Breaking
Tue. Dec 17th, 2024

ವೃಷಭಾವತಿ ಯೋಜನೆ ಬಂಜರು ಭೂಮಿಗೆ ಜೀವಜಲ, govt irrigation facility

Spread the love

ರೂ.2,100 ಕೋಟಿ ವೆಚ್ಚದ ಬೃಹತ್ ಏತ ನೀರಾವರಿ ಯೋಜನೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಕೆ ಮತ್ತು ಅಂತರ್ಜಲ ವೃದ್ಧಿ. ವೃಷಭಾವತಿ ವ್ಯಾಲಿಯಿಂದ ಸಂಸ್ಕರಿಸಿದ 308 ಎಂ.ಎಲ್.ಡಿ ನೀರನ್ನು 3 ಹಂತದಲ್ಲಿ 259 ಕೆರೆಗಳಿಗೆ ಹರಿಸುವುದು. ಮೊದಲ ಹಂತದಲ್ಲಿ ರೂ. 1,081 ಕೋಟಿ ವೆಚ್ಚದಲ್ಲಿ 70 ಕೆರೆಗಳಿಗೆ ನೀರು ತುಂಬಿಸುವುದು.

ಘನತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಅಭಿಯಾನ ಕೈಗೊಂಡ ಬಿಬಿಎಂಪಿ

ದಕ್ಷಿಣ ವಲಯದಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ಬಿಬಿಎಂಪಿ ಭಾನುವಾರ ಜಾಗೃತಿ ಅಭಿಯಾನ ನಡೆಸಿತು. ದಕ್ಷಿಣ ವಲಯ ಆಯುಕ್ತ ವಿನೋತ್ ಪ್ರಿಯಾ ಆರ್ ನೇತೃತ್ವದಲ್ಲಿ, ಪಾಲಿಕೆ ಅಧಿಕಾರಿಗಳು ಬೀದಿ ನಾಟಕಗಳನ್ನು ಪ್ರದರ್ಶಿಸಿದರು ಮತ್ತು ಕರಪತ್ರಗಳನ್ನು ಹಂಚಿದರು. ತ್ಯಾಜ್ಯವನ್ನು ಹಸಿ, ಒಣಗಿದ ಮತ್ತು ಸ್ಯಾನಿಟರಿ ತ್ಯಾಜ್ಯಗಳಾಗಿ ವಿಂಗಡಿಸುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಬಿಬಿಎಂಪಿ ಅಧಿಕಾರಿಗಳು ಏಕಬಳಕೆಯ ಪ್ಲಾಸ್ಟಿಕ್ ನಿಷೇಧದ ಬಗ್ಗೆಯೂ ಪ್ರಚಾರ ಮಾಡಿದರು. ಸಾರಕ್ಕಿ ಮತ್ತು ಮಡಿವಾಳ ಮಾರುಕಟ್ಟೆಗಳಲ್ಲಿ ಜನರಿಗೆ ಬಟ್ಟೆಯ ಚೀಲಗಳನ್ನು ವಿತರಿಸಿದರು. ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಗೆ ನಿಷೇಧವಿದೆ ಎಂದು ಪುನರುಚ್ಚರಿಸಿದ ಬಿಬಿಎಂಪಿ ಅಧಿಕಾರಿಗಳು, ಬಟ್ಟೆ ಚೀಲಗಳು ಮತ್ತು ಇತರ ಪರಿಸರ ಸ್ನೇಹಿ ವಸ್ತುಗಳನ್ನು ಕೊಂಡೊಯ್ಯಲು ಮತ್ತು ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ ಜನರನ್ನು ಕೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 70% ಕೆರೆಗಳು ಖಾಲಿ

ಜಲಮೂಲವಾಗಿ ಕೆರೆಗಳನ್ನು ಅವಲಂಬಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಹುತೇಕ ಕೆರೆಗಳ ಬರಡಾಗಿವೆ. ಜಿಲ್ಲೆಯ 70% ಕೆರೆಗಳಲ್ಲಿಬಹುತೇಕ ನೀರಿಲ್ಲದೆ ಬರಿದಾದ ಮೈದಾನದಂತೆ ಕಾಣುತ್ತಿವೆ. ಮಳೆಯಾಗದಿದ್ದರೆ ಮತ್ತಷ್ಟು ನೀರಿನ ಕೊರತೆ ಕಾಡುವ ಸೂಚನೆ ಕಾಣುತ್ತಿದ್ದು, ಅಂತರ್ಜಲದ ಮೇಲೆ ಪ್ರಭಾವ
ಬೀರುವ ಸಾಧ್ಯತೆ ಇದೆ.

ಸದ್ಯದ ಪರಿಸ್ಥಿತಿಯಲ್ಲಿ ಕೆರೆಗಳು ಖಾಲಿ ಜಾಗಗಳಂತೆ ಕಾಣುತ್ತಿವೆ. ಅದರಲ್ಲೂ 30% ಕೆರೆಗಳಲ್ಲಿ 20% ನೀರಿದ್ದರೆ, ಉಳಿದ 70% ಕೆರೆಗಳಲ್ಲಿ ಬಹುತೇಕ ನೀರಿಲ್ಲ. ಕೆರೆಗಳ ಮಧ್ಯೆ ಅಲ್ಲಲ್ಲಿ ಗುಂಡಿಗಳಲ್ಲಿ ಮಾತ್ರ ಸ್ವಲ್ಪ ನೀರಿದೆ. ಉಳಿದ ಭಾಗ ಬರಿದಾಗಿದೆ. ಕೆರೆಗಳಲ್ಲಿ ಕಣ್ಣು ಹಾಯಿಸಿದ ಬಹುತೇಕ ಕಡೆಗಳಲ್ಲಿ ಖಾಲಿ ಜಾಗಗಳು ಕಾಣುತ್ತಿದೆ. ಕೆರೆಯೊಳಗಿನ ವರ್ಷ ಜೋರು ಮಳೆಯಾದರೆ ಮಾತ್ರ ಕೆರೆಗಳಿಗೆ ಜೀವ ಕಳೆ ಬರಲಿದೆ. ಆದರೆ ಕೆರೆ ನೀರು ಕೆರೆಯಲ್ಲಿಉಳಿಸಿಕೊಳ್ಳಲು ಕ್ರಮ ವಹಿಸಬೇಕಾಗಿದೆ.

ಮೋಟಾರ್‌ ಇದ್ದ ಕಬ್ಬಿನ ಹಾಲಿನ ಗಾಡಿ ಕದ್ದ ಇಬ್ಬರು ಆರೋಪಿಗಳ ಬಂಧನ

ಬೀದಿ ಬದಿ ನಿಲುಗಡೆ ಮಾಡಿದ್ದ ಮೋಟಾರ್ ಇದ್ದ ಕಬ್ಬಿನ ಹಾಲನ ಗಾಡಿಯನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಅಂಜನಾಪುರದ ಆವಲಹಳ್ಳಿ ನಿವಾಸಿ ವಿಜಯ್ ಕುಮಾರ್ ಅಲಿಯಾಸ್ ವಿಜಿ (29) ಮತ್ತು ಆವಲಹಳ್ಳಿಯ ಅಯೂಬ್ ಲೇ ಔಟ್ ನಿವಾಸಿ ಮನ್ಸೂರ್ ಪಾಷಾ ಅಲಿಯಾಸ್ ಮನ್ಸೂರ್ (27) ಬಂಧಿತ ಆರೋಪಿಗಳು.

ಆರೋಪಿಗಳಿಂದ ರೂ.1 ಲಕ್ಷ ಮೌಲ್ಯದ ಮೋಟಾರು ಇದ್ದ ಕಬ್ಬಿನ ಹಾಲಿನ ಗಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಮಾ.1 ರಂದು ಅಂಜನಾಪುರದ ಬೀದಿ ಸೈಯದ್ ನಫೀಜ್ ಎಂಬುವವರು ನಿಲ್ಲಿಸಿದ್ದ ಮೋಟಾರು ಇದ್ದ ಕಬ್ಬಿನ ಹಾಲಿನ ಗಾಡಿ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ತಮ್ಮ ದುಶ್ಚಟಗಳಿಗಾಗಿ ಸುಲಭವಾಗಿ ಹಣ ಹೊಂದಿಸುವ ಉದ್ದೇಶದಿಂದ ಕಬ್ಬಿನ ಹಾಲಿನ ಗಾಡಿಯನ್ನು ಕಳ್ಳತನ ಮಾಡಿದ್ದರು.

Related Post

Leave a Reply

Your email address will not be published. Required fields are marked *