Breaking
Tue. Dec 17th, 2024

ಎತ್ತು , ಆಕಳು, ಎಮ್ಮೆಗೆ ಬರುವ ಎಲ್ಲ ರೋಗಗಳಿಗೆ ಮನೆಯಲ್ಲಿ ಔಷಧಿ ತಯಾರಿಗೆ

Spread the love

ಹೊಟ್ಟೆ ಉಬ್ಬರ ಹಾಗೂ ಅಜೀರ್ಣ


ತಯಾರಿಸುವ ವಿಧಾನ

ಮೆಣಸು ಮತ್ತು ಜೀರಿಗೆಯನ್ನು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಉಳಿದ ಎಲ್ಲಾ ಪದಾರ್ಥಗಳ ಜೊತೆ ನುಣ್ಣಗೆ ಪೇಸ್ಟಿನಂತೆ ರುಬ್ಬಿಕೊಳ್ಳಿ.

ಔಷಧಿ ನೀಡುವ ಕ್ರಮ

ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಸಣ್ಣ ಪ್ರಮಾಣವನ್ನು ತೆಗೆದುಕೊಂಡು ಉಪ್ಪಿನ ಜೊತೆಗೆ ದಿನಕ್ಕೆ 3-4 ಬಾರಿ 3 ದಿನಗಳವರೆಗೂ ನೀಡಿ.

ಗರ್ಭಜಾರುವುದು


ತಯಾರಿಸುವ ವಿಧಾನ

ಒಂದು ಸಂಪೂರ್ಣ ಲೋಳೆಸರದ ಎಲೆಯಿಂದ- ತಿಳಿಯನ್ನು ತೆಗೆದುಕೊಳ್ಳಿ ಅದನ್ನು ಮತ್ತೆ ಮತ್ತೆ ಅಂಟು ಹೋಗಿ ತೆಳು ಜೆಲ್ / ತಿಳಿ ಸಿಗುವವರೆಗೂ ನೀರಿನಿಂದ ತೊಳೆಯಿರಿ ಅದಕ್ಕೆ ಒಂದು ಚಿಟಕೆ ಅರಿಶಿನ ಹಾಕಿ ಮಿಶ್ರಣ ಒಂದರ ಅರ್ಧ ಭಾಗಕ್ಕೆ ಇಳಿಯುವವರೆಗೂ ಕುದಿಸಿ. ಮುಟ್ಟಿದರೆ ಮುನಿ ಗಿಡದ ಎಲೆಯ ಪೇಸ್ಟ ತಯಾರಿಸಿಕೊಳ್ಳಿ.

ಔಷಧಿ ನೀಡುವ ಕ್ರಮ

ಜಾರಿರುವ ಗರ್ಭವನ್ನು ಸ್ವಚ್ಚಮಾಡಿ ಜಾರಿರುವ ಗರ್ಭದ ಮೇಲೆ ಲೋಳೆಸರದ ತಿಳಿಯನ್ನು ಸಿಂಪಡಿಸಿ ತಿಳಿ/ ಜೆಲ್ ಒಣಗಿದ ಮೇಲೆ ಮುಟ್ಟಿದರೆ ಮುನಿ ಗಿಡದ ಎಲೆಯ ಪೇಸ್ಟನ್ನು ಹಚ್ಚಿ ಪರಿಸ್ಥಿತಿ ಸುಧಾರಿಸುವವರೆಗೂ ಪುನರಾವರ್ತಿಸಿ.

ಕಾಲು-ಬಾಯಿ ರೋಗ- ಕಾಲು ಗಾಯಗಳು


ತಯಾರಿಸುವ ವಿಧಾನ

ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ರುಬ್ಬಿ 250 ಎಮ್ ಎಲ್ ಕೊಬ್ಬರಿ ಎಣ್ಣೆ/ ಎಳ್ಳೆಣ್ಣೆಯೊಂದಿಗೆ ಬೆರೆಸಿ ಕುದಿಸಿ ನಂತರ ತಣ್ಣಗಾಗಲು ಬಿಡಿ.

ಔಷಧಿ ನೀಡುವ ಕ್ರಮ

ಗಾಯವನ್ನು ಸ್ವಚ್ಚಮಾಡಿ ಕೈನಿಂದ / ಬಟ್ಟೆ/ ಬ್ಯಾಂಡೇಜ್ ಬಟ್ಟೆಯ ಸಹಾಯದಿಂದ ಹಚ್ಚಿ. ಗಾಯದಲ್ಲಿ ಹುಳು/ ಕೀಟಗಳಿದ್ದರೆ ಸೀತಾಫಲದ ಎಲೆಯ ಪೇಸ್ಟ್‌ನ್ನು ಅಥವಾ ಕರ್ಪೂರ.

ಜ್ವರ


ತಯಾರಿಸುವ ವಿಧಾನ

ಜೀರಿಗೆ, ಮೆಣಸು ಹಾಗೂ ಕೊತ್ತಂಬರಿ ಬೀಜಗಳನ್ನು 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ನುಣ್ಣನೆಯ ಪೇಸ್ಟಿನಂತೆ ರುಬ್ಬಿ.

ಔಷಧಿ ನೀಡುವ ಕ್ರಮ

ಸ್ವಲ್ಪ ಮಿಶ್ರಣವನ್ನು ಬೆಳಗ್ಗೆ ಹಾಗೂ ಸಂಜೆ ಹಸುವಿನ ನಾಲಿಗೆಯ ಮೇಲೆ ತಿಕ್ಕುವುದು/ ತಿನ್ನಿಸುವುದು.

ಉಣ್ಣಿಗಳು/ ಬಾಹ್ಯ ಪರಾವಲಂಬಿ ಜೀವಿಗಳು


ತಯಾರಿಸುವ ವಿಧಾನ

ಎಲ್ಲಾ ಪದಾರ್ಥಗಳನ್ನು ರುಬ್ಬಿ ಒಂದು ಲೀಟರ್ ಶುದ್ಧನೀರನ್ನು ಬೆರೆಸಿ ಕೋರಾ ಬಟ್ಟೆ ಅಥವಾ ಜರಡಿಯಿಂದ ಸೋಸಿಕೊಳ್ಳಿ ಅದನ್ನು ಸಿಂಪಡಿಸುವ ಯಂತ್ರಕ್ಕೆ ಹಾಕಿಕೊಳ್ಳಿ.

ಔಷಧಿ ನೀಡುವ ಕ್ರಮ

ಜಾನುವಾರುವಿನ ಸಂಪೂರ್ಣ ದೇಹಕ್ಕೆ ಸಿಂಪಡಿಸಿ ಕೊಟ್ಟಿಗೆಯಲ್ಲಿರುವ ಬಿರುಕುಗಳಿಗೂ ಸಿಂಪಡಿಸಿ ಮಿಶ್ರಣದಲ್ಲಿ ಬಟ್ಟೆಯನ್ನು ಅದ್ದಿ ಸಹ ಜಾನುವಾರುವಿಗೆ ಲೇಪಿಸಬಹುದು ವಾರಕ್ಕೊಮ್ಮೆ ಗುಣವಾಗುವರೆಗೂ ಇದನ್ನು ಪುನರಾವರ್ತಿಸಿ. ಬಿಸಿಲಿರುವಾಗ ಮಾತ್ರ ಮಿಶ್ರಣವನ್ನು ಲೇಪಿಸಿ.

ಸಿಡುಬು/ ವರ್ಟ್ / ಬಿರುಕುಗಳು


ತಯಾರಿಸುವ ವಿಧಾನ

ಜೀರಿಗೆಯನ್ನು 15 ನಿಮಿಷ ನೀರಿನಲ್ಲಿ ನೆನೆಸಿಡಿ ಎಲ್ಲಾ ಪದಾರ್ಥಗಳನ್ನು ನುಣ್ಣನೆಯ ಪೇಸ್ಟಿನ ಹದಕ್ಕೆ ರುಬ್ಬಿ ಅದಕ್ಕೆ ಬೆಣ್ಣೆಯನ್ನು ಹಾಕಿ ಚೆನ್ನಾಗಿ ಬೆರೆಸಿ.

ಔಷಧಿ ನೀಡುವ ಕ್ರಮ

ಬಾಧಿತ ಪ್ರದೇಶಕ್ಕೆ ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಗುಣವಾಗುವರೆಗೂ ಹಚ್ಚಿ ಬಾಧಿತ ಪ್ರದೇಶವನ್ನು ಶುಚಿಮಾಡಿ ಒಣಗಿಸಿ ನಂತರ ಹಚ್ಚಿ.

ಬಂಜೆತನ / ಬೆದೆಗೆ ಬರದಿರುವುದು


ಔಷಧಿ ನೀಡುವ ಕ್ರಮ

ಬೆದೆಗೆ ಬಂದ ಒಂದು / ಎರಡು ದಿನಗಳಲ್ಲಿ ಚಿಕಿತ್ಸೆ ಪ್ರಾರಂಭಿಸಿ. ಇಲ್ಲಿ ಸೂಚಿಸಿರುವ ತಾಜಾ ಪದಾರ್ಥಗಳನ್ನು ಕೆಳಗೆ ನೀಡಿರುವಂತೆ ಅನುಕ್ರಮವಾಗಿ. ದಿನಕ್ಕೊಮ್ಮೆ ಬೆಲ್ಲ ಹಾಗೂ ಉಪ್ಪಿನೊಂದಿಗೆ ನೀಡಿ. 1 ಬಿಳಿ ಮೂಲಂಗಿಯನ್ನು ಪ್ರತಿದಿನ 5 ದಿನಗಳವರೆಗೂ ನೀಡಿ. 1 ಲೋಳೆಸರದ ಸಂಪೂರ್ಣ ಎಲೆಯನ್ನು ಪ್ರತಿದಿನ 4 ದಿನಗಳವರೆಗೂ ನೀಡಿ. 4 ಹಿಡಿ ನುಗ್ಗೇಸೊಪ್ಪನ್ನು ಪ್ರತಿದಿನ 4 ದಿನಗಳವರೆಗೂ ನೀಡಿ. 4 ಹಿಡಿ ಮಂಗರಬಳ್ಳಿಯನ್ನು ಪ್ರತಿದಿನ 4 ದಿನಗಳವರೆಗೂ ನೀಡಿ. 4 ಹಿಡಿ ಕರಿಬೇವನ್ನು ಅರಿಶಿನದ ಜೊತೆ ಪ್ರತಿದಿನ 4 ದಿನಗಳವರೆಗೂ ನೀಡಿ. ಜಾನುವಾರು ಗರ್ಭಧಿರಿಸದಿದ್ದರೆ ಮತ್ತೆ ಈ ಚಿಕಿತ್ಸೆಯನ್ನು ಪುನಾರಾವರ್ತಿಸಿ. ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಮೊದಲ ದಿನ ಹಚ್ಚಿ.

ಮೊಲೆತೊಟ್ಟು ರಂಧ್ರಗಳ ಅವರೋಧಗಳು


ಬೇಕಾಗುವ ಪದಾರ್ಥಗಳು:

ತಾಜಾವಾಗಿ ಕಿತ್ತು ಶುಚಿ ಮಾಡಿರುವ ಬೇವಿನ ಎಲೆಯ ಕಡ್ಡಿ-1 ಅರಿಶಿನದ ಪುಡಿ; ಬೆಣ್ಣೆ ಅಥವಾ ತುಪ್ಪ.

ತಯಾರಿಸುವ ವಿಧಾನ

ಬೇವಿನ ಎಲೆಯ ಕಡ್ಡಿಯನ್ನು ಕೆಚ್ಚಲುತೊಟ್ಟಿನ ಅಳತೆಗೆ ಅನುಸಾರವಾಗಿ ಕತ್ತರಿಸಿಕೊಳ್ಳಿ ಅರಿಶಿನ ಪುಡಿ, ಬೆಣ್ಣೆ ಅಥವಾ ತುಪ್ಪದ ಮಿಶ್ರಣವನ್ನು ಬೇವಿನ ಎಲೆಯ ಕಡ್ಡಿಗೆ ಚೆನ್ನಾಗಿ ಹಚ್ಚಿ.

ಔಷಧಿ ನೀಡುವ ಕ್ರಮ

ಮಿಶ್ರಣ ಲೇಪಿಸಿದ ಬೇವಿನ ಎಲೆಯ ಕಡ್ಡಿಯನ್ನು ಬಾಧಿತ ಕೆಚ್ಚಲ ತೊಟ್ಟಿನ ಒಳಗೆ ಅಪ್ರದಕ್ಷಿಣೆಯಾಕಾರದಲ್ಲಿ ಸೇರಿಸಿ ಪ್ರತಿಬಾರಿ ಹಾಲುಕರೆದ ನಂತರ ಹೊಸ ಬೇವಿನ ಎಲೆಯ ಕಡ್ಡಿಯನ್ನು ಬಳಸಿ.

ಕೆಚ್ಚಲುಬಾವು (ಎಲ್ಲಾ ವಿಧಗಳು/ ರೀತಿ)


ತಯಾರಿಸುವ ವಿಧಾನ

1-3 ಪದರ್ಥಾಗಳನ್ನು ಕೆಂಪು ಪೇಸ್ಟಿನ ರೀತಿ ಚೆನ್ನಾಗಿ ರುಬ್ಬಿ ನಿಂಬೆಹಣ್ಣುಗಳನ್ನು ಎರಡು ಹೋಳುಗಳನ್ನಾಗಿ ಕತ್ತರಿಸಿ.

ಔಷಧಿ ನೀಡುವ ಕ್ರಮ

ಒಂದು ಹಿಡಿ ಪೇಸ್ಟ್ ನ್ನು ತೆಗೆದುಕೊಂಡು ಅದಕ್ಕೆ 150-200 ಎಮ್ ಎಲ್ ನೀರನ್ನು ಬೇರೆಸಿ ಕೆಚ್ಚಲನ್ನು ಚೆನ್ನಾಗಿ ತೊಳೆದು ಶುಚಿಮಾಡಿ ಕೆಂಪು ಮಿಶ್ರಣವನ್ನು ಕೆಚ್ಚಲಿನ ಎಲ್ಲಾ ಭಾಗಗಳಿಗೆ ಹಚ್ಚಿ ಈ ವಿಧಾನವನ್ನು ಪ್ರತಿ ದಿನ 10 ಬಾರಿ ಐದು ದಿನಗಳವರೆಗೂ ಪುನರಾವರ್ತಿಸಿ ದಿನಕ್ಕೆ 2 ನಿಂಬೆಹಣ್ಣುಗಳನ್ನು 3 ದಿನಗಳವರೆಗೂ ನೀಡಬೇಕು.

ಸೂಚನೆ

ಹಾಲಿನಲ್ಲಿ ರಕ್ತಬರುತ್ತಿದ್ದರೆ, ಮೇಲಿನ ಮಿಶ್ರಣದ ಜೊತೆಗೆ, ಕರಿಬೇವು (2 ಹಿಡಿ) ಹಾಗೂ ಬೆಲ್ಲದ ಪೇಸ್ಟ್ ನ್ನು ದಿನಕ್ಕೆ ಎರಡು ಬಾರಿಯಂತೆ ರೋಗ ಗುಣವಾಗುವವರೆಗೂ ನೀಡಿ. ಸೆತ್ತೆ ಬೀಳದಿರುವುದು ತಯಾ ತಯಾರಿಸುವ ವಿಧಾನ ಬೆಂಡೆಕಾಯಿಗಳನ್ನು ಎರಡು ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ

ಔಷಧಿ ನೀಡುವ ಕ್ರಮ

ಕರುಹಾಕಿದ 2 ಗಂಟೆಗಳ ಒಳಗೆ 1 ಮೂಲಂಗಿಯನ್ನು ತಿನ್ನಿಸಿ ಕರುಹಾಕಿದ 8 ಗಂಟೆಗಳವರೆಗೂ ಸೆತ್ತೆ ಉಳಿದುಕೊಂಡಿದ್ದರೆ ಬೆಲ್ಲ ಹಾಗೂ ಉಪ್ಪಿನ ಜೊತೆ 1.5 ಕೆ.ಜಿ ಬೆಂಡೆಕಾಯಿಯನ್ನು ನೀಡಿ ಸೆತ್ತೆ 12 ಗಂಟೆಯೊಳಗೆ ಬೀಳದಿದ್ದರೆ ಯೋನಿ ಮೂಲದಲ್ಲಿ ಒಂದು ಗಂಟನ್ನು ಹಾಕಿ 2 ಇಂಚಿನಷ್ಟು ಬಿಟ್ಟು ಕತ್ತರಿಸುವುದು ಅದು ತಾನಾಗಿ ಒಳಗೆ ಹೋಗುವುದು ಕೈಯಿಂದ ಸೆತ್ತೆಯನ್ನು ತೆಗೆಯಲು ಪ್ರಯತ್ನಿಸಬೇಡಿ. ವಾರಕ್ಕೊಂದು ಮೂಲಂಗಿಯನ್ನು 4 ವಾರಗಳವರೆಗೂ ನೀಡಿ.
ಕೆಚ್ಚಲು ಊತ

ತಯಾರಿಸುವ ವಿಧಾನ:

ಎಣ್ಣೆಯನ್ನು ಬಿಸಿಮಾಡಿ ಅದಕ್ಕೆ ಅರಿಶಿನದ ಪುಡಿ ಹಾಗೂ ಕತ್ತರಿಸಿದ ಬೆಳ್ಳುಳ್ಳಿಯನ್ನು ಚೆನ್ನಾಗಿ ಬೆರೆಸಿ, ಸ್ವಲ್ಪ ಘಮ ಬರುವವರೆಗೂ ಬಿಸಿಮಾಡಿ(ಕುದಿಸುವ ಅಗತ್ಯವಿಲ್ಲ) ತಣ್ಣಗಾಗಲು ಬಿಡಿ.

ಔಷಧಿ ನೀಡುವ ಕ್ರಮ:

ವೃತ್ತಾಕಾರದಲ್ಲಿ ಸಂಪೂರ್ಣ ಕೆಚ್ಚಲು ಭಾಗಕ್ಕೆ ಸ್ವಲ್ಪ ಬಲದೊಂದಿಗೆ ಹಚ್ಚಿ ದಿನಕ್ಕೆ ನಾಲ್ಕು ಬಾರಿಯಂತೆ ಮೂರು ದಿನಗಳವರೆಗೂ ಹಬ್ಬಿ.

ಸೂಚನೆ:

ಈ ಮಿಶ್ರಣವನ್ನು ಲೇಪಿಸುವ ಮೊದಲ ಹೆಚ್ಚಲಬಾವು ಇದೆಯಾ ಎಂದು ಪರೀಕ್ಷಿಸಿ ಸಂಪೂರ್ಣವಾಗಿ ಗುಣಪಡಿಸಿಕೊಳ್ಳಿ.

ಜಂತುಹುಳುಗಳು/ ಕೀಟಗಳು


ತಯಾರಿಸುವ ವಿಧಾನ

ಮೆಣಸು, ಜೀರಿಗೆ ಹಾಗೂ ಸಾಸಿವೆಯನ್ನು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಉಳಿದ ಎಲ್ಲಾ ಪದಾರ್ಥಗಳ ಜೊತೆಗೆ ಪೇಸ್ಟಿನಂತೆ ರುಬ್ಬಿಕೊಳ್ಳಿ.

ಔಷಧಿ ನೀಡುವ ಕ್ರಮ

ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ. ಸಣ್ಣ ಪ್ರಮಾಣವನ್ನು ತೆಗೆದುಕೊಂಡು ಉಪ್ಪಿನ ಜೊತೆಗೆ ದಿನಕ್ಕೆ 1 ಬಾರಿ 3 ದಿನಗಳವರೆಗೂ ನೀಡಿ.

09.09.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆ ಮುಂದುವರಿಯುವ ಮುನ್ಸೂಚೆನೆ ಇದೆ. ಕೆಲವು ಭಾಗಗಳಲ್ಲಿ ಉತ್ತಮ ಮಳೆಯ ಸಾಧ್ಯತೆಯೂ ಇದೆ.

ಕೊಡಗು ಕೇರಳ ಹಾಗೂ ಕರ್ನಾಟಕ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಹಾಸನ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದ್ದು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ.

ಯಾದಗಿರಿ, ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಕೊಪ್ಪಳ, ವಿಜಯಪುರ ಜಿಲ್ಲೆಗಳ ಒಂದೆರಡು ಭಾಗಗಳಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ

ಒಡಿಶಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಸೆಪ್ಟೆಂಬರ್ 9ರ ಸಂಜೆ ಅಥವಾ ರಾತ್ರಿ ಉತ್ತರ ಒಡಿಶಾ ಕರಾವಳಿ ಮೂಲಕ ಭೂಭಾಗಕ್ಕೆ ಪ್ರವೇಶಿಸುವ ಸಾಧ್ಯತೆಗಳಿವೆ. ಈ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದಂತೆ, ಅಂದರೆ ಇನ್ನೆರಡು ದಿನಗಳಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗಗಳು ಸೇರಿದಂತೆ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ.

08.09.2024ಲ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಹಾಗೂ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ, ಉಳಿದ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಹಾಸನದ ತುಮಕೂರು ಕಡೆಗೆ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು (ಪಾವಗಢ ಸಹಿತ), ಬೀದರ್ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

ಇವತ್ತು ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡದ ವಾತಾವರಣ ಇರಲಿದ್ದು, ಉಳಿದ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಈಗಿನಂತೆ ಇನ್ನೆರಡು ದಿನಗಳಲ್ಲಿ ರಾಜ್ಯದ ಒಳನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದ್ದು, ಈಗಿನ ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದಂತೆಯೇ, ಅಂದರೆ ಸೆಪ್ಟೆಂಬರ್ 13 ಅಥವಾ 14ರ ನಂತರ ತನಕ ಕರಾವಳಿ ಭಾಗಗಳಲ್ಲಿಯೂ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.

07.09.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಒಂದೆರಡು ಮಳೆ ಜಾಸ್ತಿ ಇರಬಹುದು.

ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಯಾದಗಿರಿ, ಬೀದರ್ ಜಿಲ್ಲೆಗಳ ಒಂದೆರಡು ಭಾಗಗಳಲ್ಲಿ ಮಳೆಯ ಮುನ್ಸೂಚೆನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ.

ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಈ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದಂತೆ ಮಳೆಯ ಪ್ರಮಾಣವೂ ಕಡಿಮೆಯಾಗಲಿದೆ. ಈಗಿನಂತೆ ಸೆಪ್ಟೆಂಬರ್ 13ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ. ಅಲ್ಲಿಯ ತನಕ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆ ಮುಂದುವರಿಯುವ ಸಾಧ್ಯತೆಗಳಿವೆ.

06.09.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಹಾಗೂ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕರಾವಳಿ ತೀರ ಭಾಗಗಳಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಮೋಡ ಒಂದೆರಡು ತುಂತುರು ಮಳೆಯ ಸಾಧ್ಯತೆ ಇದೆ. ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು. ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ ಇದ್ದು, ಉಳಿದ ಭಾಗಗಳಲ್ಲಿ ಮೋಡ ಮತ್ತು ತುಂತುರು ಮಳೆಯ ಮುನ್ಸೂಚೆನೆ ಇದೆ.

ರಾಯಚೂರು, ಯಾದಗಿರಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ತುಮಕೂರು, ಚಿತ್ರದುರ್ಗ ದಕ್ಷಿಣ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರ್ಗಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಒಂದೆರಡು ತುಂತುರು ಮಳೆಯ ಸಾಧ್ಯತೆ ಇದೆ.

ಈಗಿನಂತೆ ಸೆಪ್ಟೆಂಬರ್ 6ರಿಂದ ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳದ ಕರಾವಳಿ ಸಮೀಪ ವಾಯುಭಾರ ಕುಸಿತದ ಲಕ್ಷಣಗಳಿದ್ದು, ರಾಜ್ಯದ ಕರಾವಳಿ ಭಾಗಗಳಲ್ಲಿ ಸೆಪ್ಟೆಂಬರ್ 8ರಿಂದ ಮಳೆ ಸ್ವಲ್ಪ ಜಾಸ್ತಿಯಾಗುವ ಮುನ್ಸೂಚೆನೆ ಇದೆ. ಉಳಿದ ಭಾಗಗಳಲ್ಲಿ ಕಾದು ನೋಡಬೇಕಾಗಿದೆ.

Related Post

Leave a Reply

Your email address will not be published. Required fields are marked *