ಎಲ್ಲಿ ಸಾಲ ಇರಬೇಕು? ಏಷ್ಟು ಬಡ್ಡಿ ಮನ್ನಾ?
ನಿಗದಿತ ಸಹಕಾರ ಸಂಘಗಳ ಸಾಲಕ್ಕೆ ಮಾತ್ರ ಅನ್ವಯ. ಫೆಬ್ರವರಿ 29ರೊಳಗೆ ಸಾಲ ಪಾವತಿಸಿದರೆ ಮಾತ್ರ ಬಡ್ಡಿ ಮನ್ನಾ. ರೂ10 ಲಕ್ಷದವರೆಗಿನ ಸಾಲದ ಬಡ್ಡಿಗೆ ಅನ್ವಯ.
ರೈತರ ಕೃಷಿ ಸಾಲದ ಬಡ್ಡಿ ಮನ್ನಾ ಷರತ್ತುಗಳೇನು?
ಈ ಯೋಜನೆ ಕೃಷಿಯೇತರ ಸಾಲಗಳಿಗೆ ಅನ್ವಯವಾಗುವುದಿಲ್ಲ. ನಿಗದಿತ ಸಹಕಾರ ಸಂಘಗಳಲ್ಲದೇ ಇತರೆ ಸಹಕಾರ ಸಂಸ್ಥೆಗಳಲ್ಲಿ ಪಡೆದ ಸಾಲಗಳಿಗೆ ಯೋಜನೆ ಅನ್ವಯಿಸದು. ರಾಜ್ಯ ಸರ್ಕಾರದ ಬಡ್ಡಿ ರಿಯಾಯಿತಿ ಬದ್ಧತೆಯಡಿ ವಿತರಿಸಿರುವ ಕೃಷಿ/ ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಅನ್ವಯ.
ನಬಾರ್ಡ್ ಗುರುತಿಸಿದ ಕೃಷಿ/ ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಅಂದರೆ ಲಘು ನೀರಾವರಿ, ಭೂ ಅಭಿವೃದ್ಧಿ, ಸಾವಯವ ಕೃಷಿ, ಪಶು ಸಂಗೋಪನೆ, ಹೈನುಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಕೃಷಿ ಯಾಂತ್ರೀಕರಣ, ಪ್ಲಾಂಟೇಷನ್, ತೋಟಗಾರಿಕೆ ಅಭಿವೃದ್ಧಿ ಉದ್ದೇಶಗಳಿಗೆ ಮಾತ್ರ ಈ ಯೋಜನೆ ಅನ್ವಯ. ಮಾರಟೊರಿಯಂ ಅವಧಿಯಲ್ಲಿ ಸುಸ್ತಿಯಾಗಿರುವ ಬಡ್ಡಿಗೂ ಅನ್ವಯ.
ಗ್ರಾಮೀಣ ಭಾಗದಲ್ಲಿ ಉದ್ಯೋಗ ಮೇಳ ಆಯೋಜನೆ
ಗ್ರಾಮೀಣ ಭಾಗದಲ್ಲಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ಶಿವಸಂಕೇತ ಪೌಂಡೇಶನ್ ಹಾಗೂ ಕನೆಕ್ಟ್ ಸಂಸ್ಥೆ ಗ್ರಾಮೀಣ ಯುವಕರಿಗೆ ಉತ್ತಮ ವೇದಿಕೆ ಕಲಿಸಿದೆ ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್. ಎಸ್.ಪಟ್ಟಣಶೆಟ್ಟಿ ಹೇಳಿದರು. ಅವರು ಡಂಬಳ ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶಿವಸಂಕೇತ ಪೌಂಡೇಶನ್ ಗದಗ, ಕನೆಕ್ಟ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡಾ ಕೌಶಲ್ಯ ಬೆಳೆಸಿಕೊಳ್ಳಬೇಕು ಅದಕ್ಕಾಗಿ ಬೇಕಾಗುವ ಪ್ರಾವೀಣ್ಯತೆ ಮೈಗೂಡಿಸಿಕೊಂಡಾಗ ಬದುಕು ಬದಲಾಗಲು ಸಾಧ್ಯವಾಗುತ್ತದೆ. ಕಲಿಯುವುದು ಎಷ್ಟು ಮುಖ್ಯವೋ ಕಲಿತ ನಂತರ ಸಿಗುವ ಕೆಲಸವನ್ನು ಶ್ರದ್ದೆಯಿಂದ ನಿರ್ವಹಿಸಿಕೊಂಡು ಹೋಗುವುದು ಅಷ್ಟೇ ಮುಖ್ಯವಾಗಿತ್ತದೆ. ಪ್ರಸ್ತುತ ದಿನಗಳಲ್ಲಿ ಬದುಕು ವ್ಯಾಪಕವಾಗಿ ಬದಲಾಗುತ್ತಿದೆ. ಅದಕ್ಕೆ ಇಂದಿನ ಯುವಕರು ಒಗ್ಗಿಕೊಂಡು ಕೆಲಸ ಮಾಡಬೇಕು. ಕಾಲೇಜು ಅವಧಿಯಲ್ಲಿಯೇ ಜೀವನದ ಮಾರ್ಗದರ್ಶನ ಕೂಡಾ ಮುಖ್ಯವಾಗುತ್ತದೆ ಅದನ್ನು ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸಿಬ್ಬಂದಿಗಳು ಮಕ್ಕಳಿಗೆ ನೀಡುತ್ತಿದ್ದಾರೆ.
ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು ಸ್ವಾಗತಾರ್ಹ ಕಾರ್ಯವಾಗಿದೆ ವಿದ್ಯಾರ್ಥಿಗಳು ಸರ್ಕಾರಿ ನೌಕರಿಗಳ ಬಗ್ಗೆ ಕಾಯುತ್ತಾ ಕುಳಿತುಕೊಳ್ಳದೇ ಖಾಸಗಿ ಕಂಪನಿಗಳಲ್ಲಿ ಸಿಗುವ ಕೆಲಸಗಳ ಮೂಲಕ ಬದುಕು. ಕಟ್ಟಿಕೊಳ್ಳಬಹುದು ಎಂದರು. ಶಿವಸಂಕೇತ ಪೌಂಡೇಶನ ಅಧ್ಯಕ್ಷೆ ಮಂಜುಳಾ ಕುಷ್ಟಗಿ ಉದ್ಘಾಟಿಸಿದರು. ಡಂಬಳ ಮಠದ ವ್ಯವಸ್ಥಾಪಕ ಜಿ.ವಿ.ಹಿರೇಮಠ, ಪ್ರಾಚಾರ್ಯ ಎಸ್. ಎಂ. ಶಿವರಾಚಯ್ಯ, ಜಿ.ಮಹೇಶಗೌಡ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕನೆಕ್ಟ್ ಸಂಸ್ಥೆಯ ನಿರ್ದೇಶಕ ಸಹದೇವ ಚಾಲೋಜಿ ಮುಂತಾದವರು ಮಾತನಾಡಿದರು.
ಟೊಯೋಟೊ ಕೌಶಲ್ಯ ಟ್ರೈನಿಂಗ್ ಬಿಡಿದಿ, ಕಾಡಿ ಮ್ಯಾನಿಫ್ಯಾರ್ಕ್ಟ ಪ್ರೈವೇಟ್ ಲಿ ಬೆಂಗಳೂರು, ಸಾಯಿ ಎಂಟರಪೈಜಿಸ್, ನವಭಾರತ ಫರ್ಟಿಲೈರ್ಜ, ರೈರ್ಟ ಕಾರ್ಪ ಬಿಜಿನೆಸ್ ಪ್ರೈವೇಟ್ ಲಿ. ಕರಾವಳಿ ಟೀಚರ್ಸ್ ಹೆಲ್ಪ ಲೈನ್, ಶೈನ್ ಹೆಲ್ತ್ ರ್ಕೇ, ಆಪ್ಟಿಮಮ್ ಮ್ಯಾನ್ ಪಾರ್ವ ಸರ್ವಿಸ್ಟ್ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. ಒಟ್ಟು 80 ಉದ್ಯೋಗ ಆಕಾಂಕ್ಷಿಗಳು ಹೆಸರು ನೊಂದಾಯಿಸಿಕೊಂಡಿದ್ದರು.
ಡಿಎಂಇ ತರಬೇತಿ ಕೇಂದ್ರದ ಸಿಬ್ಬಂದಿಗಳು ಪ್ರಾರ್ಥಿಸಿದರು. ರಮೇಶ ಕೊರ್ಲಹಳ್ಳಿ ನಿರೂಪಿಸಿದರು. ಶಿವಸಂಕೇತ ಪೌಂಡೇಶನ್ ಮಂಜುನಾಥ ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಇಂಟರ್ನಶಿಪ್ ತರಬೇತಿಗಾಗಿ ಅರ್ಜಿ ಆಹ್ವಾನ
ಮಹಾನಗರ ಪಾಲಿಕೆ ವತಿಯಿಂದ ಡೇ-ನಲ್ಮ ಅಭಿಯಾನ ಮತ್ತು ಪಿಎಂ ಸ್ವನಿಧಿ ಯೋಜನೆಯಡಿ ಇಂಟರ್ನಶಿಪ್ ತರಬೇತಿಗಾಗಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಗರ ಕಲಿಕಾ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ 2023-24ನೇ ಸಾಲಿಗೆ ಅನುಷ್ಠಾನಗೊಳಿಸಲಾಗುತ್ತಿದು, ಡೇ-ನಲ್ಮ ಅಬಿಯಾನದ ಉಪ ಘಟಕಗಳು ಮತ್ತು ಪಿಎಂಸ್ವನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳ ಕುರಿತು ಅಧ್ಯಯನ ಮಾಡಿ ಜ್ಞಾನ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿ ಕೊಡುವುದು ತರಬೇತಿ ಉದ್ದೇಶವಾಗಿದೆ. ಆಸಕ್ತರು ತಮ್ಮ
ಶೈಕ್ಷಣಿಕ ದಾಖಲೆಗಳೊಂದಿಗೆ ದಿನಾಂಕ 25-01-2024ರೊಳಗೆ ಅರ್ಜಿಯನ್ನು ವಿಜಯಪುರ ಮಹಾನಗರ ಪಾಲಿಕೆ ಡೇ-ನಲ್ಮ ಶಾಖೆಗೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಪಾಲಿಕೆಯ ಡೇ-ನಲ್ಮ ಶಾಖೆಯನ್ನು ಸಂಪರ್ಕಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚೀನಾದಲ್ಲಿ ಪ್ರಬಲ ಭೂಕಂಪ, ದೆಹಲಿಯಲ್ಲೂ ಕಂಪನ
ಚೀನಾದ ದಕ್ಷಿಣ ಭಾಗ ಕ್ಸಿಂಗಿಯಾಂಗ್ ನಲ್ಲಿ ಸೋಮವಾರ ಸಂಜೆ ಪ್ರಬಲ ಭೂಕಂಪ ಸಂಭವಿಸಿದ್ದು, ದೆಹಲಿ ಎನ್ಸಿಆರ್ ಪ್ರದೇಶದಲ್ಲೂ ಕಂಪನದ ಅನುಭವವಾಗಿದೆ. ಚೀನಾದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.2 ರಷ್ಟಿತ್ತು. ಇದುವರೆಗೆ ಯಾವುದೇ ಸಾವು ನೋವು ಇಲ್ಲವೇ ಆಸ್ತಿಪಾಸ್ತಿಗಳಿಗೆ ಹಾನಿಯಾದ ವಿವರಗಳು ಲಭ್ಯವಾಗಿಲ್ಲ. ಸುಮಾರು 80 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಹೇಳಿದೆ.
ಅಫ್ಘಾನಿಸ್ತಾನದಲ್ಲಿ ಜನವರಿ 11ರಂದು 6.1 ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ದೆಹಲಿ ಮತ್ತು ಎನ್ಸಿಆರ್ ಪ್ರದೇಶದಲ್ಲೂ ಕಂಪನ ಕಂಡುಬಂದಿತ್ತು. ಈ ಭೂಕಂಪನದ ಕೇಂದ್ರ ಕಾಬೂಲ್ ನಗರದಿಂದ ಈಶಾನ್ಯಕ್ಕೆ 241 ಕಿಲೋಮೀಟರ್ ದೂರದಲ್ಲಿತ್ತು. ಪಾಕಿಸ್ತಾನದಲ್ಲೂ ಭೂಕಂಪದ ಅನುಭವ ಆಗಿತ್ತು. ಸೋಮವಾರ ಬೆಳಿಗ್ಗೆ ಈಶಾನ್ಯ ಚೀನಾದ ಗುಡ್ಡಗಾಡು ಹಾಗೂ ಪರ್ವತ ಶ್ರೇಣಿಯಲ್ಲಿ ಭೂಕಂಪ ಸಂಭವಿಸಿದ್ದು, 47 ಮಂದಿ ಜೀವಂತ ಸಮಾಧಿಯಾಗಿದ್ದಾರೆ. 200ಕ್ಕೂ ಹೆಚ್ಚು ಮಂದಿಯನ್ನು ತುರ್ತಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಪ್ರಸಾರಸಂಸ್ಥೆ
ಸಿಸಿಟಿವಿ ವರದಿ ಮಾಡಿದೆ. ಭೂಕಂಪದಿಂದಾಗಿ ಯುನಾನ್ ಪ್ರಾಂತ್ಯದ ಕೈಂಕ್ಸಿಯಾಂಗ್ ಕೌಂಟಿಯಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತೀವ್ರ ಹಾಗೂ ದಿಢೀರ್ ಮಳೆ ಸೇರಿದಂತೆ ಚೀನಾದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚುತ್ತಿವೆ.