ವೇಸ್ಟ್ ಡಿಕಂಪೋಜರ್ ತ್ಯಾಜ್ಯ ವಿಘಟಕ ಎನ್ನುವುದು ಹಲವು ಪ್ರಕಾರದ ಸೂಕ್ಷ್ಮಜೀವಿಗಳ ಒಂದು ಸಮೂಹ. ಇದನ್ನು ಹಸುವಿನ ಸಗಣಿಯ ಲೋಳೆಯಲ್ಲಿರುವ ಸೂಕ್ಷ್ಮಾಣುಗಳನ್ನು
ಬೇರ್ಪಡಿಸಿ, ಅಭಿವೃದ್ಧಿಪಡಿಸಿದ ಒಂದು ದ್ರವ ಮಾಧ್ಯಮ. ಇದರ ತಯಾರಿಕೆ ಮತ್ತು ಬಳಕೆ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೆಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
ವೇಸ್ಟ್ ಡಿಕಂಪೋಜರ್ ತಯಾರಿಸಲು 200 ಲೀಟರ್ ಅಳತೆಯ ಪ್ಲಾಸ್ಟಿಕ್ ಬ್ಯಾರೆಲ್/ ಡ್ರಮ್, 2 ರಿಂದ 4 ಕೆಜಿ ಬೆಲ್ಲ, 4 ಅಡಿಕೋಲು ಮುಚ್ಚಲು ಒಂದು ಶುಭ್ರ ಬಟ್ಟೆ ಅಥವಾ ಗೋಣಿಚೀಲ ಬೇಕಾಗುತ್ತದೆ.
ಮೊದಲಿಗೆ ಡ್ರಮ್/ ಬ್ಯಾರೆಲ್‌ಗೆ ಅರ್ಧದಷ್ಟು ನೀರು ತುಂಬಿಸಬೇಕು. 2 ರಿಂದ 4 ಕಿಲೋ ಸಾವಯವ ಬೆಲ್ಲ ಪುಡಿ ಮಾಡಿ ನೀರಿರುವ ಡ್ರಮ್/ ಬ್ಯಾರಲ್‌ಗೆ ಹಾಕಿ ಕೋಲಿನಿಂದ ಚೆನ್ನಾಗಿ ತಿರುಗಿಸಿ ಕರಗುವಂತೆ ಮಾಡಬೇಕು.
ಇದಕ್ಕೆ 50 ಮಿಲೀ, ವೇಸ್ಟ್ ಡಿಕಂಪೋಸರ್ ತ್ಯಾಜ್ಯ ವಿಘಟಕ ಬಾಟಲ್‌ನಲ್ಲಿ ಇರುವ ಸಂಪೂರ್ಣ ದ್ರಾವಣವನ್ನು ಡ್ರಮ್/ ಬ್ಯಾರೆಲ್‌ಗೆ ಹಾಕಿ ಆಮೇಲೆ ನೀರು ಹಾಕಿ ಸಂಪೂರ್ಣವಾಗಿ ತುಂಬಿಸಿ, ಕೋಲಿನಿಂದ ಮತ್ತೆ ತಿರುಗಿಸಬೇಕು. ಆಮೇಲೆ 200 ಲೀ. ನೀರು ಹಾಗೂ ಈ ಮಿಶ್ರಣ ಇರುವ ಕಸಕಡ್ಡಿ, ಕ್ರಿಮಿಗಳು ಬೀಳದಂತೆ ಬಟ್ಟೆ ಅಥವಾ ಗೋಣಿ ಚೀಲದಿಂದ ದ್ರಾವಣವನ್ನು ಮುಚ್ಚಿದಾರದಿಂದ ಕಟ್ಟಿಬಿಡಬೇಕು.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕೋಲಿನಿಂದ ತಿರುಗಿಸಬೇಕು. 4 ರಿಂದ 7 ದಿನಗಳಲ್ಲಿ ಮಿಶ್ರ ದ್ರಾವಣದ ಮೇಲ್ಪದರದಲ್ಲಿ ಕೆನೆ ರೀತಿ ಪದರು ನಿರ್ಮಾಣವಾಗಿ ದ್ರಾವಣ ಬಳಕೆಗೆ ಸಿದ್ಧವಾಗುತ್ತದೆ.
ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ಪಡಿತರ ಚೀಟಿ ಹೊಂದಿದ ಜನರಿಗೆ ಸಿಹಿ ಸುದ್ದಿ, ಆಪರೇಷನ್ ಪಡಿತರ, ವೈದ್ಯಕೀಯ ಚಿಕಿತ್ಸೆಗಾಗಿ ಆಂಧ್ರ ಮಾದರಿ ಕಾರ್ಡ್
ತೊಗರಿಯಲ್ಲಿ ಬಲೆ ಕಟ್ಟುವ ಕೀಟ ಹತೋಟಿ
ಬೆಳೆಗಳಲ್ಲಿ ಕೀಟಪೀಡೆ ಹೆಚ್ಚಾಗಲು ಕಾರಣಗಳು, ಇಲ್ಲಿದೆ ಸಂಪೂರ್ಣ ಮಾಹಿತಿ