Breaking
Tue. Dec 17th, 2024

ಭೂಮಿ ಪೋಡಿ ಎಂದರೇನು? ಜಂಟಿ ಹೆಸರಿನಲ್ಲಿರುವ ಹೊಲವನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವುದು ಹೇಗೆ?

Spread the love

ಆತ್ಮೀಯ ರೈತರೇ,

ಎಲ್ಲ ಜನರು ತಮ್ಮ ತಮ್ಮ ಜಮೀನನ್ನು ಹೊಂದಿರುತ್ತಾರೆ,ಅದೇ ರೀತಿ ಜಮೀನು ನಮ್ಮದಾಗಬೇಕಾದರೆ ಅದರ ಬಗ್ಗೆ ಏನೆಲ್ಲಾ ಮಾಹಿತಿ ತಿಳಿಯಬೇಕು ಎಂದು ಮುಖ್ಯವಾಗಿರುತ್ತದೆ.ಅದೇ ರೀತಿ ಈಗ ಒಂದು ಸರ್ವೇ ನಂಬರ್ ಎರಡಕ್ಕಿಂತ ಹೆಚ್ಚು ಜನರ ಹೆಸರು ಇದ್ದರೆ ಅದಕ್ಕೆ ಬಹು ಮಾಲೀಕತ್ವ ಎಂದು ಕರೆಯುತ್ತಾರೆ. ಆದರೆ ಜಮೀನಿನ ಜಂಟಿ ಮಾಲೀಕರು, ಭೂಮಿಯನ್ನು ಭಾಗ ಮಾಡುವ ಮೂಲಕ ಏಕ ಮಾಲಿಕತ್ವದ ಉತಾರನ್ನು ಪಡೆಯುವುದನ್ನು ಪೋಡಿ ಎಂದು ಕರೆಯುತ್ತಾರೆ.

ಭೂಮಿ ಪೋಡಿ ಎಂದರೇನು?

ಪೋಡಿ ಅಂದರೆ ಜಮೀನಿನ ಭಾಗ ಮಾಡಿಸುವುದು ಎಂದರ್ಥ.ಜಂಟಿ ಮಾಲೀಕರ ನಡುವೆ ಹಳೆಯ ಮತ್ತು ಹೊಸ ಸರ್ವೆ ನಂಬರ್‌ನೊಂದಿಗೆ ಭೂಮಿಯನ್ನು ವಿಭಜಿಸುವ ದಾಖಲೆಯಾಗಿದೆ. ಸರ್ವೆ ನಂಬರ್‌ನಲ್ಲಿ ಉಪ-ವಿಭಜನೆ ಮಾಡಿರುವುದನ್ನು ಸೂಚಿಸುತ್ತದೆ .

ಪೋಡಿಯಲ್ಲಿ ನಾಲ್ಕು ವಿಧಗಳು.

 1. ತತ್ಕಾಲ್ ಪೋಡಿ

 2. ದರ್ಕಾಸ್ ಪೋಡಿ

 3. ಅಲಿನೇಷನ್ ಪೊಡಿ

 4. ಮುಟೆಶನ್ ಪೋಡಿ

ತತ್ಕಾಲ್ ಪೋಡಿ ಎಂದರೇನು ತಿಳಿದುಕೊಳ್ಳಿ.

ಭೂಮಾಲೀಕರಿಗೆ ಭೂಮಾರಾಟ, ಭೂ ಪರಿವರ್ತನೆ ಮತ್ತು  ಸಮಯದಲ್ಲಿ ಭೂಮಿಯ 11ಇ ಸ್ಕೆಚ್ ಅಗತ್ಯವಿರುವುದರಿಂದ, ಇತರ ದಾಖಲೆಗಳೊಂದಿಗೆ ಸ್ಕೆಚ್ ಅನ್ನು ಮಾಡುವುದಕ್ಕಾಗಿ ಸೇವೆಗಳನ್ನು ನೀಡಲಾಗುತ್ತದೆ ಮತ್ತು ಭೂಪ್ರದೇಶವನ್ನು ಲೆಕ್ಕಹಾಕಿದ ನಂತರ ಎಲ್ಲಾ ದೋಷಗಳನ್ನು ಸರಿಪಡಿಸಿದ ಮೇಲೆ RTC ಅನ್ನು ಪಡೆದುಕೊಳ್ಳಲು ಸೇವೆಗಳನ್ನು ನೀಡಲಾಗುತ್ತದೆ. ಕೃಷಿ ಭೂಮಿಯನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಮೊದಲು ಜಮೀನು ಪೋಡಿಯನ್ನು ಪಡೆಯುವುದು ಕಡ್ಡಾಯವಾಗಿದೆ.ಪೋಡಿ ಇಲ್ಲದೆ ಜಮೀನು  ನೋಂದಣಿ  ಕಚೇರಿಯಲ್ಲಿ ನೋಂದಣಿಯಾಗುವುದಿಲ್ಲ.

ತತ್ಕಾಲ್ ಪೋಡಿ ಸಹಾಯ ವಾಣಿಗೆ ಕರೆ ಮಾಡಿ ಇಲ್ಲಿದೆ ಕರೆ ಸಂಖ್ಯೆ.

ತತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಲು  8152999000 ಸಂಖ್ಯೆಗೆ ಕರೆ ಮಾಡಿ.

ಪೋಡಿ ನಂತರ RTC ಯಲ್ಲಿ P ಸ್ಟ್ಯಾಂಡ್ಸ್ ಬಗ್ಗೆ ತಿಳಿಯೋಣ

 ಹೆಚ್ಚಾಗಿ ಅನುದಾನದ ಜಮೀನುಗಳಿಗೆ, ಅವು ಪಿ ಸಂಖ್ಯೆಯೊಂದಿಗೆ ಬರುತ್ತವೆ. ಪ್ರಕ್ರಿಯೆಯು ಸಾಕಷ್ಟು ದೀರ್ಘವಾಗಿದೆ, ಕಡತವು ಗ್ರಾಮ ಕಾರ್ಯದರ್ಶಿಯಿಂದ ತಹಶೀಲ್ದಾರ್‌ನಿಂದ ಸಹಾಯಕ ಆಯುಕ್ತರಿಂದ ಉಪ ಆಯುಕ್ತರಿಂದ ಹೋಗುತ್ತದೆ.  ಕೆಲವೊಮ್ಮೆ ಇದು 6 ತಿಂಗಳಿಂದ 5 ವರ್ಷಗಳವರೆಗೆ ತೆಗೆದುಕೊಳ್ಳುತ್ತದೆ.

11E ಸ್ಟ್ರೆಚ್ ಬಗ್ಗೆ ಎಂದರೇನು?

 11 ಇ ಸ್ಕೆಚ್ ಎನ್ನುವುದು ಮಾರಾಟಕ್ಕೆ ಹೊಂದಿಸಲಾದ ಆಸ್ತಿಯ ಭಾಗದ ರೇಖಾಚಿತ್ರ.  ಈ ಸ್ಕೆಚ್ ಅನ್ನು ಸಾಮಾನ್ಯವಾಗಿ ಭೂಮಾಪಕರು ಸ್ಥಳಕ್ಕೆ ಭೇಟಿ ನೀಡಿದ ಮೇಲೆ ಕೈಯಾರೆ ತಯಾರಿಸುತ್ತಾರೆ. ಸ್ಕೆಚ್ ಮಾಡಿದ ನಂತರ, ವಹಿವಾಟಿನ ಸಮಯದಲ್ಲಿ ಮಾರಾಟ ಪತ್ರದಲ್ಲಿ ಪ್ರಮಾಣೀಕರಿಸಬೇಕಾದ ಪ್ರಮಾಣಪತ್ರದೊಂದಿಗೆ ಹೊಸ ಸರ್ವೆ ಸಂಖ್ಯೆಯನ್ನು ನೀಡಲಾಗುತ್ತದೆ.ಖಾಸಗಿ ಭೂಮಾಲೀಕರು ರಚಿಸಿರುವ ಸ್ಕೆಚ್ ಕಾನೂನು ಮಾನ್ಯತೆಯನ್ನು ಹೊಂದಿರುತ್ತದೆ ಮತ್ತು ಈ ಸರ್ವೆ ಇಲಾಖೆಯಿಂದ ಅನುಮೋದನೆ ಪಡೆದ ನಂತರ, ಮಾಲೀಕರು ಉಪ-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಲು 11 ಇ ಸ್ಕೆಚ್ ಅನ್ನು ಬಳಸಬೇಕು ಭೂಬಳಕೆಯ ಪರಿವರ್ತನೆ, ವೈಯಕ್ತಿಕ RTC ಪಡೆಯಲು ಪೋಡಿ ಸ್ಕೆಚ್.

ಅಗತ್ಯ ದಾಖಲೆಗಳು

1. ಬರವಣಿಗೆಯಲ್ಲಿ ಅರ್ಜಿ.

2. ಅಫಿಡವಿಟ್ / ನೋಟರಿ ಅರ್ಜಿದಾರರು ಭೂಮಿಯ ಮಾಲೀಕರಾಗಿದ್ದಾರೆ ಎಂದು ತಿಳಿಸುವುದು.

3. ಗುರುತಿನ ಪುರಾವೆ.

4. ವಿಳಾಸ ಪುರಾವೆ.

5. ಭೂ ದಾಖಲೆಗಳು (ಗೆಜೆಟ್ ಅಧಿಕಾರಿಯಿಂದ ಎಲ್ಲಾ ಪ್ರತಿಗಳಲ್ಲಿ ದೃಢೀಕರಣವನ್ನು ಪಡೆಯಬೇಕು.)

6. ಸೂಚಿಸಿದಂತೆ ಪ್ರಸ್ತಾವಿತ ವಿಭಾಗಕ್ಕೆ ಸ್ಕೆಚ್ ನಕ್ಷೆ.

7. ರೂಪಾಂತರ ಪತ್ರ.

ಭೂಮಿಯಿಂದ RTC ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ ಎಂದು ತಿಳಿದುಕೊಳ್ಳಿ.

https://landrecords.karnataka.gov.in/service53/

1. ಅಧಿಕೃತ ಭೂಮಿ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ.

2. ‘View RTC ಮತ್ತು MR’ ಮೇಲೆ ಕ್ಲಿಕ್ ಮಾಡಿ

3. ಇದು ನಿಮ್ಮನ್ನು ಹೊಸ ಪುಟಕ್ಕೆ ಕೊಂಡೊಯ್ಯುತ್ತದೆ ಅದು ಮಾಹಿತಿಯನ್ನು ಭರ್ತಿ ಮಾಡಲು ನಿಮ್ಮನ್ನು ವಿನಂತಿಸುತ್ತದೆ.

4. ಇಲ್ಲಿ, ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಮಾಹಿತಿಯನ್ನು ಭರ್ತಿ ಮಾಡಿ.

5. ಈಗ, ‘ವಿವರಗಳನ್ನು ಪಡೆದುಕೊಳ್ಳಿ’ ಮೇಲೆ ಕ್ಲಿಕ್ ಮಾಡಿ

ಈ ತರಹದ ವಿಧಗಳಿದ್ದು ಇವುಗಳ ಬಗ್ಗೆ ತಿಳಿಯಬೇಕು. ಅದೇ ರೀತಿ ಬಹು ಮಾಲೀಕತ್ವದ ಪಹಣಿಯಿಂದಾಗಿ ಒಂದೇ ಪಹಣಿಯಲ್ಲಿ ಎಲ್ಲ ಮಾಲೀಕರ ಹೆಸರು ಇದ್ದರೂ ಎಲ್ಲ ಮಾಲೀಕರಿಗೂ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಅದರಂತೆ ಎಲ್ಲರ ಹೆಸರಿದ್ದರೂ ಸಹ ಎಲ್ಲ ಯೋಜನೆಗಳ ಸಹಾಯಧನ ಸಿಗಲು ಕಷ್ಟದ ಕೆಲಸ. ಇದರಿಂದಾಗಿ ರೈತರಿಗೆ ತುಂಬಾನೇ ಸಮಸ್ಯೆ ಆಗುತ್ತದೆ ಸರಕಾರದ ಸೌಲಭ್ಯಗಳು ಕೂಡ ಸಿಗಲ್ಲ . ಅದಕ್ಕೋಸ್ಕರ ಜಮೀನನ್ನು ಕಾಯ್ದೆ ಪ್ರಕಾರ ವಿಭಜನೆಯನ್ನು ಮಾಡಿ ಪ್ರತ್ಯೇಕ ಹಿಸ್ಸಾ ಸಂಖ್ಯೆ ಹಾಗೂ ತಾತ್ಕಾಲಿಕ ಪೋಡಿ ನಂಬರ್ ಸಿಗುತ್ತದೆ. ಇದರ ಜೊತೆ ಪೋಡಿ ಮಾಡಲಾಗಿರುವ ಭೂಮಿಗೆ ಆದಾಯ ದಾಖಲೆಗಳನ್ನು ತಯಾರು ಮಾಡಿ ಏಕ ಮಾಲೀಕತ್ವದ ಪಹಣಿಯನ್ನು ಮಾಡುತ್ತದೆ . ಒಂದೇ ಸರ್ವೇ ನಂಬರ್ ನಲ್ಲಿ 5 ಹಿಸ್ಸಾಗಳಿವೆ ಆದರೆ ಪ್ರತ್ಯೇಕ ಪಹಣಿ ಇರುವುದಿಲ್ಲ.ಅದೇ ರೀತಿ ನಿಮ್ಮ ಹತ್ತಿರ ಒಂದೇ ಪಹನಿಯಲ್ಲಿ ಎಲ್ಲರ ಹೆಸರು ಕೂಡ ಇರುವುದು ಸರ್ವೆ ನಂಬರ್ ನಲ್ಲಿರುವ ಹೆಸರು ಪ್ರತ್ಯೇಕವಾಗಿ ಬರಬೇಕೆಂದರೆ ತತ್ಕಾಲ್ ಪೋಡಿಯನ್ನು ಮಾಡಿಸಲೇ ಬೇಕು. ನಿಮ್ಮ ಜಮೀನಿನ ಸುತ್ತ ಇರುವ ಗಡಿಯನ್ನು ನಿರ್ಧರಿಸಿ ಪ್ರತ್ಯೇಕ ಪಹಣಿಗಳನ್ನು ಮಾಡಲಾಗುತ್ತದೆ.

ಉದಾಹರಣೆಯನ್ನು ನೋಡಿ:

1)ನೀವು ಭೂಮಿಯನ್ನು ಹೊಂದಿದ್ದರೆ ಇಬ್ಬರಿಗೆ ಆ ಭೂಮಿಯನ್ನು ವಿಭಜಿಸಲು ಬಯಸುತ್ತೀರಿ,

ಮಾಡಬೇಕಾಗಿರುವುದು ಭೂಮಿಯನ್ನು ಎರಡು ಭಾಗಗಳಾಗಿ ವಿಂಗಡಿಸುವುದು. ಒಮ್ಮೆ ವಿಂಗಡಿಸಿದ ನಂತರ, ಅದಕ್ಕೆ ತಾತ್ಕಾಲಿಕ ಪೋಡಿ ಸಂಖ್ಯೆಯನ್ನು ನೀಡುವುದು ಮತ್ತು ನಂತರ ಹಿಸ್ಸಾಸ್ ನೀಡಲಾಗುತ್ತದೆ. ಮೊದಲು ಸಮೀಕ್ಷೆ ಸಂಖ್ಯೆ 1 ಅನ್ನು ಎರಡು ಸಮಾನ ಭಾಗಗಳಾಗಿ ವಿಂಗಡಿಸಿ, ಆಯಾಮಗಳನ್ನು ಒಳಗೊಂಡ ಪೋಡಿಗೆ ಒಳಗಾಗುತ್ತದೆ. ಸಮೀಕ್ಷೆ 1/P1 ಮತ್ತು P2 ಎಂದು ಕರೆಯುತ್ತಾರೆ. ಆಮೇಲೆ ಸಂಬಂಧಪಟ್ಟ ಸಮೀಕ್ಷೆ ಮತ್ತು ಆದಾಯದಿಂದ ಪರಿಶೀಲಿಸಲಾಗುತ್ತಿದೆ. ಇಲಾಖೆಯನ್ನು 1/1 ಮತ್ತು ½ ಕ್ಕೆ ಶಾಶ್ವತವಾಗಿ ಬದಲಾಯಿಸುತ್ತಾರೆ.

2)ಒಂದು ಸರ್ವೇ ನಂಬರ್ 270 ರಲ್ಲಿ ಇಬ್ಬರು ಜನ ಮಾಲಿಕರು ಇರುತ್ತಾರೆ ಎರಡು ಮಾಲೀಕರ ಹೆಸರು ಒಂದೇ ಪಹಣಿ ಪತ್ರಿಕೆಯಲ್ಲಿ ಬರುತ್ತಿರುತ್ತದೆ ಏಕೆಂದರೆ ಒಂದೇ ಸರ್ವೇ ನಂಬರ್ ಆಗಿರುತ್ತದೆ . ಇದನ್ನು ಬೇರೆ ಮಾಡಿಕೊಳ್ಳಬೇಕೆಂದರೆ ಪೋಡಿ ಮಾಡಿಸಿಕೊಳ್ಳಲೇಬೇಕು. ನೀವು ಅದನ್ನು ಸರ್ವೇ ನಂಬರ್ 270 ಹಿಸ್ಸಾ ಮತ್ತು ಸರ್ವೆ ನಂಬರ್ 270 ಹಿಸ್ಸಾ 2, ಹೀಗೆ ಪ್ರತ್ಯೇಕವಾಗಿ ಪಹಣಿಯನ್ನು ಪಡೆದುಕೊಳ್ಳಬಹುದು. ಸರ್ವೆ ನಂಬರ್ ಒಂದೇ ಆಗಿರುತ್ತದೆ ಆದರೆ ಬೇರೆ ಬೇರೆ ಹಿಸ್ಸಾ ನಂಬರ್ ಗಳನ್ನು ಕೊಡಲಾಗುತ್ತದೆ ಇದರಿಂದಾಗಿ ಪ್ರತಿ ಹಿಸ್ಸಾ ನಂಬರ್ ಬೇರೆ ಬೇರೆ ಪಹಣಿಯನ್ನು ತತ್ಕಾಲ್ ಪೋಡಿಯ ಮೂಲಕ ಮಾಡಿಕೊಳ್ಳಬಹುದು. ಏಕ ಮಾಲೀಕತ್ವದ ಪಹಣಿಯನ್ನು ಪಡೆಯಬಹುದು. ಬಹು ಮಾಲೀಕತ್ವದಿಂದ ಏಕಮಾಲಿತ್ವಕ್ಕೆ ಪರಿವರ್ತನೆ ಮಾಡುವುದನ್ನು ಪೋಡಿ ಅನ್ನುತ್ತಾರೆ. ನೀವು ನಿಮ್ಮ ಜಮೀನನ್ನು ಹತ್ತು ವರ್ಷದಿಂದ ಅನುಭವಿಸುತ್ತಿದ್ದರೆ ಮಾತ್ರ ಪೋಡಿಗಾಗಿ ಅರ್ಜಿಯನ್ನು ಸಲ್ಲಿಸಬೇಕು.

ನಮ್ಮಲ್ಲಿ ರೈತರಿಗೆ ಸ್ವಲ್ಪ ತಾಂತ್ರಿಕತೆ ಕೊರತೆ ಇದೆ, ಮುಖ್ಯವಾದುದು ಭೂ ಸರ್ವೆ ಬಗ್ಗೆ, ಈಗಾಗಲೇ ರೈತರಿಗೆ ಕಷ್ಟ ಆಗಬಾರದು ಎಂಬ ದೃಷ್ಟಿಯಿಂದ ಕಂದಾಯ‌ ಇಲಾಖೆ ಇಲ್ಲೊಂದು ಹೊಸ ತಾಂತ್ರಿಕತೆ ಜಾರಿಗೆ ತಂದಿದೆ, ಇನ್ನೂ ಮುಂದೆ ದೇಶದ ಯಾವುದೇ ರೈತರು ತಮ್ಮ ಆಸ್ತಿಯ ಸರ್ವೆ ತಿಳಿದುಕೊಳ್ಳಲು ಓಡಾಡುವ ಅಗತ್ಯವಿಲ್ಲ ಮತ್ತು ರೈತರು ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ಪಡೆಯುವುದಕ್ಕಾಗಿ ನೆರವಿಗೆ ಬಂದ ‘ಸ್ವಾವಲಂಬಿ’ ವೆಬ್‌ಸೈಟ್. ರೈತರು ಕಛೇರಿಗೆ ಅಲೆಯುವ ತಾಪತ್ರಯ ಕಡಿಮೆ ಮಾಡಿದಂತಾಗುತ್ತದೆ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಈ ತಂತ್ರಾಂಶವನ್ನು ತರಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಹಿಸ್ಸಾ ನಕಾಶೆ, ಪೋಡಿ ಇನ್ನು ಬಲುಸುಲಭ ರೀತಿಯಲ್ಲಿ ರೈತರ ಕೈಗೆ ಕುಳಿತಲ್ಲೇ ಮಾಹಿತಿ ದೊರೆಯುವುದು. ಜಮೀನಿನ 11 ಇ (ಹಿಸ್ಸಾ ನಕಾಶೆ), ತತ್ಕಾಲ್ ಪೋಡಿ, ಭೂ ಪರಿವರ್ತನಾ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದು ನಕ್ಷೆಗಾಗಿ ಚಪ್ಪಲಿ ಸವೆಸುವ ಅವಶ್ಯಕತೆ ಇಲ್ಲ. ರೈತರಿಗೆ ಕುಳಿತಲ್ಲೇ ಎಲ್ಲ ಮಾಹಿತಿ ತಲುಪಿಸಲು ಸರ್ಕಾರವು ತಾಂತ್ರಿಕತೆಯನ್ನು ಬಳಸಿಕೊಂಡಿದೆ. ಭೂಮಾಪನ ಕಂದಾಯ ವ್ಯವಸ್ಥೆ ಇಲಾಖೆಯಿಂದ ಭೂದಾಖಲೆಗಳ ಮತ್ತು ಸಾರ್ವಜನಿಕರಿಗೆ ವಿಳಂಬವಿಲ್ಲದೆ ಸೇವೆ ಕಲ್ಪಿಸುವುದಕ್ಕೆ ‘ಸ್ವಾವಲಂಬಿ’ ವೆಬ್‌ಸೈಟ್ ತುಂಬಾ ಉಪಯೋಗಕಾರಿಯಾಗಿದೆ.

ಮುಖ್ಯವಾಗಿ ಹೇಳಬೇಕೆಂದರೆ ಈ ವೆಬ್‌ಸೈಟ್ ಮುಖಾಂತರ ಭೂಮಿಯ ಮಾಲೀಕರು ಜಮೀನಿನ 11 ಇ (ಹಿಸ್ಸಾ ನಕಾಶೆ), ತತ್ಕಾಲ್ ಪೋಡಿ, ಭೂ ಪರಿವರ್ತನಾ ಇತ್ಯಾದಿ ಪಡೆಯಲು ಅರ್ಜಿ ಸಲ್ಲಿಸಬೇಕು. ರೈತರು ಮಾಹಿತಿಗೆ ಅರ್ಜಿ ಸಲ್ಲಿಸಿದ ಏಳೇ ದಿನದಲ್ಲಿ ದಾಖಲೆಗಳು ರೈತರ ಕೈ ಸೇರುತ್ತವೆ. ವೆಬ್‌ಸೈಟ್ ಆರಂಭವಾದಾಗಿನಿಂದ ಸಲ್ಲಿಕೆಯಾಗಿದ್ದು, ಶೇ 70 ಕ್ಕಿಂತ ಹೆಚ್ಚು ವಿಲೇವಾರಿಯಾಗಿವೆ. ಈ ವ್ಯವಸ್ಥೆ ಬರುವ ಮುಂಚೆ ರೈತರು ನಾಡ ಕಚೇರಿಗೆ ಹೋಗಿ ಜಮೀನಿನ 11 ಇ, ಪೋಡಿ ಸೇರಿ ಇತ್ಯಾದಿ ಕಾರ್ಯಗಳಿಗೆ ಅರ್ಜಿ ಸಲ್ಲಿಸುತ್ತಿದ್ದರು, ಅರ್ಜಿಯು ನಾಡಕಚೇರಿಯಲ್ಲ ಪರಿಶೀಲನೆಗೊಳಪಟ್ಟು ಸರತಿಯಲ್ಲಿ ಬೀಳುತ್ತಿತ್ತು. ಅದು ಸರತಿಯಿಂದ ಭೂಮಾಪಕರ ಬಳಿ ಹೋಗುತ್ತಿತ್ತು. ಭೂಮಾಪಕರು ಜಮೀನನ್ನು ಪರಿಶೀಲಿಸಿ, ನಕ್ಷೆ ಗುರುತಿಸಿ ಅಪ್‌ಲೋಡ್ ಮಾಡಬೇಕಾಗಿತ್ತು. ಹಲವು ಕಾರಣಗಳಿಂದ ರೈತರಿಗೆ ನಕ್ಷೆ ಮಾಹಿತಿ ದೊರೆಯುವುದು ಕಷ್ಟದ ಕೆಲಸ ಆಗಿತ್ತು.

ಅಪ್ ಲೋಡ್ ಆದ ದಾಖಲೆಯನ್ನು ತಪಾಸಕರ ಮೂಲಕ ಪರಿಶೀಲಿಸಿದ ಬಳಿಕ ಅಂತಿಮ ಅನುಮೋದನೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಕಳಿಸುತ್ತಿದ್ದರು. ಈ ಪ್ರಕ್ರಿಯೆಗೆ ಕನಿಷ್ಠ ಒಂದೂವರೆ ತಿಂಗಳಿಂದ ಎರಡು ತಿಂಗಳು ಸಮಯ ಬೇಕಾಗಿತ್ತು. ಆದರೆ , ‘ಸ್ವಾವಲಂಬಿ’ ವೆಬ್‌ಸೈಟ್ ಮೂಲಕ ಸಲ್ಲಿಕೆಯಾಗುವ ಅರ್ಜಿಗಳನ್ನು 7 ದಿನದಲಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಮೋಜಣಿ – ಕಾವೇರಿಗೆ ಲಿಂಕ್ ‘ಸ್ವಾವಲಂಬಿ’ ವೆಬ್‌ಸೈಟ್ ಅನ್ನು ಭೂಮಾಪನ ಇಲಾಖೆಯ ಮೋಜಣಿ ಹಾಗೂ ಉಪನೋಂದಣಿ ಇಲಾಖೆಯ ಕಾವೇರಿ ತಂತ್ರಾಂಶಕ್ಕೆ ಲಿಂಕ್ ಮಾಡಿದೆ. ಕುಳಿತಲ್ಲೇ ಅರ್ಜಿ ಸಲ್ಲಿಸಿ ಪಡೆಯಲು ಸುಲಭ ವಿಧಾನವಾಗಿದೆ.

 ರೈತರು ಅಲೆದಾಡುವ ಸ್ಥಿತಿ ಹೊಡೆದೊಡಿಸಲು ಹಿಸ್ಸಾ ನಕಾಶೆ, ಆರ್‌ಟಿಸಿ (ಪಹಣಿ) ಹಾಗೂ ನೋಂದಾಯಿತ ಮೊಬೈಲ್ ನಂಬರ್ ಇರುವ ಆಧಾರ್ ಕಾರ್ಡ್ ಲಿಂಕ್ ಇದ್ದರೆ ಮಾತ್ರ ಈ ವೆಬ್‌ಸೈಟ್‌ನಲ್ಲಿ ಅರ್ಜಿಗಳು ಸ್ವೀಕೃತವ ಆಗುತ್ತವೆ. ಮುಖ್ಯವಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು . ಕಡ್ಡಾಯವಾಗಿ ಜಮೀನಿನ ಆರ್‌ಟಿಸಿ ನಂಬರ್ ಇದ್ದರೆ ಮಾತ್ರ ಅರ್ಜಿ ಸ್ವೀಕಾರಕೊಳ್ಳುತ್ತದೆ. ಅರ್ಜಿಯನ್ನು rdservices.karnataka.gov.in ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://landrecords.karnataka.gov.in/service53/

ಪೋಡಿ ಶುಲ್ಕ ಎಷ್ಟು ತಿಳಿದುಕೊಳ್ಳಿ

ತತ್ಕಾಲ್‌ ಪೋಡಿ ಭೂಮಾಪನ ಶುಲ್ಕವನ್ನು 2014 ರಲ್ಲಿ ಪರಿಷ್ಕರಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ 2 ಎಕರೆಗೆ ₹ 1,200 ಮತ್ತು ಆಮೇಲೆ ಪ್ರತಿ ಎಕರೆಗೆ ತಲಾ ₹ 100 ರಂತೆ ಗರಿಷ್ಠ ₹ 2,500 ನಿಗದಿಪಡಿಸಿದೆ.

ಪೋಡಿಯ ಅನುಕೂಲಗಳು ಯಾವುವು

 ಭೂಮಿಯ ಪೋಡಿಯು ಭೂಮಿಯ ಮೇಲಿನ ಮಾಲೀಕರ ಹಕ್ಕನ್ನು ಖಾತರಿಪಡಿಸುವ ಉದ್ದೇಶವನ್ನು ಹೊಂದಿದೆ. ಮಾಲೀಕರ ಸ್ವಾಧೀನದಲ್ಲಿರುವ ಪ್ರದೇಶದ ನೈಜ ವಿಸ್ತರಣೆಯನ್ನು ಸ್ಥಾಪಿಸಬೇಕು, ಗುರುತಿಸಲಾದ ಮಿತಿಗಳ ರಕ್ಷಣೆ ಹಾಗೂ ಆಕ್ರಮಣಕಾರರನ್ನು ದೂರವಿಡುತ್ತದೆ.

ಪೋಡಿಯ ಅನಾನುಕೂಲಗಳು ಯಾವುವು

 ಪಕ್ಕದ ಮಾಲೀಕರಿಂದ ಖಾಸಗಿ ಭೂಮಿಯನ್ನು ಅತಿಕ್ರಮಿಸಲು ಕಾರಣವಾಗಿ ಬಿಡುತ್ತದೆ ಅಥವಾ ನಾವು ಈಗ ಸಾಕ್ಷಿಯಾಗಿರುವಂತೆ ಹೊಳೆ, ಖರಾಬ್ ಅಥವಾ ರಾಜಕಾಲುವೆಗಳಂತಹ ಸರ್ಕಾರಿ ಜಮೀನುಗಳ ಅತಿಕ್ರಮಣಕ್ಕೆ ಕಾರಣ ಆಗುತ್ತದೆ.

Related Post

Leave a Reply

Your email address will not be published. Required fields are marked *