ಆತ್ಮೀಯ ನಾಗರಿಕರೇ, ಈ ದಿನ ಮಾನಗಳಲ್ಲಿ ಎಲ್ಲರ ಹತ್ತಿರ ಮೊಬೈಲ್ ಫೋನ್ ಇದ್ದೆ ಇರುತ್ತದೆ. ಮತ್ತು ಮೊಬೈಲ್ ಕಳೆಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ನಿಮಗೂ ಹೀಗೆ ಹಲವಾರು ವಿಷಯಗಳು ಬಂದಿರುತ್ತವೆ. ಒಮ್ಮೆ ಮೊಬೈಲ್ ಕಳೆದುಹೋದರೆ ಅದು ಎಂದಿಗೂ ಸಿಗದ ಪರಿಸ್ಥಿತಿ ಬಂದು ಒದಗಿದೆ. ನಿಮ್ಮ ಮೊಬೈಲ್ ಕಳೆದ ತಕ್ಷಣ, ಅದು ಸ್ವಿಚ್ ಆಫ್ ಆದರೆ ಅಥವಾ ಯಾರಾದರೂ ಅದನ್ನು ತೆಗೆದುಕೊಂಡರೆ ಕೂಡಲೇ ಸ್ವಿಚ್ ಆಫ್ ಮಾಡಿ ಬಿಡುತ್ತಾರೆ. ಆಗ ನೀವು ಆ ಮೊಬೈಲ್ ಅನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಈ ಸ್ವಿಚ್ ಆಫ್ ಆದ ಮೊಬೈಲನ್ನು ಟ್ರ್ಯಾಕ್ ಮಾಡಲು ಇಂದಿಗೂ ಸಾಧ್ಯವಿಲ್ಲ.
ಹೀಗೆ ನಿಮ್ಮ ಕಳೆದು ಹೋದ ಮೊಬೈಲ್ ಅನ್ನು ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟರೆ, ಅವರು ಹುಡುಕುತ್ತೇವೆ ಎಂಬ ಆಶ್ವಾಸನೆ ನೀಡುತ್ತಾರೆ. ಅಲ್ಲಿಯವರೆಗೆ ಕಾಯುತ್ತಾ ಕುಳಿತುಕೊಳ್ಳುವುದು ಅವಶ್ಯವಿಲ್ಲ. ಈ ಸಮಸ್ಯೆಗಳಿಗೆ ಕೊನೆಗೂ ಒಂದು ಅದ್ಭುತವಾದ ಸಲಹೆ ಸಿಕ್ಕಿತು. ಮೊಬೈಲ್ ಕಳೆದ ತಕ್ಷಣ ಇನ್ನೊಂದು ಮೊಬೈಲ್ ನಿಂದ ನೀವು ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ಅನ್ನು ಕಳ್ಳತನ ಮಾಡಿದ ವ್ಯಕ್ತಿಯನ್ನು ಹುಡುಕಲು ತುಂಬಾ ಸುಲಭವಾಗುತ್ತದೆ. ಹಾಗಾದರೆ ಈ ಆ್ಯಪ್ ಹೆಸರು ಮತ್ತು ಅದನ್ನು ಹೇಗೆ ಬಳಕೆ ಮಾಡಬೇಕೆಂಬುದು ತಿಳಿಯುವುದು ತುಂಬಾ ಅವಶ್ಯಕವಾಗಿದೆ.
ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಬಳಕೆ ಮಾಡುವುದು ಹೇಗೆ?
ಜನರು ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://play.google.com/store/apps/details?id=com.hammersecurity
ಕ್ಲಿಕ್ ಮಾಡಿದ ಮೇಲೆ ಅದು ನಿಮ್ಮನ್ನು ಪ್ಲೇ ಸ್ಟೋರ್ ಆಪ್ ಗೆ ಕರೆದುಕೊಂಡು ಹೋಗುತ್ತದೆ. ನಂತರ ನೀವು ಅಲ್ಲಿ ಇನ್ಸ್ಟಾಲ್ ( install) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಒಮ್ಮೆ ಅದು ಇನ್ಸ್ಟಾಲ್ ಆದ ಮೇಲೆ ಅಲ್ಲಿ ಎಲ್ಲಾ ಪರ್ಮಿಷನ್ ಅನ್ನು ಕೇಳುತ್ತದೆ. ಅದಕ್ಕೆ ಜನರು ಎಲ್ಲಾ ಪರ್ಮಿಷನ್ ಗೆ ಓಕೆ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು. ನಂತರ ಯಾವುದಾದರೂ ನಿಮ್ಮ ಗೆಳೆಯನ ಮೊಬೈಲ್ ಸಂಖ್ಯೆ ಮತ್ತು ಜಿಮೇಲ್ ಐಡಿಯನ್ನು ನೀವು ಈ ಆ್ಯಪ್ ನಲ್ಲಿ ನಮೂದಿಸಬೇಕು.
ನಿಮ್ಮ ಮೊಬೈಲ್ ಅನ್ನು ಯಾರಾದರೂ ಕದ್ದಿದ್ದರೆ ಅಥವಾ ಒಬ್ಬ ವ್ಯಕ್ತಿಗೆ ನಿಮ್ಮ ಮೊಬೈಲ್ ಸಿಕ್ಕಿದ್ದರೆ ಅವನು ಮೊದಲು ಆ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡುತ್ತಾನೆ. ಅಷ್ಟರ ಒಳಗೆ ಈ ಆಪ್ ಅವನ ಫೋಟೋ ಮತ್ತು ಧ್ವನಿ ಮತ್ತು ಜಿಪಿಎಸ್ ಟ್ರ್ಯಾಕ್ ಅನ್ನು ಮಾಡಿಬಿಡುತ್ತದೆ. ಈ ರೀತಿಯಾಗಿ ಫೋಟೋ ಮತ್ತು ಅವನ ಜಿಪಿಎಸ್ ಲೊಕೇಶನ್ ಅಂದರೆ ಇರುವ ಸ್ಥಳವನ್ನು ನಿಮ್ಮ ಗೆಳೆಯನ ಇಮೇಲ್ ಐಡಿಗೆ ಬಂದು ಸೇರುತ್ತದೆ. ಈ ರೀತಿಯಾಗಿ ನೀವು ಸುಲಭವಾಗಿ ನಿಮ್ಮ ಮೊಬೈಲನ್ನು ಟ್ರ್ಯಾಕ್ ಮಾಡಿ ಪತ್ತೆ ಹಚ್ಚಬಹುದು. ಜನರು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://play.google.com/store/apps/details?id=com.google.android.apps.adm ಫೈಂಡ್ ಮೈ ಡಿವೈಸ್( find my device) ಎಂಬ ಆ್ಯಪ್ ಓಪನ್ ಆಗುತ್ತದೆ. ಈ ಆ್ಯಪ್ ಅನ್ನು ಕೂಡ ಬಳಸಿ ನಿಮ್ಮ ಮೊಬೈಲನ್ನು ಪತ್ತೆ ಹಚ್ಚಬಹುದು.
ಇದನ್ನೂ ಓದಿ :- ಯುವ ರೈತರಿಗೆ ಈ ಸಂಸ್ಥೆಯಿಂದ 5 ಲಕ್ಷ ರೂಪಾಯಿಗಳು ಸಾಲವನ್ನು ನೀಡುತ್ತಾರೆ
ಇಂದೇ ಕೃಷಿಯಲ್ಲಿ ಹೊಸ ಉದ್ಯೋಗವನ್ನು ಪ್ರಾರಂಭಿಸಿ ಈ ಸಾಲ ಸೌಲಭ್ಯ ಪಡೆಯಿರಿ
ಇದನ್ನೂ ಓದಿ :- ನೇರಳೆ ಹಣ್ಣಿನ ಕೃಷಿ ಮಾಡಿ ಲಕ್ಷಗಟ್ಟಲೆ ಸಂಪಾದನೆ ಮಾಡಿ