿಸಿಕೊಂಡು ಪರಿಹಾರ ಪಡೆದುಕೊಳ್ಳಬಹುದಾಗಿದೆ. ಮತ್ತು ತಮಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ನೀಡುವ ಸವಲತ್ತನ್ನು ಒದಗಿಸಿಕೊಡಲಾಗುತ್ತದೆ.
ಸಹಾಯವಾಣಿ ಕೇಂದ್ರಗಳ ವಿವರ: ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೀದರ ದೂರವಾಣಿ ಸಂಖ್ಯೆ: 08482-224316, 224317, ಜಿಲ್ಲಾ ವಿಪತ್ತು ನಿರ್ವಣಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಛೇರಿ ಬೀದರ ಮೊಬೈಲ್ ಸಂಖ್ಯೆ: 9880782939, ಜಿಲ್ಲಾ ಸಮಾಲೋಚಕರು ಭೂಮಿ ಕೋಶ ಜಿಲ್ಲಾಧಿಕಾರಿಗಳ ಕಛೇರಿ ಬೀದರ ಮೊಬೈಲ್ ಸಂಖ್ಯೆ: 9480832160 ಹಾಗೂ ಔರಾದ ತಾಲ್ಲೂಕಿನ ದೂರವಾಣಿ ಸಂಖ್ಯೆ: 08485-280024, 8880009312, ಕಮಲನಗರ ತಾಲ್ಲೂಕಿನ ದೂರವಾಣಿ ಸಂಖ್ಯೆ: 7411002901, ಬೀದರ ತಾಲ್ಲೂಕಿನ ದೂರವಾಣಿ ಸಂಖ್ಯೆ: 08482-226459, 8722127412, ಭಾಲ್ಕಿ ತಾಲ್ಲೂಕಿನ ದೂರವಾಣಿ ಸಂಖ್ಯೆ: 08484-262218, 7483243168, ಬಸವಕಲ್ಯಾಣ ತಾಲ್ಲೂಕಿನ ದೂರವಾಣಿ ಸಂಖ್ಯೆ: 08481-250338, 8197268989, ಹುಮನಾಬಾದ ತಾಲ್ಲೂಕಿನ ದೂರವಾಣಿ ಸಂಖ್ಯೆ: 08483-270051, 7892674923, ಹುಲಸೂರ ತಾಲ್ಲೂಕಿನ ದೂರವಾಣಿ ಸಂಖ್ಯೆ: 9449317201, 9449317201, ಚಿಟ್ಟಗುಪ್ಪಾ ತಾಲ್ಲೂಕಿನ ದೂರವಾಣಿ ಸಂಖ್ಯೆ: 08483-277577, 7619228265.
ಪ್ರಯುಕ್ತ ಜಿಲ್ಲೆಯ ಎಲ್ಲಾ ರೈತ ಬಾಂಧವರು ಸಹಾಯವಾಣಿ ಕೇಂದ್ರಗಳಿಗೆ ಕರೆ ಮಾಡಿ ನ್ಯೂನತೆಗಳನ್ನು ಸರಿಪಡಿಸಿಕೊಂಡು ಪರಿಹಾರ ಪಡೆದುಕೊಳ್ಳಬೇಕಾಗಿದೆ.
ಈಗಾಗಲೇ ಹಲವಾರು ರೈತರಿಗೆ ಇದು ಜಮವಾಗಿದ್ದು, ಮೆಕ್ಕೆಜೋಳ ಹಾಕಿದ ರೈತರಿಗೆ ಎಕರೆಗೆ ಸುಮಾರು ಮೂರು ಸಾವಿರಕ್ಕಿಂತ ಅಧಿಕ ಹಣ ದೊರಕುತ್ತಿದ್ದು, ಈ ಭಾಗದ ರೈತರು ಮೆಕ್ಕೆಜೋಳವನ್ನು ಪ್ರಮುಖ ಬೆಳೆಯನ್ನಾಗಿ ಮಾಡಿಕೊಂಡಿರುತ್ತಾರೆ. ಇನ್ನು ಕೆಲ ರೈತರು ನೀರಾವರಿ ಪ್ರದೇಶದಲ್ಲಿದ್ದು ಕಬ್ಬು ಮತ್ತು ತೊಗರಿಯನ್ನು ಪ್ರಮುಖ ಬೆಳೆಯನ್ನಾಗಿ ಮಾಡಿಕೊಂಡಿರುವ ಕಾರಣದಿಂದಾಗಿ ಅವರ ಬೋರ್ವೆಲ್ ಗಳಲ್ಲಿ ನೀರು ಕಡಿಮೆಯಾಗಿದ್ದರಿಂದ ಈ ರೈತರು ಕೂಡ ಬರದಿಂದ ಬಳಲುತ್ತಿದ್ದು ಕಬ್ಬಿಗೆ ಎಕರೆಗೆ ಸರಿಸುಮಾರು 6,000 ಜಮಾವಾಗಬೇಕಾಗಿತ್ತು. ಹಲವಾರು ರೈತರಿಗೆ ಈ ಹಣ ಜಮವಾಗಿದ್ದು ಇನ್ನು ಕೆಲವು ರೈತರಿಗೆ ಇದು ಇನ್ನೂ ಜಮವಾಗಬೇಕಾಗಿದೆ. ಕರ್ನಾಟಕದ ಹಲವು ಭಾಗಗಳಲ್ಲಿ 60% ಜನ ವ್ಯವಸಾಯವನ್ನೇ ತಮ್ಮ ಜೀವನವಾಗಿ ಮಾಡಿಕೊಂಡದ್ದರಿಂದ ಈ ವರ್ಷ ಮಳೆಯಾಗದ ಕಾರಣ ಎಲ್ಲಾ ಬೆಳೆಗಳು ರೈತರಿಗೆ ಹಾನಿಯನ್ನು ಉಂಟು ಮಾಡಿದೆ. ಹಾಗಾಗಿ ಎಕರೆಗೆ ತಲಾ ಇಂತಿಷ್ಟು ಹಣವೆಂದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಳೆ ಹಾನಿ ಪರಿಹಾರವಾಗಿ ಜಮಾ ಮಾಡಿಕೊಡಲಾಗಿದೆ.
ಹಾಗಾದರೆ ನಿಮಗೆ ಹಣ ಜಮವಾಗಿದೆಯೋ ಇಲ್ಲವೋ ಎಂದು ತಿಳಿಯಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹಣದ ಸ್ಟೇಟಸ್ ಅನ್ನು ಕೂಡಲೇ ತಿಳಿಯಿರಿ. ನಿಮ್ಮ ಸ್ಟೇಟಸ್ ನಲ್ಲಿ ಹಣವು ಅಪ್ರೋವ್ ಎಂದು ತೋರಿಸಿದರು ನಿಮ್ಮ ಅಕೌಂಟ್ ನಲ್ಲಿ ಹನ ಜಮಾವಾಗದಿದ್ದಲ್ಲಿ ಕೂಡಲೇ ಆಧಾರ್ ಕಾರ್ಡನ್ನು ತೆಗೆದುಕೊಂಡು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ನಿಮ್ಮ ಹಣ ಜಮಾ ಆಗುತ್ತದೆಯೋ ಇಲ್ಲವೋ ಎಂದು ಗೊತ್ತಾಗುತ್ತದೆ.
https://parihara.karnataka.gov.in/service92/
ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ಮೇಲೆ ನಿಮಗೆ ಮೊಬೈಲ್ ಸ್ಕ್ರೀನ್ ಮೇಲೆ ಅಥವಾ ಲ್ಯಾಪ್ಟಾಪ್ ಮೇಲೆ ಈ ಪುಟವು ಕಾಣಿಸುತ್ತದೆ.
ವರ್ಷ ಇದ್ದಲ್ಲಿ 2023-24, ಸೀಸನ್ ಇದ್ದಲ್ಲಿ ಮುಂಗಾರು, ವಿಪತ್ತಿನ ವಿಧ ಇದ್ದಲ್ಲಿ ಬರ ಎಂದು ಆಯ್ಕೆ ಮಾಡಿ ಮತ್ತು ಅದರ ಪಕ್ಕದಲ್ಲಿ ಕಾಣಿಸುತ್ತಿರುವ ನೀಲಿ ಬಣ್ಣದ ಬಟನ್ ಮೇಲೆ ಕ್ಲಿಕ್ ಮಾಡಿ.
ನಂತರ ಅಲ್ಲಿ ನಾಲ್ಕು ಬಹುವಾಕ್ಯಗಳನ್ನು ನಿಮಗೆ ನೀಡಿರುತ್ತಾರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಆಧಾರ್ ಎಂದು, ಮೊಬೈಲ್ ಸಂಖ್ಯೆ ಇದ್ದರೆ ಮೊಬೈಲ್ ನಂಬರ್ ಎಂದು, ಎಫ್ ಐಡಿ ಸಂಖ್ಯೆ ಇದ್ದರೆ ಎಫ್ ಐ ಡಿ ಎಂದು, ನಿಮ್ಮ ಬಳಿ ಈ ಮೇಲಿನ ಯಾವುದೂ ಇರದಿದ್ದರೆ ಸರ್ವೇ ನಂಬರ್ ಎಂದು ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ನಂತರ ಅಲ್ಲಿ ಕೇಳಲಾದ ನಂಬರ್ ಗಳನ್ನು ಟೈಪ್ ಮಾಡಿ. ಇಲ್ಲಿ ನಾನು ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡುತ್ತಿದ್ದೇನೆ ನಿಮ್ಮ ಬಳಿ ಕೂಡ ಮೊಬೈಲ್ ಸಂಖ್ಯೆ ಇದ್ದರೆ ಅದಕ್ಕೆ ಟೈಪ್ ಮಾಡಿರಿ ಮತ್ತು ಪಕ್ಕದಲ್ಲಿ ಕಾಣುತ್ತಿರುವ ಹಸಿರು ಬಣ್ಣದ ಬಟನ್ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ನಂತರ ಈ ರೀತಿ ನಿಮಗೆ ತೋರಿಸುತ್ತದೆ.
ಇದರಲ್ಲಿ ನಿಮಗೆ ಯಾವ ಬೆಳೆ ಹಾನಿ ಪರಿಹಾರದ ಎಂದರೆ ಯಾವ ಹೊಲದ ಪರಿಹಾರವನ್ನು ತಿಳಿಯಲು ಬಯಸುತ್ತಿರೋ ಅದರ ಮೇಲೆ ಕ್ಲಿಕ್ ಮಾಡಿ.
ಕ್ಲಿಕ್ ಮಾಡಿದ ನಂತರ ಈ ಕೆಳಗಿನಂತೆ ನಿಮಗೆ ತೋರಿಸುತ್ತಿದ್ದರೆ ನಿಮಗೆ ಇನ್ನೂ ಹಣ ಬಂದಿಲ್ಲ ಎಂದು ಅರ್ಥ. ಎಂದರೆ ನಿಮ್ಮ ಸ್ಟೇಟಸ್ ಇನ್ನು ತಹಶೀಲ್ದಾರರಿಂದ ವೆರಿಫೈ ಆಗಿಲ್ಲ. ಅದು ಆಗುವವರೆಗೂ ಕಾಯಬೇಕು ಅಥವಾ ಏನೆಂದು ವಿಚಾರಿಸಬೇಕು. ಬೀದರ್ ಜಿಲ್ಲೆಯ ರೈತರಿಗೆ ಈ ರೀತಿ ತೋರಿಸುತ್ತಿದ್ದರೆ ಅವರು ಈ ಕೂಡಲೇ ಮೇಲೆ ತಿಳಿಸಿದ ಮೊಬೈಲ್ ನಂಬರ್ ಗೆ ಕರೆ ಮಾಡಿ ಮತ್ತು ಮಾಹಿತಿಯನ್ನು ಪಡೆಯಿರಿ. ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಭೇಟಿ ನೀಡಿ. ಉಳಿದ ಭಾಗದ ರೈತರಿಗೆ ಈ ರೀತಿ ಕಾಣಿಸುತ್ತಿದ್ದರೆ ನೀವು ತಹಶೀಲ್ದಾರ್ ವೆರಿಫಿಕೇಶನ್ ಆಗೋವರೆಗೂ ಕಾಯಲೇಬೇಕು ಅಥವಾ ನೀವು ಕೂಡ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹತ್ತಿರದ ಕೃಷಿ ಇಲಾಖೆಯಲ್ಲಿ ಭೇಟಿ ನೀಡಬೇಕು ಮತ್ತು ಈ ಮೇಲೆ ತಿಳಿಸಿದ ಮೊಬೈಲ್ ನಂಬರ್ ಗೆ ನೀವು ಕರೆ ಮಾಡುವುದಿಲ್ಲ. ಇದು ಕೇವಲ ಬೀದರ್ ಜಿಲ್ಲೆಯ ರೈತರಿಗೆ ಮಾತ್ರ.
ನೀವು ನಿಮ್ಮ ನಂಬರ್ ಗಳನ್ನು ಹಾಕಿದ ಮೇಲೆ ಈ ರೀತಿಯ ಫೋಟೋ ಕಾಣಿಸಿದರೆ ನಿಮಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ನಿಗದಿಪಡಿಸಿದ ಬೆಳೆ ಹಾನಿ ಪರಿಹಾರವೂ ಎಂದರೆ ಬೆಳೆ ಹಾನಿ ಪರಿಹಾರದ ಹಣವು ಜಮವಾಗಿರುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಗೆ ಯಾವುದೇ ಮೆಸೇಜ್ ಗಳು ಬಾರದೇ ಇದ್ದಲ್ಲಿ ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ ನಿಮ್ಮ ಪಾಸ್ ಬುಕ್ ಅನ್ನು ರೀ ಎಂಟ್ರಿ ಮಾಡಿಸಬೇಕಾಗಿದೆ.
ಮತ್ತು ಬೀದರ್ ಬಿಟ್ಟು ಉಳಿದ ಜಿಲ್ಲೆಗಳಲ್ಲಿನ ರೈತರಿಗೆ ಇನ್ನು ಹಣ ಜಮವಾಗದಿದ್ದರೆ ಈ ರೀತಿ ಮಾಡಿ ಎಂದು ಕೃಷಿ ಇಲಾಖೆಯಿಂದ ತಿಳಿಸಲಾಗಿದೆ. ಬೆಳೆ ದರ್ಶಕ ಆ್ಯಪ್ ನಲ್ಲಿ ನೀವು ಸರ್ಪ ಮಾಡಿದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಂಡು. ಆ ಸರ್ವೆ ಮಾಡಿದ ಮಾಹಿತಿಯನ್ನು ಒಂದು ಜೆರಾಕ್ಸ್ ಕಾಪಿಯೊಂದಿಗೆ ನಿಮ್ಮ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರದ ತಹಶೀಲ್ದಾರ್ ಆಫೀಸ್ ಅಥವಾ ಅಸಿಸ್ಟೆಂಟ್ ಕಮಿಷನರ್ ಆಫೀಸ್ನಲ್ಲಿ ಸಲ್ಲಿಸಬೇಕಾಗಿ ಸರ್ಕಾರದಿಂದ ಮಾಹಿತಿ ಬಂದಿದೆ.
ಬೆಳೆ ದರ್ಶಕ ಆ್ಯಪ್ ನಲ್ಲಿ ಸರ್ವೆ ಮಾಡಿದ ಮಾಹಿತಿಯನ್ನು ಪಡೆಯಲು ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ ಮಾಡಿದ ನಂತರ ಈ ರೀತಿ ಅದು ತೋರಿಸುತ್ತದೆ.
https://play.google.com/store/apps/details?id=com.crop.offcskharif_2021
ಅದರಲ್ಲಿ ಮುಂಗಾರು ಎಂದು ಆಯ್ಕೆ ಮಾಡಿ. ನಿಮ್ಮ ಜಿಲ್ಲೆ ತಾಲೂಕು ಮತ್ತು ಗ್ರಾಮವನ್ನು ಸರಿಯಾಗಿ ಆಯ್ಕೆ ಮಾಡಿ ಪಕ್ಕದಲ್ಲಿ ಕಾಣಿಸುತ್ತಿರುವ ನೇರಳೆ ಬಣ್ಣದ ಬಟನ್ ಮೇಲೆ ಕ್ಲಿಕ್ ಮಾಡಿ.
ಕ್ಲಿಕ್ ಮಾಡಿದ ನಂತರ ನಿಮಗೆ ಈ ರೀತಿಯಾದ ತೋರಿಸುತ್ತದೆ ತೋರಿಸುದ ಮೇಲೆ ಸಮೀಕ್ಷೆಯ ವಿವರವನ್ನು ತಿಳಿಸಿದರೆ ಅಲ್ಲಿ ನಿಮ್ಮ ಬೆಳೆಯ ವಿವರವನ್ನು ತಿಳಿಯಲಾಗುತ್ತದೆ ಇದರಿಂದ ನಿಮಗೆ ತಹಶೀಲ್ದಾರ್ ಕಚೇರಿಯಲ್ಲಿ ಅದನ್ನು ಸರಿ ಮಾಡಿಸಿ ಕೊಡುತ್ತಾರೆ ಮತ್ತು ನಿಮಗೆ ಹಣ ಜಮಾವಾಗುತ್ತದೆಯೋ ಇಲ್ಲವೋ ಎಂದು ಅವರು ಆ ಕೂಡಲೇ ಹೇಳುತ್ತಾರೆ. ಈ ಕೆಲಸವನ್ನು ನೀವು ಮಾಡಿದರೆ ಆದಷ್ಟು ಬೇಗ ನಿಮ್ಮ ಹಣ ಜಂಬವಾಗುತ್ತದೆ.
ಇದನ್ನೂ ಓದಿ :-
ಹೊಲಿಗೆ ತರಬೇತಿ
ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ, sewing training