Breaking
Tue. Dec 17th, 2024

ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಿರಿ

By mveeresh277 Aug18,2023 ##soiltesting
Spread the love

ಆತ್ಮೀಯ ರೈತ ಭಾಂದವರೆ,

ವಿವಿಧ ಬೆಳೆಗಳಿಗೆ ಕೊಡಬೇಕಾದ ರಾಸಾಯನಿಕ ಗೊಬ್ಬರಗಳ ಪ್ರಮಾಣ ಕೆಳಗಿನ ಎರಡು ಅಂಶಗಳನ್ನು ಅವಲಂಬಿಸಿರುತ್ತದೆ.

  1. ಬೆಳೆ ಉಪಯೋಗಿಸಿಕೊಳ್ಳುವ ಸಸ್ಯ ಪೋಷಕಾಂಶಗಳ ಪ್ರಮಾಣ
  2. ಮಣ್ಣಿನಲ್ಲಿರುವ ಸಸ್ಯ ಪೋಷಕಾಂಶಗಳ ಮಟ್ಟ ಅಥವಾ ಮಣ್ಣಿನ ಫಲವತ್ತತೆ,

ಹೈಬ್ರಿಡ್ ಮತ್ತು ಅಧಿಕ ಇಳುವರಿ ಕೊಡುವ ಸುಧಾರಿತ ತಳಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಸ್ಯ ಪೋಷಕಾಂಶಗಳನ್ನು ಬಳಸಿಕೊಳ್ಳುವ ಸಾಮರ್ಥ್ಯವಿದೆ. ಸಂಶೋಧನೆಯ ಆಧಾರದ ಮೇಲೆ ವಿವಿಧ ಬೆಳೆಗಳಿಗೆ ಸಾಧಾರಣ ಫಲವತ್ತತೆಯ ಸನ್ನಿವೇಶದಲ್ಲಿ ಕೊಡಬೇಕಾದ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಿ, ಶಿಫಾರಸು ಮಾಡಲಾಗಿದೆ. ಆದರೆ ಈ ಶಿಫಾರಸುಗಳನ್ನು ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಬದಲಾವಣೆ ಮಾಡಿಕೊಳ್ಳುವುದು ಅವಶ್ಯಕ.

ಮಣ್ಣಿನ ಪರೀಕ್ಷೆ ಮಾಡಿಸದೆ, ರಾಸಾಯನಿಕ ಗೊಬ್ಬರಗಳನ್ನು ಹಾಕುವುದರಿಂದ ಅವಶ್ಯಕತೆಗಿಂತ ಹೆಚ್ಚಿಗೆ ಖರ್ಚು ಮಾಡುವುದರೊಂದಿಗೆ ಭೂಮಿಯ ಗುಣಮಟ್ಟವನ್ನು ಹಾಳು ಮಾಡಲಾಗುತ್ತಿದೆ. ರಾಸಾಯನಿಕ ಗೊಬ್ಬರಗಳ ಬೆಲೆ ಅಧಿಕವಾಗಿರುವ ಈ ದಿನಗಳಲ್ಲಿ ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಅವಶ್ಯವಿದ್ದಷ್ಟು ಗೊಬ್ಬರಗಳನ್ನು ಕೊಡುವುದು, ಇಳುವರಿ ಹಾಗೂ ಆರ್ಥಿಕ ದೃಷ್ಟಿಯಿಂದ ಸೂಕ್ತ ಪದ್ಧತಿ. ಮಣ್ಣು ಪರೀಕ್ಷೆಯಿಂದ ಮಣ್ಣಿನಲ್ಲಿ ಲಘುಪೋಷಕಾಂಶಗಳ (ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಸತುವು, ಮಾಲಿನಂ ಮತ್ತು ಬೋರಾನ್) ಕೊರತೆ ಇದ್ದರೆ ಅವುಗಳನ್ನು ನೀಗಿಸುವ ಕ್ರಮ ತೆಗೆದುಕೊಳ್ಳಬಹುದು.

ಮಣ್ಣು ಮಾದರಿ ತೆಗೆಯುವ ವಿಧಾನ:-

ಹಿಂಗಾರು ಪೈರು ಕಟಾವಾದ ಕೂಡಲೇ ಮಾಗಿ ಉಳುಮೆ ಮಾಡುವುದಕ್ಕಿಂತ ಮುಂಚೆ ಮಣ್ಣಿನ ಮಾದರಿಗಳನ್ನು ತೆಗೆಯುವ ಕಾರ್ಯಕೈಕೊಳ್ಳಬೇಕು. ಸಾಮಾನ್ಯವಾಗಿ ಸಣ್ಣ ಮತ್ತು ಅತಿಸಣ್ಣ ರೈತರು 4 ರಿಂದ 5 ಎಕರೆ ಜಮೀನನ್ನು ಒಂದೊಂದು ಕಡೆ ಸಾಗುವಳಿ ಮಾಡುತ್ತಾರೆ. ಆದ್ದರಿಂದ ಇಂತಹ ಒಂದೊಂದು ಕ್ಷೇತ್ರವನ್ನು ಮಣ್ಣಿನ ಮಾದರಿ ತೆಗೆಯಲು ಮತ್ತು ಮಣ್ಣನ್ನು ಪರೀಕ್ಷಿಸಿ ಶಿಫಾರಸು ಮಾಡಲು ಒಂದು ಕನಿಷ್ಠ ಪ್ರಮಾಣವಾಗಿ ಪರಿಗಣಿಸಬೇಕಾಗುತ್ತದೆ. ದೊಡ್ಡ ಜಮೀನುಗಳೂ ಕೂಡ ಮಣ್ಣಿನ ಮಾದರಿ ತೆಗೆಯಲು ಕನಿಷ್ಠ ಪ್ರಮಾಣವಾಗುತ್ತವೆ. ಆದರೆ ಇಂತಹ ಪ್ರದೇಶಗಳಲ್ಲಿ ಮಣ್ಣಿನ ಭೌತಿಕ ಗುಣಧರ್ಮಗಳಲ್ಲಿ ಹೆಚ್ಚಿನ ಬದಲಾವಣೆ ಇರಬಾರದು. ಮಣ್ಣಿನ ಗುಣಧರ್ಮಗಳಲ್ಲಿ ಬದಲಾವಣೆ ಇರುವ ಸಣ್ಣ ಸಣ್ಣ ಸ್ಥಳಗಳಲ್ಲಿ ಬೇರೆ ಬೇರೆಯಾಗಿ ಮಣ್ಣಿನ ಮಾದರಿಗಳನ್ನು ತೆಗೆದುಕೊಳ್ಳಬೇಕು.

ಮಣ್ಣಿನ ಮಾದರಿ ತೆಗೆದುಕೊಳ್ಳಲು ಬೇಕಾಗುವ ಸಾಮಗ್ರಿಗಳು:- ಮಣ್ಣಿನ ಮಾದರಿ ತೆಗೆಯುವ ಕೊಳುವೆ ಅಥವಾ ಸಲಿಕೆ, ಜಮೀನಿನ ನಕ್ಷೆ ತೆಗೆಯಲು ಕಾಗದ, ಮಣ್ಣಿನ ಮಾದರಿ ಚೀಲಗಳು, ಮೇಣದ ಪೆನ್ಸಿಲ್, ಕೈ ಬುಟ್ಟಿ ಮುಂತಾದವು.

ಮಾದರಿ ತೆಗೆಯುವ ಪದ್ಧತಿ:- ಮಣ್ಣಿನ ಮಾದರಿ ತೆಗೆಯಲು ಒಳಪಡಿಸುವ ಜಮೀನನ್ನು ಒಂದು ಸಲ ಸಾಮಾನ್ಯವಾಗಿ ಪರೀಕ್ಷಿಸಿ ಅದರ ನಕ್ಷೆಯನ್ನು ತಯಾರಿಸಬೇಕು. ಇದರಲ್ಲಿ ಎಲ್ಲ ಮೇಲೆ ಲಕ್ಷಣಗಳನ್ನು ಸೂಚಿಸಬೇಕು. ಯಾವ ಸ್ಥಳಗಳಲ್ಲಿ ಎಷ್ಟು ಮಣ್ಣಿನ ಮಾದರಿಗಳನ್ನು ತೆಗೆಯಬೇಕು ಎಂಬುದನ್ನು ಗುರುತಿಸಬೇಕು. ಇಳಿಜಾರು ಪ್ರದೇಶ, ಮಣ್ಣಿನ ಸಾವಯವದ ಅಂಶ, ಮಣ್ಣಿನ ಫಲವತ್ತತೆ ಇವುಗಳನ್ನು ಪ್ರತಿನಿಧಿಸುವಂತೆ ಬೇರೆ ಮಾದರಿಗಳನ್ನು ತೆಗೆದುಕೊಳ್ಳಬೇಕು. ಕಟ್ಟಡಗಳ ಪಕ್ಕ, ಹೊಲದ ಬದುವಿನಲ್ಲಿ, ಕ್ಷೇತ್ರಗಳಲ್ಲಿ ದಾರಿಗುಂಟ ಮತ್ತು ಗೊಬ್ಬರ ಹಾಕಿದ ಬೆಳೆಗಳ ಸಾಲುಗಳಲ್ಲಿ ಮಣ್ಣಿನ ಮಾದರಿಗಳನ್ನು ತೆಗೆಯುವುದು ಸೂಕ್ತವಲ್ಲ,

ಮಣ್ಣಿನ ಮಾದರಿಯನ್ನು ತೆಗೆಯುವ ಪ್ರತಿಯೊಂದು ಕ್ಷೇತ್ರದಲ್ಲಿ ತಿರುಗಾಡಿ 15 ರಿಂದ 20 ಹೆಜ್ಜೆಗಳ ಅಂತರದಲ್ಲಿ ಒಂದೊಂದು ಮಾದರಿಯನ್ನು ತೆಗೆದು ಚೀಲದಲ್ಲಿ ಹಾಕಬೇಕು. ಒಂದು ಮಣ್ಣಿನ ಮಾದರಿ ಬೇಕಾದಲ್ಲಿ ಈ ತರಹದ 20 ರಿಂದ 25 ಸ್ಥಳಗಳಲ್ಲಿ ‘2’ ಆಕಾರದಲ್ಲಿ ತಿರುಗಾಡಿ ಮಣ್ಣಿನ ಮಾದರಿಯನ್ನು ತೆಗೆಯಬೇಕು. ಒಂದೊಂದು ಸ್ಥಳದಲ್ಲಿ ಮಣ್ಣಿಗೆ ಮಾದರಿಯ ಗಾತ್ರ ಆದಷ್ಟು ಸಣ್ಣದಿದ್ದರೆ ಸೂಕ್ತ.

ಮೇಲೆ ತಿಳಿಸಿದಂತೆ ಸಂಗ್ರಹಿಸಿದ ಮಣ್ಣಿನ ಮಾದರಿಯ ಗಾತ್ರ ಅತೀ ದೊಡ್ಡಾದಾಗಿದ್ದರೆ ಅದನ್ನು ಚೆನ್ನಾಗಿ ಕೂಡಿಸಿ, ದೊಡ್ಡ ಸಾಣಿಗೆಯ ಮೂಲಕ ಹಾಯಿಸಿ ಇಲ್ಲವೇ ಮಣ್ಣನ್ನು ಪ್ರತಿನಿಧಿಸುವಂತೆ ಸಣ್ಣ ಗಾತ್ರದ ಮಾದರಿಯನ್ನು ತೆಗೆದುಕೊಳ್ಳಬೇಕು. ಸಣ್ಣ ಗಾತ್ತದ ಮಣ್ಣಿನ ಮಾದರಿಯನ್ನು ತೆಗೆದುಕೊಳ್ಳಲು ಮೊದಲು ದೊಡ್ಡ ಕಾಗೆಯ ಮೂಲಕ ಹಾಯಿಸಿದ ಮಣ್ಣನ್ನು ಸ್ವಚ್ಛವಾದ ಪ್ಲಾಸ್ಟಿಕ್ ಹಾಳೆಯ ಮೇಲೆ ಹರಡಿ ಸಮನಾಗಿ ನಾಲ್ಕು ಭಾಗಗಳನ್ನು ಮಾಡಬೇಕು. ಎದುರು ಬದುರು ಇರುವ ಎರಡು ಭಾಗಗಳನ್ನು ಆಯ್ದುಕೊಂಡು ಉಳಿದೆರಡು ಭಾಗಗಳನ್ನು ತಿರಸ್ಕರಿಸಬೇಕು. ಈ ಪದ್ಧತಿಯನ್ನು ಸುಮಾರು 1 ರಿಂದ 2 ಮುಷ್ಟಿ (500 ಗ್ರಾಂ) ಮಣ್ಣು ಉಳಿಯುವವರೆಗೆ ಮುಂದುವರೆಸಬೇಕು,ಸಾಮಾನ್ಯವಾಗಿ ಮಣ್ಣು ಪರೀಕ್ಷೆಗೆ 500 ಗ್ರಾಂ ಮಣ್ಣು ಮಾದರಿ ಸಾಕಾಗುತ್ತದೆ, ಹೀಗೆ ತೆಗೆದ ಪ್ರತಿಯೊಂದು ಮಣ್ಣಿನ ಮಾದರಿಯನ್ನು “ಪ್ರತಿ ಮಣ್ಣು ಮಾದರಿಯೊಂದಿಗೆ ಕಳುಹಿಸತಕ್ಕ ವಿಚಾರ ಪತ್ರಿಕೆ ಜೊತೆಗೆ ಕೇಳಿದ ಮಾಹಿತಿಗಳನ್ನು ತುಂಬಿ ಹತ್ತಿರದ ಮಣ್ಣು ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಬೇಕು, ಈ ಪತ್ರಿಕೆಗಳು ಕರ್ನಾಟಕ ಸರಕಾರದ ಕೃಷಿ ಇಲಾಖೆಗಳಲ್ಲಿ ದೊರೆಯುತ್ತವೆ.

ಮುಖ್ಯ ಪೋಷಕಾಂಶಗಳು ಯಾವ ಫಲವತ್ತತೆಯ ಗುಂಪಿಗೆ ಸೇರಿವೆ ಎಂದು ನಿರ್ಧರಿಸಿದ ನಂತರ ಶಿಫಾರಸು (ನಿಗದಿತ) ಮಾಡಿದ ರಾಸಾಯನಿಕ ಗೊಬ್ಬರಗಳ ಪ್ರಮಾಣದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಫಲವತ್ತತೆ ಮಧ್ಯಮ ವರ್ಗಕ್ಕೆ ಸೇರಿದ್ದರೆ, ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರಗಳ ಪ್ರಮಾಣದಲ್ಲಿ ಯಾವ ಬದಲಾವಣೆಗಳನ್ನು ಮಾಡುವ ಅವಶ್ಯಕತೆ ಇಲ್ಲ. ಪೋಷಕಾಂಶಗಳು ಕಡಿಮೆ ಅಥವಾ ಅಧಿಕ ಫಲವತ್ತತೆ ವರ್ಗಕ್ಕೆ ಸೇರಿದ್ದರೆ, ಈ ಕೆಳಗಿನಂತೆ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಬದಲಾಯಿಸಿಕೊಳ್ಳಬಹುದು.

ಕಬ್ಬಿಣ ಮತ್ತು ಸತುವಿನ ಕೊರತೆಯನ್ನು ನಿವಾರಿಸಲು ಈ ಕೆಳಗಿನಂತೆ ಶಿಫಾರಸ್ಸು ಮಾಡಲಾಗಿದೆ.

  1. ಕಬ್ಬಿಣ ಮತ್ತು ಸತುವಿನ ಕೊರತೆ ಇರುವ ಗದಗ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಶ್ರಯದಲ್ಲಿ ಬೆಳೆಯುವ ಎಲ್ಲ ಬೆಳೆಗಳಿಗೆ ಪ್ರತಿ ಎಕರೆಗೆ 4 ಕಿ.ಗ್ರಾಂ ಕಬ್ಬಿಣದ ಸಟ್‌ನ್ನು + 4 ಕಿ.ಗ್ರಾಂ ಸತುವಿನ ಸಲ್ಫಟ್‌ನ್ನು ಪ್ರತಿ 8 ಕಿ.ಗ್ರಾಂ ಎರೆಗೊಬ್ಬರಗಳೆತ ತಿಪ್ಪೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ 15 ದಿನ ಕೂಡಿಟ್ಟು ನಂತರ ನೆರಳಿನಲ್ಲಿ ಒಣಗಿಸಿ ಬಿತ್ತನೆ ಸಮಯದಲ್ಲಿ ಕೊಡುವುದು ಸೂಕ್ತ.
  2. ನೀರಾವರಿ ಪ್ರದೇಶದಲ್ಲಿ ಬೆಳೆಯುವ ಎಲ್ಲ ಬೆಳೆಗಳಿಗೆ ಪ್ರತಿ ಎಕರೆಗೆ 8 ಕಿ.ಗ್ರಾಂ ಕಬ್ಬಿಣದ ಸಲ್ವೇಟ್‌ನ್ನು + 8 ಕಿ.ಗ್ರಾಂ ಸತುವಿನ ಸಲ್ನೋಟನ್ನು ಪ್ರತಿ 16 ಕಿ.ಗ್ರಾಂ ಎರೆಗೊಬ್ಬರ/ಕಳೆತ ತಿಪ್ಪೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ 15 ದಿನ ಕೂಡಿಟ್ಟು ನಂತರ ನೆರಳಿನಲ್ಲಿ ಒಣಗಿಸಿ ಬಿತ್ತನೆ ಸಮಯದಲ್ಲಿ ಕೊಡುವುದು ಸೂಕ್ತ.

ಈ ರೀತಿ ಮಾಡುವುದರಿಂದ ರೈತನ ಬೆಳೆಯ ಕರ್ಚು ಕೂಡ ಕಡಿಮೆ ಆಗುತ್ತದೆ ಹಾಗೂ ರೈತ ಅಧಿಕ ಲಾಭ ಪಡೆಯಬಹುದು.

https://chat.whatsapp.com/DgyceSrfHaIHrMa62BudxU

Related Post

Leave a Reply

Your email address will not be published. Required fields are marked *