ಆತ್ಮೀಯ ರೈತ ಬಾಂಧವರೇ ಇಂದು ರಾತ್ರಿ 7.43 PM ನನ್ನ ಖಾತೆಗೆ ಪಿಎಂ ಕಿಸಾನ್ 16ನೇ ಕಂತಿನ ಹಣ ಜಮಾ ಆಗಿದೆ. 28/02/24 ನನ್ನ ಖಾತೆಗೆ ಹಣ ಬಂದಿದ್ದು ನಿಮಗೂ ಕೂಡ ಕೆಲವೇ ದಿನಗಳಲ್ಲಿ ಈ ಪಿಎಂ ಕಿಸಾನ್ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದು ತಲುಪುತ್ತದೆ.
ನಿಮಗೆ ಎಷ್ಟು ಕಂತಿನ ಹಣ ಬಂದಿದೆ ಎಂದು ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://bhoomisuddi.com/know-immediately-how-much-money-pm-kisan-has-collected-till-date-for-farmers/
ಫೆ.28 ರಂದು ಕೃಷಿ ಡೋನ್ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮ
ಬಳ್ಳಾರಿ : ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣ ಸಂಸ್ಥೆ, ಸಂಶೋಧನಾ ಕೇಂದ್ರ, ಬಳ್ಳಾರಿ ಇವರ ವತಿಯಿಂದ ಕೃಷಿ-ಡೋನ್ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮವನ್ನು ಫೆ.28 ರಂದು ಬಳ್ಳಾರಿ ತಾಲ್ಲೂಕಿನ ಬೆಳಗಲ್ ತಾಂಡಾ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಅಗ್ನಿ-ಡೋನ್ ಯೋಜನೆಯಡಿಯಲ್ಲಿ, ICAR-ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ (ATARI), ಲುಧಿಯಾನ ಇವರ ಧನಸಹಾಯದೊಂದಿಗೆ ಆಯೋಜಿಸಲಾಗಿದೆ.
ಮಾಹಿತಿಗಾಗಿ ಸಮನ್ವಯ ತಂಡ:
ಡಾ.ಎಂ.ಎನ್. ರಮೇಶ, ಹಿರಿಯ ವಿಜ್ಞಾನಿ (ಅರಣ್ಯ), ಮೊ: 9630437467, 91489 51990. ವೃಷಭೇಂದ್ರಪ್ಪ, ತಂತ್ರಜ್ಞ ಇವರ ಮೊ:7899153251, ಸಂಪರ್ಕದ ವಿವರ: ಡಾ.ಬಿ.ಕೃಷ್ಣರಾವ್, ಮುಖ್ಯಸ್ಥರು, ಇವರ ಮೊ:9574715074. ಡಾ.ಎಂ.ಎನ್.ರಮೇಶ, ಹಿರಿಯ ವಿಜ್ಞಾನಿ (ಅರಣ್ಯ), ಇವರ ಮೊ:9630437467 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿಯ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣ ಸಂಸ್ಥೆ, ಸಂಶೋಧನಾ ಕೇಂದ್ರದ ಪ್ರಭಾರಿ ಮುಖ್ಯಸ್ಥರಾದ ಬಿ.ಎಸ್.ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
28 ರಂದು ಮಿನಿ ಉದ್ಯೋಗ ಮೇಳ
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಫೆಬ್ರವರಿ 28 ರಂದು ಬೆಳಿಗ್ಗೆ 10.30 ರಿಂದ ಸಂಜೆ 4 ಗಂಟೆವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಉದ್ಯೋಗ ಮೇಳದ ನೇರ ಸಂದರ್ಶನದಲ್ಲಿ ಹಲವಾರು ಖಾಸಗಿ ಕಂಪನಿಗಳು ಭಾಗವಹಿಸಿ ಹಲವಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ನೇರ ಸಂದರ್ಶನದಲ್ಲಿ 18 ರಿಂದ 30 ವಯಸ್ಸಿನ ಎಸ್. ಎಸ್.ಎಲ್.ಸಿ, ಪಿಯುಸಿ ಹಾಗೂ ಪದವೀಧರರು ಭಾಗವಹಿಸಬಹುದಾಗಿದೆ. ಭಾಗವಹಿಸುವ ಅಭ್ಯರ್ಥಿಗಳು ಬಯೋಡಾಟಾ ಮತ್ತು ಮೂಲ ಅಂಕಪಟ್ಟಿಗಳ ಝರಾಕ್ಸ ಪ್ರತಿಯೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ 08354-235337, 7676692029, 7019606100 ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಪೌಷ್ಠಿಕಾಂಶ ಆಹಾರ ನೀಡುವ ‘ಅನ್ನಪೂರ್ಣ’ ಯೋಜನೆಗೆ ಚಾಲನೆ
ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಪೌಷ್ಠಿಕಾಂಶ ಆಹಾರ ನೀಡುವ ‘ಅನ್ನಪೂರ್ಣ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಚಾಲನೆ ನೀಡಿದರು. ಈ ಕಾರ್ಯಕ್ರಮವು ಸದ್ಗುರು ಮಧುಸೂದನ್ ಸಾಯಿಯವರ ಕಲ್ಪನೆಯಾಗಿದ್ದು, ಯಾವುದೇ ಮಗು ಹಸಿವಿನಿಂದ ಶಾಲೆಗೆ ಹೋಗಬಾರದು ಎಂಬುದು ಈ ಕಾರ್ಯಕ್ರಮದ ಧೈಯವಾಗಿದೆ. ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಪ್ರಕಾರ, ಕರ್ನಾಟಕವು ಕಳೆದ ಒಂಬತ್ತು ವರ್ಷಗಳಿಂದ ಅನ್ನಪೂರ್ಣ ಟ್ರಸ್ಟ್ ನ ಸೇವೆಗಳ ಕೇಂದ್ರವಾಗಿದೆ ಮತ್ತು ರಾಜ್ಯದಲ್ಲಿ ಕೇವಲ 50 ಮಕ್ಕಳಿಗೆ ಆಹಾರ ನೀಡುವುದರೊಂದಿಗೆ ಪ್ರಾರಂಭವಾಯಿತು.
ಇದು 5,085 ಶಾಲೆಗಳಲ್ಲಿ ಸುಮಾರು 3,62,243 ಮಕ್ಕಳಿಗೆ ಹಂತ ಹಂತವಾಗಿ ಬೆಳೆದಿದೆ. ಇಡೀ ಕರ್ನಾಟಕದ ಮೂಲಕ 53,619 ಶಾಲೆಗಳನ್ನು ತಲುಪಲು ಅದರ ಆರೈಕೆಯಲ್ಲಿ ಹೆಚ್ಚುವರಿ 55 ಲಕ್ಷ ಮಕ್ಕಳು ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ, ಕರ್ನಾಟಕದ ಬಹುತೇಕ ಎಲ್ಲಾ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು ತಮ್ಮ ಬೆಳಗಿನ ಪೌಷ್ಠಿಕಾಂಶವನ್ನು “ಅನನ್ಯ” ಬಹು-ಪೌಷ್ಠಿಕಾಂಶದ ಪೂರಕವಾದ ಮೂಲಕ ಸ್ವೀಕರಿಸುತ್ತಾರೆ. ವಿಶೇಷವಾಗಿ ಮಕ್ಕಳಿಗಾಗಿ ಆಹಾರವನ್ನು ಮರುಸಂಯೋಜನೆ ಮಾಡಲಾಗಿದೆ ಎಂದು ಟ್ರಸ್ಟ್ ಹೇಳಿಕೆಯಲ್ಲಿ ತಿಳಿಸಿದೆ. 2013 ರಿಂದ, ಕರ್ನಾಟಕ ಸರ್ಕಾರದ ‘ಕ್ಷೀರ ಭಾಗ್ಯ’ ಉಪಕ್ರಮವು ಸರ್ಕಾರಿ ಶಾಲೆಗೆ ಹೋಗುವ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು ಸರಬರಾಜು ಮಾಡುತ್ತಿದೆ.