ಕೃಷಿ ಮತ್ತು ತೋಟಗಾರಿಕಾ ಮೇಳ – 2024 ಅಕ್ಟೋಬರ್ 18, 19 20, 21 ರಂದು ಕೃಷಿ ಮಹಾವಿದ್ಯಾಲಯ ಆವರಣ, ನವುಲೆ, ಶಿವಮೊಗ್ಗ. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ. ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಪ್ರಮುಖ ಕೃಷಿ ಮತ್ತು ತೋಟಗಾರಿಕಾ ಸಸಿಗಳು ಮತ್ತು ತಳಿಗಳ ಪ್ರದರ್ಶನ ಮತ್ತು ಮಾರಾಟ. ಸರ್ವರಿಗೂ ಆದರದ ಸುಸ್ವಾಗತ ವಿಸ್ತರಣಾ ನಿರ್ದೇಶನಾಲಯ. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮುಖ್ಯ ಆವರಣ, ಇರುವಕ್ಕಿ, ಆನಂದಪುರ, ಸಾಗರ ತಾ॥, ಶಿವಮೊಗ್ಗ ಜಿಲ್ಲೆ – 577412
ಮಳಿಗೆಗಳನ್ನು ಕಾಯ್ದಿರಿಸಲು ಸಂಪರ್ಕಿಸಿ
ಡಾ. ಬಿ. ಸಿ. ಹನುಮಂತಸ್ವಾಮಿ, ಸಹ ವಿಸ್ತರಣಾ ನಿರ್ದೇಶಕರು. ಕೆ.ಶಿ.ನಾ.ಕೃ.ತೋ.ವಿ.ವಿ, ಶಿವಮೊಗ್ಗ, ಮೊಬೈಲ್ – 94482 55252 ಡಾ. ನಾಗರಾಜ್ ಆರ್. ಹಿರಿಯ ತಾಂತ್ರಿಕ ಅಧಿಕಾರಿ, ಕೆ.ವಿ.ಕೆ. ಶಿವಮೊಗ್ಗ, ಮೊಬೈಲ್ – 93534 93824. ಶ್ರೀ ಧರ್ಮರಾಜ್ ಬಿ.ಎಂ.. ತಾಂತ್ರಿಕ ಅಧಿಕಾರಿ, ವಿಸ್ತರಣಾ ನಿರ್ದೇಶನಾಲಯ, ಕೆ.ಶಿ.ನಾ.ಕೃ.ತೋ.ವಿ.ವಿ. ಶಿವಮೊಗ್ಗ. ಮೊಬೈಲ್ – 84948 74428.ವಿಶೇಷತೆಗಳುwebsite: https://uahs.edu.inತಂತ್ರಜ್ಞಾನ ಉದ್ಯಾನವನ, ಸಮಗ್ರ ಕೃಷಿ ಪದ್ದತಿ, ಸಂರಕ್ಷಿತ ಕೃಷಿ, ಹೈ-ಟೆಕ್ ತೋಟಗಾರಿಕೆ, ಪುಷ್ಪ ಕೃಷಿ, ತಾರಸಿ ತೋಟ ಮತ್ತು ಲಂಬ ತೋಟ, ಜೇನು ಸಾಕಾಣಿಕೆ ಮತ್ತು ಕೀಟ ಪ್ರಪಂಚ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮೌಲ್ಯವರ್ಧನೆ ಮತ್ತು ತಾಂತ್ರಿಕತೆಗಳು, ಗೋಡಂಬಿ ಬೆಳೆ ಪ್ರಾತ್ಯಕ್ಷಿಕೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಸಾವಯವ ಕೃಷಿ, ಅಣಬೆ ಬೇಸಾಯ, ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು, ಕೊಲ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ, ಮೌಲ್ಯವರ್ಧಿತ ಕೃಷಿಉತ್ಪನ್ನಗಳು ಹವಾಮಾನ ಆಧಾರಿತ ಕೃಷಿ, ಸಮಗ್ರ ಜಲಾನಯನ ಅಭಿವೃದ್ಧಿ, ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನ, ಪ್ರಗತಿಪರ ರೈತ ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರಧಾನ, ರೈತ-ವಿಜ್ಞಾನಿ ಸಂವಾದ.
ಬೆಂಬಲ ಬೆಲೆ ಯೋಜನೆಯಡಿ ಹೆಸರು ಹುಟ್ಟುವಳಿ ಖರೀದಿ ಕೇಂದ್ರ ಶೀಘ್ರ ಆರಂಭಿಸಿ : ಹೆಸರು ಪ್ರತಿ ಕ್ವಿಂಟಲ್ ರೂ. 8682 ನಿಗದಿ
2025-25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಎಫ್.ಎ.ಕ್ಯೂ ಮನು ” ಗುಣಮಟ್ಟದಹೆಸರು ಹುಟ್ಟುವಳಿಯನ್ನು ಖರೀದಿಸಲಾಗುತ್ತಿದ್ದು ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಸೋಮವಾರ 2024-25 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರು ಹುಟ್ಟುವಳಿ ಖರೀದಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬೆಂಬಲ ಬೆಲೆ ಯೋಜನೆಯ ಸದುಪಯೋಗವನ್ನು ರೈತರು ಪಡೆದುಕೊಳ್ಳಲು ಖರೀದಿ ಕೇಂದ್ರದ ಮುಂದೆ ಬ್ಯಾನರ್ ಅಳವಡಿಸಬೇಕು. ರೈತರಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಅವರು ಪಾಲ್ಗೊಂಡು ಇದರ ಲಾಭ ಪಡೆಯುವಂತೆ ಕ್ರಮ ವಹಿಸಬೇಕು ಎಂದರು. ಸರ್ಕಾರದ ಮಾನದಂಡಗಳನ್ವಯ ಎಫ್.ಎ.ಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು. ಖರೀದಿ ಏಜೆನ್ಸಿಯವರು ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು. ಎಫ್.ಎ.ಕ್ಯೂ ಗುಣಮಟ್ಟದ ಪರಿಶೀಲನೆಗಾಗಿ ಆಯಾ ಹೋಬಳಿ ವ್ಯಾಪ್ತಿಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಿಬ್ಬಂದಿಗಳನ್ನು ಗ್ರೇಡರ್ ಆಗಿ ನೇಮಕ ಮಾಡಬೇಕು. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಖರೀದಿಸಿದ ಹೆಸರು ಹುಟ್ಟುವಳಿಯನ್ನು ದಾಸ್ತಾನೀಕರಿಸಲು ಜಿಲ್ಲೆಯಲ್ಲಿರುವ ರಾಜ್ಯ ಹಾಗೂ ಕೇಂದ್ರ ಉಗ್ರಾಣಗಳಲ್ಲಿ ಸ್ಥಳ ಕಾಯ್ದಿರಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚಿಸಿದರು.ಸರ್ಕಾರದ ಆದೇಶದನ್ವಯ ಜಿಲ್ಲೆಯ ಪ್ರತಿ ರೈತರಿಂದ ಎಕರೆಗೆ 2 ಕ್ವಿಂಟಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ 10 ಕ್ವಿಂಟಲ್ ಮಾತ್ರ ಖರೀದಿಸಲು ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಇವರಿಗೆ ಸೂಚಿಸಲಾಗಿದ್ದು ಖರೀದಿ ಸಂಸ್ಥೆಗಳು ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು. ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ಮಾತನಾಡಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಹುಟ್ಟುವಳಿಗೆ ಪ್ರತಿ ಕ್ವಿಂಟಾಲ್ಗೆ ರೂ.8682 ರಂತೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶ ದಿ.24-8-2024 ರ ಅನುಸಾರ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಸದರಿ ಆದೇಶದ ದಿನಾಂಕದಿಂದ ರೈತರ ನೋಂದಣಿ 45 ದಿನದವರೆಗೆ ಹಾಗೂ ನೋಂದಣಿ ಕಾರ್ಯದ ಜೊತೆಯಲ್ಲಿಯೇ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ಜರುಗಿಸಲಾಗುವುದು ಎಂದು ತಿಳಿಸಿದರು.ರಾಜ್ಯದಲ್ಲಿ ಮಾರ್ಕಫೆಡ್ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ಕಲಬುರಗಿ ಸಂಸ್ಥೆಗಳನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ಗುರುತಿಸಲಾಗಿದೆ. ಜಿಲ್ಲೆಯ 56 ಕಡೆ ಖರೀದಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಕೃಷಿ ಇಲಾಖೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ ಇಲಾಖೆ, ಸಹಕಾರಿ ಸಂಘಗಳ ಇಲಾಖೆ ಅಧಿಕಾರಿಗಳು, ಕೃಷಿ ಮಾರಾಟ ಇಲಾಖೆ, ಮಾರ್ಕೆಟಿಂಗ್ ಫೆಡರೇಷನ್ ಶಾಖಾ ವ್ಯವಸ್ಥಾಪಕರು, ಎಪಿಎಂಸಿ ಕಾರ್ಯದರ್ಶಿ, ಕೇಂದ್ರ ಹಾಗೂ ರಾಜ್ಯ ಉಗ್ರಾಣ ನಿಗಮದ ಶಾಖಾ ವ್ಯವಸ್ಥಾಪಕರು ಹಾಜರಿದ್ದರು.ಬಿಂಕದಕಟ್ಟೆ, ನೀಲಗುಂದ, ಪ್ರಭುಸ್ವಾಮಿ ಎಫ್ಪಿಓ ಹೊಂಬಳ, ಟಿಎಪಿಸಿಎಂ ಎಸ್ ಗದಗ, ಶ್ರಮಜೀವಿ ಎಫ್ಪಿಓ ಹಿರೇಹಂದಿಗೋಳ, ಗದಗ ಕೋ ಆಪ್ ಕಾಟನ್ ಸೇಲ್ ಸೊಸೈಟಿ ಲಿ, ಗದಗ. ಶಿರಹಟ್ಟಿ ತಾಲೂಕು: ಪಿ ಎ ಸಿ ಎಸ್ ಶಿರಹಟ್ಟಿ, ಟಿ ಎ ಪಿ ಸಿ ಎಂ ಎಸ್ ಶಿರಹಟ್ಟಿ, ಎಫ್ ಪಿ ಓ ಬೆಳ್ಳಟ್ಟಿ. ಲಕ್ಷೇಶ್ವರ ತಾಲೂಕು: ಪಿ ಎ ಸಿ ಎಸ್ ಯಳವತ್ತಿ, ಪಿ ಎ ಸಿ ಎಸ್ ಅಡರಕಟ್ಟಿ ಮುಂಡರಗಿ ತಾಲೂಕು: ಪಿಎಸಿ ಎಸ್ ಆಲೂರ, ಪೇಠಾಲೂರ, ಬರದೂರ, ಶಿರೂರ ನರಗುಂದ ತಾಲೂಕು: ಪಿಎಸಿ ಎಸ್ ಚಿಕ್ಕ ನರಗುಂದ, ಸುರಕೋಡ, ಸಂಕದಾಳ, ಶಿರೋಳ, ಕೊಣ್ಣೂರ, ಹಿರೇಕೊಪ್ಪ, ಜಗಾಪುರ. ಖಾನಾಪುರ, ಗಂಗಾಪುರ, ಟಿ ಎ ಪಿ ಸಿ ಎಂ ಎಸ್. ನರಗುಂದ. ರೋಣ ತಾಲೂಕು: ಪಿ ಎ ಸಿ ಎಸ್ ಹೊಸಳ್ಳಿ, ಮಲ್ಲಾಪುರ, ರೋಣ-1, ರೋಣ-2, ಅಬ್ಬಿಗೇರಿ, ಯಾವಗಲ್ ,ಕೌಜಗೇರಿ, ಬೆಳವಣಿಕಿ, ಸವಡಿ, ನಿಡಗುಂದಿ, ಜಕ್ಕಲಿ,ಹೊಳೆ ಆಲೂರ, ಯಾ.ಸ. ಹಡಗಲಿ, ಟಿಎಪಿಸಿಎಂಎಸ್ ರೋಣ, ಎಫ್ಪಿಓ ಸವಡಿ.
ಹಾವೇರಿ 585 ಹೆಕ್ಟೇರ್ನಲ್ಲಿ ಹೆಸರು : ಖರೀದಿ ಕೇಂದ್ರ ಆರಂಭ
ಜಿಲ್ಲೆಯ 585 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಕಾಳು ಬೆಳೆಯಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಉತ್ಪನ್ನ ಖರೀದಿಸಲು ಮೊದಲ ಹಂತದಲ್ಲಿ ಸವಣೂರ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಕೇಂದ್ರ ತೆರೆಯಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಪ್ರತಿ ಕ್ವಿಂಟಲ್ಗೆ 8,682 ದರದಲ್ಲಿ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ. ಆಗಸ್ಟ್ 24ರಿಂದ ಮುಂದಿನ 45 ದಿನಗಳವರೆಗೆ ರೈತರ ನೋಂದಣಿ ಆರಂಭಿಸಬೇಕು. 90 ದಿನಗಳವರೆಗೆ ಖರೀದಿಸಬೇಕು. ಖರೀದಿ ಕೇಂದ್ರದ ಮುಂದೆ ಫಲಕ ಅಳವಡಿಸಬೇಕು. ಕರಪತ್ರಗಳ ಮೂಲಕ ರೈತರಿಗೆ ಕೇಂದ್ರದ ಮಾಹಿತಿ ನೀಡಬೇಕು’ ಎಂದರು. ಸವಣೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಕೇಂದ್ರ ತೆರೆಯಬೇಕು. ರೈತರಿಂದ ಖರೀದಿಸುವ ಹೆಸರುಕಾಳಿನ ಎಫ್.ಎ.ಕ್ಯೂ ಗುಣಮಟ್ಟ ಪರಿಶೀಲಿಸಲು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದು ಸೂಚಿಸಿದರು. ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ, ಜಂಟಿ ಕೃಷಿ ನಿರ್ದೇಶಕ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಇದ್ದರು.
ರೇಷ್ಮೆ ಬೆಳೆಗಾರರ ಗಮನಕ್ಕೆ
ಜಿಲ್ಲೆಯ ರೇಷ್ಮೆ ಬೆಳೆಗಾರರು ರೇಷ್ಮೆ ಇಲಾಖೆ ವತಿಯಿಂದ ದೊರೆಯುವ ಸಹಾಯಧನ ಸೌಲಭ್ಯವನ್ನು ಪಡೆಯಲು ಹಾಗೂ ರೇಷ್ಮೆ ಗೂಡು ವಹಿವಾಟು ಮಾಡಲು ತಂತ್ರಾಂಶದಲ್ಲಿ ರೇಷ್ಮೆ ಬೆಳೆಗಾರರ ಮಾಹಿತಿ ನಮೂದಿಸಬೇಕಾಗಿರುತ್ತದೆ. ಜಿಲ್ಲೆಯ ರೇಷ್ಮೆ ಬೆಳೆಗಾರರು ಆಗಸ್ಟ್.31 ರೊಳಗಾಗಿ ಪಹಣಿ, ಆಧಾರ್ ಕಾರ್ಡ್, ರೇಷ್ಮೆ ಪಾಸ್ಬುಕ್, ಬ್ಯಾಂಕ್ ಪಾಸ್ಬುಕ್, ರೇಷನ್ ಕಾರ್ಡ್, ವೋಟರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ನೊಂದಿಗಾಗಿ ತಾಲೂಕಿನ ರೇಷ್ಮೆ ಕಚೇರಿಗಳಿಗೆ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇಲಾಖೆಯ ಯಾವುದೇ ಸಹಾಯಧನ ಹಾಗೂ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ರೇಷ್ಮೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗೆ ಅರ್ಜಿ ಆಹ್ವಾನಪ್ರಸ್ತಕ ಸಾಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಳಗಾವಿ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಯಡಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆನಲೈನ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಆಸಕ್ತ ಮಹಿಳೆಯರು ತಮ್ಮ ತಾಲೂಕಿನ/ಗ್ರಾಮದ ಬಾಪೂಜಿ ಸೇವಾ ಕೇಂದ್ರ/ಗ್ರಾಮ ಒನ್/ಕರ್ನಾಟಕ ಒನ್ / ಕೇಂದ್ರಗಳಲ್ಲಿ https://sevasindhu.karnataka.gov.in ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸೆ. 21 ರ ಕೊನೆಯ ದಿನವಾಗಿರುತ್ತದೆ ಎಂದು ಬೆಳಗಾವಿ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಜಿಲ್ಲೆಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2024-25 ನೇ ಸಾಲಿನ ಡಿಪ್ಲೋಮಾ ಇನ್ ಆಟೋಮೇಷನ್ ಹಾಗೂ ರೊಬೋಟಿಕ್ಸ್, ಡಿಪ್ಲೋಮಾ ಇನ್ ಆರ್ಟಿಫೀಷಿಯಲ್ ಇಂಟಲಿಜೆನ್ಸಿ ಮತ್ತು ಮಷಿನ್ ಲರ್ನಿಂಗ್ ವಿಭಾಗಗಳಲ್ಲಿ ಖಾಲಿ ಉಳಿದಿರುವ ಸೀಟ್ಗಳ ಭರ್ತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಪ್ರವೇಶಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರ ಕಚೇರಿಯ ದೂರವಾಣಿ:9916231899, 9141630309 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಜಿಟಿಟಿಸಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹತ್ತನೇ ವಾರ್ಷಿಕೋತ್ಸವದಲ್ಲಿ ಪ್ರಧಾನಮಂತ್ರಿ ಜನ್ ಧನ್ ಯೋಜನೆ
ಮುಖ್ಯ ಆರ್ಥಿಕ ಸಲಹೆಗಾರರು, ಭಾರತ ಸರ್ಕಾರ ನಾವು ಕೆಲವು ವಿಷಯಗಳಿಗಾಗಿ ಹಾತೊರೆಯುವಾಗ ಹಾಗೂ ಅವುಗಳನ್ನು ಭದ್ರಪಡಿಸಿಕೊಳ್ಳಲು ಶ್ರಮಿಸಿದಾಗ ನಾವು ಸ್ವಲ್ಪ ಮಟ್ಟಿಗೆ ಸಂತಸಪಡುತ್ತೇವೆ. ಅದು ಅಧಿಕಾರ, ಸ್ಥಾನ, ಪ್ರಭಾವ ಅಥವಾ ಭೌತಿಕ ಸಂಪತ್ತಾಗಿರಬಹುದು. ನಮ್ಮ ಯಶಸ್ಸಿನ ತರುವಾಯ ಮಾನಸಿಕ ಮರು ಹೊಂದಾಣಿಕೆ ಅಗತ್ಯ. ಏನು ಸಾಧಿಸಲಾಗಿದೆಯೋ ಅದು ಮಾನದಂಡವಾಗಲಿದೆ. ಹೆಚ್ಚಿನ ಮನುಷ್ಯರಲ್ಲಿ ಇದು ವಾಸ್ತವ, ತೆಗೆದುಕೊಳ್ಳಬೇಕಾದ ಕೆಲವು ನೀತಿಗಳು ಮತ್ತು ಕ್ರಮಗಳ ವಿಚಾರದಲ್ಲಿ ನಾವು ಗಲಾಟೆ ಮಾಡುತ್ತೇವೆ. ಸಾಧನೆಗೆ ಅಸಮರ್ಪಕ ಮನ್ನಣೆ ಇದೆ ಮತ್ತು ಪ್ರತಿರೂಪದ ಚಿಂತನೆ ? ಕೀಳು ಮನಸ್ಥಿತಿಯ ನಿರಂತರತೆಯೂ ಇರುತ್ತದೆ. ತನ್ನ ಹತ್ತನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಪ್ರಧಾನಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಅಂತಹ ಒಂದು ಪ್ರಕರಣವಾಗಿದೆ.ಕೋಟ್ಯಂತರ ಭಾರತೀಯರನ್ನು ಆರ್ಥಿಕ ವಲಯದಿಂದ ಹೊರಗಿಟ್ಟ ಬಗ್ಗೆ ನಾವು ದೀರ್ಘಕಾಲ ವಿಷಾದಿಸುತ್ತಿದ್ದೇವು. ಆದರೆ 2014 ರಲ್ಲಿ ಎನ್.ಡಿ.ಎ ಸರ್ಕಾರ ಕೋಟ್ಯಂತರ ಭಾರತೀಯರನ್ನು ಔಪಚಾ- ರಿಕ ಹಣಕಾಸು ವ್ಯವಸ್ಥೆಗೆ ಒಳಪಡಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಮತ್ತು ಸವಾಲಿನ ಕಾರ್ಯ ಕೈಗೆತ್ತಿಕೊಂಡಿತು. ಇದು ಅದ್ಭುತ ಯಶಸ್ಸಾಗಿ ಹೊರ ಹೊಮ್ಮಿತು. ಈ ಯೋಜನೆಯಲ್ಲಿ 2024 ರ ಆಗಸ್ಟ್ 14 ರ ವೇಳೆಗೆ 53.13 ಕೋಟಿ ಫಲಾನುಭವಿಗಳಿದ್ದು, 2.31 ಲಕ್ಷ ಕೋಟಿ ರೂಪಾಯಿ ಠೇವಣಿ ಹೊಂದಿದೆ. ಈ ಪೈಕಿ ಸುಮಾರು 30 ಕೋಟಿ ಫಲಾನುಭವಿಗಳು ಮಹಿಳೆಯರು ಎನ್ನುವುದು ವಿಶೇಷ.ದಿ ಡಿಸೈನ್ ಆಫ್ ಡಿಜಿಟಲ್ ಫೈನಾನ್ಸಿಯಲ್ ಇನ್ಸಾಸ್ಟಕ್ಟರ್: ಲೆಸನ್ಸ್ ಫ್ರಂ ಇಂಡಿಯಾ” [ಬಿಐಎಸ್ ಪೇಪರ್ ಸಂಖ್ಯೆ. 106, ಡಿಸೆಂಬರ್ 2019), ಬ್ಯಾಂಕ್ ಫಾರ್ ಇಂಟರ್ ನ್ಯಾಷನಲ್ ಸೆಟಲೈಂಟ್ಸ್’ ಹೀಗೆ ಹೇಳುತ್ತದೆ “2008 ರಲ್ಲಿ ಹಣಕಾಸಿನ ಸೇರ್ಪಡೆ ಮತ್ತು ಔಪಚಾರಿಕತೆಯ ಗುರುತಿಸುವಿಕೆ, ಈ ಎರಡರ ಕಡಿಮೆ ಮಟ್ಟವನ್ನು ಗಮನಿಸಿದರೆ. ಒಂದು ದಶಕದ ಹಿಂದೆ ಭಾರತವು ಎದುರಿಸುತ್ತಿದ್ದ ಸವಾಲುಗಳ ಪ್ರಮಾಣ ಅಪಾರವಾಗಿತ್ತು. ಬ್ಯಾಂಕ್ ಖಾತೆಯ ದತ್ತಾಂಶ ಮತ್ತು ಚರ್ಚಿಸಿದ ತಲಾವಾರು ಜಿಡಿಪಿ ಯೊಂದಿಗಿನ ಸಂಬಂಧದ ಆಧಾರದ ಮೇಲೆ, ಒಂದು ಸ್ಕೂಲ ಅಂದಾಜಿನ ಪ್ರಕಾರ, ಭಾರತವು ಸಾಂಪ್ರದಾಯಿಕ ಬೆಳವಣಿಗೆಯ ಪ್ರಕ್ರಿಯೆಗಳ ಮೇಲೆ ಮಾತ್ರ ಅವಲಂಬಿತವಾಗಿದ್ದರೆ 80% ರಷ್ಟು ವಯಸ್ಕರಿಗೆ ಬ್ಯಾಂಕ್ ಖಾತೆಯನ್ನು ಒದಗಿಸಲು 47 ವರ್ಷಗಳನ್ನು ತೆಗೆದುಕೊಳ್ಳಲಾಗಿತ್ತು.ಬ್ಯಾಂಕ್ಸ್: ವಾಟ್ ಡು 280 ಮಿಲಿಯನ್ ನ್ಯೂ ಮತ್ತೊಂದು ಸಂಶೋಧನೆ [“ಬ್ಯಾಂಕಿಂಗ್ ದಿ ಅನ್ ಬ್ಯಾಂಕ್ ಅಕೌಂಟ್ಸ್ ರಿವೀಲ್ ಎಬೌಟ್ ಫೈನಾನ್ಸಿಯಲ್ ಎಕ್ಸೆಸ್?’, ಸೆಪ್ಟೆಂಬರ್ 2023], ಕಳ್ಳತನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಪಿಎಂಜೆಡಿವೈ ಖಾತೆಗಳ ಹೆಚ್ಚಿನ ಬಳಕೆ ಇರುವುದರಿಂದ ಪಿಎಂಜೆಡಿವೈ ಹಣವನ್ನು ಉಳಿತಾಯ ಮಾಡಲು ನೆರವಾಗಿರುವುದನ್ನು ಈ ಸಂಶೋಧನೆ ತೋರಿಸಿದೆ. ಇದಲ್ಲದೇ ಸಾಮಾನ್ಯವಾಗಿ ಹೆಚ್ಚಿನ ಬಡ್ಡಿದರ ವಿಧಿಸುವ ಅನೌಪಚಾ- ರಿಕ ಮೂಲಗಳಿಂದ ಸಾಲ ಪಡೆಯುವುದು ಸಹ ಕಡಿಮೆಯಾಗಿದೆ ಎಂಬುದು ಸಹ ವಿಶೇಷವೇ.ವಿನಾಯಿತಿ, ತ್ವರಿತ ತೀರ್ಪಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರೂಢಿಯಲ್ಲಿರುವ ಈ ಜಗತ್ತಿನಲ್ಲಿ ಪಿಎಂಜೆಡಿವೈ ಖಾತೆಗಳು ಬಹುತೇಕ ಶೂನ್ಯ ಸಮತೋಲನ ಖಾತೆಗಳಾಗಿವೆ ಎಂದು ವ್ಯಾಖ್ಯಾನಕಾರರು ಗಮನಸೆಳೆದಿದ್ದಾರೆ. ಈ ಖಾತೆಗಳು ಒಟ್ಟಾಗಿ 2.31 ಕೋಟಿ ರೂಪಾಯಿ ಠೇವಣಿ ಹೊಂದಿದೆ. ಕೇಂದ್ರ ಸರ್ಕಾರ ಈ ಖಾತೆಗಳಿಗೆ ನೇರನಗದು ವರ್ಗಾವಣೆ ಸೌಲಭ್ಯ ವ್ಯವಸ್ಥೆಯನ್ನು ಕಲ್ಪಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಈ ಖಾತೆಗಳ ಉಪಯುಕ್ತತೆಯು ಅತ್ಯಮೂಲ್ಯವಾಗಿತ್ತು ಎಂಬುದು ಸಾಬೀತಾಗಿದೆ. ಕಳೆದ ಮೂರು ಹಣ- ಕಾಸು ವರ್ಷಗಳಲ್ಲಿ [20 ರ ಹಣಕಾಸು ವರ್ಷದಿಂದ 22ರ ಹಣಕಾಸು ವರ್ಷಗಳ ವರೆಗೆ) ಸುಮಾರು 8.1 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ನೇರ ಸೌಲಭ್ಯ ವರ್ಗಾವಣೆ ಮೂಲಕ ವರ್ಗಾಯಿಸಲಾಗಿದೆ. ಡಿಜಿಟಲ್ ಪಾವತಿ ಮೂಲ ಸೌಕರ್ಯದ ವಿಕಸನದ ಜೊತೆಗೆ ಇದು ಸಾಂಕ್ರಾಮಿಕದ ಗರಿಷ್ಠ ಸಮಯದಲ್ಲಿ ನೋ ಟಚ್ ಪಾವತಿಗಳನ್ನು ಸುಗಮಗೊಳಿಸಿತು.ಡಿಜಿಟಲ್ ಪಾವತಿ ಮೂಲಸೌಕರ್ಯದ ವಿಕಸನದ ಜೊತೆಗೆ. ಇದು ನೋ-ಟಚ್ ವ್ಯವಸ್ಥೆಯನ್ನು ಸುಗಮಗೊಳಿಸಿತು ಉದಯೋನ್ಮುಖ ಸಂಶೋಧನೆ (‘ಡಸ್ ಓಪನ್ ಬ್ಯಾಂಕಿಂಗ್ ಎಕ್ಸಾಂಡ್ ಕ್ರೆಡಿಟ್ ಎಕ್ಸೆಸ್, ಆಗಸ್ಟ್ 2004] ಪಿಎಂಜೆ ಡಿವೈ ಮುಕ್ತ ಬ್ಯಾಂಕಿಂಗ್ ಅನ್ನು ಸುಗಮಗೊಳಿಸಿದೆ ಎಂದು ನಿರೂಪಿಸಿದೆ – ಯಾವುದೇ ಹಣಕಾಸು ಸಂಸ್ಥೆಗೆ ಗ್ರಾಹಕ-ಅನುಮತಿ, ದತ್ತಾಂಶ ಹಂಚಿಕೆ ಅಗತ್ಯ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಹೆಚ್ಚು ಪಿಎಂಜೆಡಿವೈ ಖಾತೆಗಳನ್ನು ಹೊಂದಿರುವ ಪ್ರದೇಶಗಳು ಪಿಎಂಜೆಡಿವೈ ನೇತೃತ್ವದ ಸಾಲದ ಬೆಳವಣಿಗೆಯನ್ನು ಹೆಚ್ಚಿಸಿವೆ ಮತ್ತು ಅಗ್ಗದ ಮತ್ತು ಉತ್ತಮ ಅಂತರ್ಜಾಲ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿ ಪರಿಣಾಮಗಳು ಪ್ರಬಲವಾಗಿವೆ. “ಖಾತೆ ಒಟ್ಟುಗೂಡಿಸುವಿಕೆ’ ಮುಕ್ತ ಬ್ಯಾಂಕಿಂ- ಗ್ನ ದ್ಯೋತಕವಾಗಿದೆ. ಇದು ಸಾರ್ವಜನಿಕರಿಗೆ ಹೆಚ್ಚಿನ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಪಿಎಂಜೆಡಿವೈ ತಮ್ಮ ಖಾತೆಗಳು ಮತ್ತು ಖಾತೆಗಳ ಹಣದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುತ್ತದೆ. ಗಣನೀಯವಾಗಿ ಇದು ಹಣಕಾಸು ಸ್ವಾಯತ್ತತೆಗೆ ಕಾರಣವಾಗಿದೆ.ಭಾರತದಲ್ಲಿ ಮಹಿಳೆಯರು ಸಾಮಾನ್ಯವಾಗಿ ಹೆಚ್ಚಿನ ಉಳಿತಾಯದ ಬಗ್ಗೆ ಒಲವು ಹೊಂದಿರುತ್ತಾರೆ ಮತ್ತು ಕಾಲಾನಂತರದಲ್ಲಿ, ಇದು ಕುಟುಂಬಗಳಿಗೆ ವರ್ಧಿತ ಆರ್ಥಿಕ ಭದ್ರತೆಗೆ ಕಾರಣವಾಗಬಹುದು ಮತ್ತು ರಾಷ್ಟ್ರೀಯ ಉಳಿತಾಯ ದರವನ್ನು ಹೆಚ್ಚಿಸಬಹುದು. ಮುಂದುವರೆದು ಇದು ಮಹಿಳೆಯರ ಉದ್ಯಮಶೀಲತೆಗೆ ಪುಷ್ಟಿ ನೀಡಿದೆ. ಭಾರತದಲ್ಲಿ ನವೋದ್ಯಮಗಳು, ಸರ್ಕಾರ ಉತ್ತೇಜಿತ ನವೋದ್ಯಮಗಳು ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾದಲ್ಲಿ ಪಾಲ್ಗೊಳ್ಳುವಿಕೆ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದ ಮಹಿಳೆಯರ ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿಯೂ ಇದು ಫಲಪ್ರದವಾಗಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸುಮಾರು ಶೇ 68 ರಷ್ಟು ಮಹಿಳೆಯರಿಗೆ ಸಾಲ ಮಂಜೂರು ಮಾಡಲಾಗಿದೆ ಮತ್ತು 2024 ರ ಮೇ ವೇಳೆಗೆ ಶೇ 77.7 ರಷ್ಟು ಫಲಾನುಭವಿಗಳು ಸ್ಟ್ಯಾಂಡ್ ಅಪ್ ಇಂಡಿಯಾ ಫಲಾನುಭವಿಗಳಾಗಿದ್ದಾರೆ.2024 ರ ಜುಲೈ 30 ರ ವೇಳೆಗೆ ದೇಶದಲ್ಲಿ ಉದ್ಯಮ ಮತ್ತು ಯುಎಪಿನಲ್ಲಿ ನೋಂದಾಯಿಸಲಾದ ಮಹಿಳಾ ನಾಯಕತ್ವದಡಿ ಎಂ.ಎಸ್.ಎಂ.ಇಗಳ ಸಂಖ್ಯೆ 1.85 ಕೋಟಿ- ಗಿಂತ ಅಧಿಕವಾಗಿದೆ. ಪಿಎಂಜೆಡಿವೈ ಖಾತೆಗಳು ಮಹಿಳೆಯರನ್ನು ಸಬಲೀಕರಣಗೊಳಿಸಿವೆ ಮತ್ತು ಸ್ವಯಂ ಉದ್ಯೋಗ/ಉದ್ಯಮಶೀಲತೆಗೆ ಮಹಿಳೆಯರ ಪ್ರವೇಶವನ್ನು ಸುಗಮಗೊಳಿಸಿವೆ ಮತ್ತು ಬಲವಾದ ಹಾಗೂ ಔಪಚಾರಿಕ ತನಿಖೆಗೆ ಇವು ಯೋಗ್ಯವಾಗಿವೆ. ನಾವು ಪ್ರತಿವಾದವನ್ನು ಆಲೋಚಿಸುವ ಸವಾಲಿಗೆ ಹಿಂತಿರುಗುತ್ತಿದ್ದೇವೆ. ಖಾತೆದಾರರಿಗೆ ಪಿಎಂಜೆಡಿಪಿವೈ ನೀಡಿರುವ ಪ್ರಯೋಜನಗಳ ಪುರಾವೆಗಳ ಬೆಳಕಿನಲ್ಲಿ ಪ್ರತಿರೂಪವನ್ನು ರೂಪಿಸುವುದು ಕಷ್ಟವೇನಲ್ಲ. ಕಳೆದ ದಶಕದಲ್ಲಿ ಭಾರತದ ಅಭಿವೃದ್ಧಿ ಸಾಧನೆಗಳು ಗಣನೀಯವಾಗಿ ಕಡಿಮೆಯಾಗಿರಬಹುದು. ಆದರೆ ಪಿಎಂಜೆಡಿವೈ ಅನ್ನು ಪ್ರಾರಂಭಿಸುವ ದೂರದೃಷ್ಟಿಯ ನಿರ್ಧಾರ ಮತ್ತು ಕಡಿಮೆ ಅವಧಿಯಲ್ಲಿ ಅದನ್ನು ಯಶಸ್ವಿ ಕಾರ್ಯಗತಗೊಳಿಸಿರುವುದು ವಿಶೇಷವಾಗಿದೆ.