ಕಡಲೆ ಈ ಭಾಗದ ಪ್ರಮುಖ ವೇಳೆಕಾಳು ಬೆಳೆಯಾಗಿದ್ದು, ಅಧಿಕ ರೈತರು ಇದನ್ನು ಹಿಂಗಾರು ಹಂಗಾಮಿನಲ್ಲಿ ಬೆಳೆಯುತ್ತಿದ್ದಾರೆ. ಕಡಲೆ ಬೆಳೆಯು ಜೈವಿಕ ಸಾರಜನಕ ಸ್ಥಿರೀಕರಿಸುವ ಮೂಲಕ ಮಣ್ಣಿನ ಉತ್ಪಾದಕತೆಗೆ ಕೊಡುಗೆ ನೀಡುತ್ತಿದೆ. ಇದರ ಬೇಸಾಯ ಕ್ರಮಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
• ಕಡಲೆಯಲ್ಲಿ ಅಣ್ಣಿಗೇರಿ-1, ಜಿಬಿಎಂ-2, ಜಾಕಿ-9218, ಜಿಐಎಸ್-964, ಬಿಜೆಡಿ-111-1 ಮತ್ತು ಜೆಜಿ-11 ಪ್ರಮುಖ ತಳಿಗಳಿವೆ.ಬಿತ್ತನೆಗೆ ಪ್ರತಿ ಎಕರೆಗೆ 20 ಕೆಜಿ ಒಣಬೇಸಾಯಕ್ಕೆ ಮತ್ತು 25 ಕೆಜಿ ನೀರಾವರಿಗೆ ಬೀಜ ಬೇಕಾಗುತ್ತದೆ. ಬಿತ್ತನೆಗೆ ಮುನ್ನ ಪ್ರತಿ ಎಕರೆ ಬೀಜಕ್ಕೆ 500 ಗ್ರಾಂ ರೈಜೋಬಿಯಂ ಮತ್ತು 4 ಕೆಜಿ ಸಾರಜನಕ, 10 ಕೆಜಿ ರಂಜಕ ಹಾಕಬೇಕು.
ಬರ ನಿರೋಧಕತೆ ಹೆಚ್ಚಿಸಲು ಬೀಜವನ್ನು 20 ಗ್ರಾಂ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ ಅರ್ಧ ಗಂಟೆ ಅಥವಾ ಶೇ.25ರ ಗೋಮೂತ್ರದಲ್ಲಿ 8 ಗಂಟೆ ನೆನೆಸಿ ನಂತರ 7 ಗಂಟೆ ನೆರಳಿನಲ್ಲಿ ಒಣಗಿಸಿ ಬಿತ್ತಬೇಕು. ಬೀಜ ಮತ್ತು ರಾಸಾಯನಿಕ ಗೊಬ್ಬರಗಳನ್ನು ಏಕಕಾಲಕ್ಕೆ ಬಿತ್ತುವ ಕೂರಿಗೆಯಿಂದ 30 ಸೆಂ. ಮೀ ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡುವದು ಸೂಕ್ತವಾಗಿದೆ. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ಅಣಬೆ ಬೇಸಾಯ ಮಾಡುವುದು ಹೇಗೆ ಎಂದು ತಿಳಿಯಿರಿ ಲಕ್ಷಗಟ್ಟಲೆ ಹಣ ಸಂಪಾದಿಸಿಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ 🍄🍄🐑🐑
ಮರದ ಗಾಣದಲ್ಲಿ ತಯಾರಿಸಿದ ಎಣ್ಣೆಗಳು ಮತ್ತು ವಿಷಮುಕ್ತ ಆಹಾರ ಪದಾರ್ಥಗಳು ಸಿಗುತ್ತವೆ
ಹೂವನ್ನು ಬಿಡುವ ಹಂತದಲ್ಲಿ ವಿರಾಟ್ ಬಳಕೆ ಮಾಡಿದರೆ ಪ್ರಯೋಜನ ಏನು? ಬೀಜ ಸಂರಕ್ಷಣೆ ಮಾಡಲು ಈ ವಿರಾಟ್ ಔಷಧಿ ಬಳಕೆ ಹೇಗೆ?
ರೈತರು ರೇಷ್ಮೆ ಹುಳುಗಳನ್ನು ಖರೀದಿ ಮಾಡಲು ಇಲ್ಲಿದೆ ಅವಕಾಶ, 21ನೇ ಜ್ವರದ ಹುಳುಗಳು ಸಿಗುತ್ತವೆ