ಕರ್ನಾಟಕದ ಮುಂಗಾರು ಮಳೆ ಚಟುವಟಿಕೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಮುಂದಿನ 5 ದಿನ ಉತ್ತರ ಒಳನಾಡಿನ ಬಹುತೇಕ ಭಾಗ ಶುಷ್ಕ ಉಳಿಯುವ ಸಾಧ್ಯತೆ, ಆದಾಗ್ಯೂ, ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ ಕರಾವಳಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ, ಆದರೆ ಅದು ಮಲೆನಾಡು & ಒಳನಾಡಿನ ಕಡೆಗೆ ಚಲಿಸುವ ಸಾಧ್ಯತೆಯಿಲ್ಲ. ಈ ಪರಿಸ್ಥಿತಿ ಸೆಪ್ಟೆಂಬರ್ 4 ರ ವರೆಗೆ ಮುಂದುವರಿಯುವ ಎಲ್ಲಾ ಸಾಧ್ಯತೆಯಿದೆ. ನಂತರ ಮುಂಗಾರು ಸ್ವಲ್ಪ ಸಕಾರಾತ್ಮಕ ಬದಲಾವಣೆ ಕಾಣಲಿದೆ.
ಮುಂಗಾರು ಆರಂಭವಾದಾಗಿನಿಂದ ಉತ್ತರ ಒಳನಾಡಿನಲ್ಲಿ ಸರಾಸರಿ 318 ಮಿ.ಮೀ ಮಳೆಯಾಗಬೇಕಿತ್ತು ಆದರೆ 291 ಮಿ.ಮೀ ಮಳೆಯಾಗಿದ್ದು 8 % ಕೊರತೆಯಿದೆ, ದಕ್ಷಿಣ ಒಳನಾಡಿನಲ್ಲಿ ಇದೇ ಅವಧಿಗೆ ಸರಾಸರಿ 503 ಮಿ.ಮೀ ಮಳೆಯಾಗಬೇಕಿತ್ತು ಆದರೆ 362 ಮಿ.ಮೀ ಮಳೆಯಾಗಿದ್ದು 28 % ಕೊರತೆಯಿದೆ, ಕರಾವಳಿ ಪ್ರದೇಶದಲ್ಲಿ ಅದೇ ಅವಧಿಗೆ ಸರಾಸರಿ 2663 ಮಿ.ಮೀ ಮಳೆಯಾಗಬೇಕಿತ್ತು ಆದರೆ 2266 ಮಿ.ಮೀ ಮಳೆಯಾಗಿದ್ದು 15 % ಕೊರತೆಯಿದೆ.
ಆಗಸ್ಟ್ ತಿಂಗಳ ಕಳೆದ 4 ವಾರಗಳಲ್ಲಿ ಇಡೀ ಕರ್ನಾಟಕದಲ್ಲಿ ಸರಾಸರಿ ಶೇ. 75 ರಷ್ಟು ಕೊರತೆ ಮಳೆಯಾಗಿದೆ. ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ ಈ 4 ವಾರಗಳಲ್ಲಿ ಎಲ್ಲಾ ಕರಾವಳಿ & ಮಲೆನಾಡು ಜಿಲ್ಲೆಗಳು ಒಟ್ಟಾರೆಯಾಗಿ ಶೇ. 89 ರಷ್ಟು ಮಳೆಯ ಕೊರತೆಯನ್ನು ಅನುಭವಿಸುತ್ತಿವೆ. ಸೆಪ್ಟೆಂಬರ್ ಮೊದಲ ವಾರದ ನಂತರ ಮುಂಗಾರು ಪುನಶ್ಚತನಗೊಳ್ಳುತ್ತದೆಯೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ!
ವೇಸ್ಟ್ ಡಿಕಂಪೋಜ ತ್ಯಾಜ್ಯ ವಿಘಟಕ ಬಳಕೆ
ಪಡಿತರ ಚೀಟಿ ಹೊಂದಿದ ಜನರಿಗೆ ಸಿಹಿ ಸುದ್ದಿ, ಆಪರೇಷನ್ ಪಡಿತರ, ವೈದ್ಯಕೀಯ ಚಿಕಿತ್ಸೆಗಾಗಿ ಆಂಧ್ರ ಮಾದರಿ ಕಾರ್ಡ್
ತೊಗರಿಯಲ್ಲಿ ಬಲೆ ಕಟ್ಟುವ ಕೀಟ ಹತೋಟಿ
ಬೆಳೆಗಳಲ್ಲಿ ಕೀಟಪೀಡೆ ಹೆಚ್ಚಾಗಲು ಕಾರಣಗಳು, ಇಲ್ಲಿದೆ ಸಂಪೂರ್ಣ ಮಾಹಿತಿ