ಒಟ್ಟಾರೆ ನಮ್ಮ ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ 56,000 ರೈತರು ಸಾಲ ಪಡೆದಿದ್ದಾರೆ. ಇದರಲ್ಲಿ ನಮ್ಮ ರೈತರು ಮಧ್ಯಮ ಮತ್ತು ದೀರ್ಘಾವಧಿಯ ಕೃಷಿ ಸಾಲ ಪಡೆದುಕೊಂಡಿದ್ದಾರೆ. ಈ ಸಾಲದ ಮೇಲೆ ಇರುವಂತಹ ಬಡ್ಡಿಯನ್ನು ಮನ್ನಾ ಮಾಡಬೇಕೆಂದು ಸರ್ಕಾರವು ನಿರ್ಧಾರ ಮಾಡಿದೆ.
ಯಾರ ಸಾಲಗಳು ಮನ್ನಾ ಆಗಲಿವೆ?
ನಮ್ಮ ರೈತರು ಮಧ್ಯಮ ಅವಧಿ ಹಾಗೂ ದೀರ್ಘಾವಧಿಯ ಸಾಲವನ್ನು 2023ರ ಡಿಸೆಂಬರ್ 31ರ ಒಳಗಾಗಿ ತಾವು ಮಾಡಿದ ಸಾಲಕ್ಕೆ ಸಂಪೂರ್ಣವಾಗಿ ಅಸಲನ್ನು ತಮ್ಮ ಬ್ಯಾಂಕ್ ಅಥವಾ ಸಹಕಾರಿ ಸಂಘಕ್ಕೆ ಕಟ್ಟಿದ್ದರೆ ಮಾತ್ರ ಅವರಿಗೆ ಬಡ್ಡಿ ಮನ್ನಾ ಅವಕಾಶ. ಒಟ್ಟು 400 ರೂ ಕೋಟಿ ರೈತರ ಸಾಲದ ಬಡ್ಡಿ ಮನ್ನಾ ಮಾಡಲು ಆದೇಶ.
ರೈತರ ಯಾವ ಬ್ಯಾಂಕ್ ಮತ್ತು ಯಾವ ಸಹಕಾರಿ ಸಂಘಗಳ ಸಾಲದ ಬಡ್ಡಿ ಮನ್ನಾ?
ಸಹಕಾರಿ ಸಂಘ
ಕೃಷಿ ಪತ್ತಿನ ಸಹಕಾರಿ ಸಂಘ
ಜಿಲ್ಲಾ ಸಹಕಾರಿ ಬ್ಯಾಂಕ್
ಪ್ರಾಥಮಿಕ ಕೃಷಿ
ಗ್ರಾಮೀಣಾಭಿವೃದ್ಧಿ ಬ್ಯಾಂಕ್
ರೈತ ಸಂಘದ ಉಪಾಧ್ಯಕ್ಷರಾಗಿ- ಪ್ರಕಾಶ ತೇಲಿ ಆಯ್ಕೆ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚೂನಪ್ಪಾ ಪೂಜೇರಿ ನೇತೃತ್ವದ ಸಂಘಟನೇಯ ವಿಜಯಪುರ ತಾಲೂಕಾ ಉಪಾಧ್ಯಕ್ಷರಾಗಿ ವಿಜಯಪುರ ಸಮೀಪದ ಕವಲಗಿ(ಆಹೇರಿ) ಗ್ರಾಮದ ಪ್ರಕಾಶ ತೇಲಿ ಅವರನ್ನು ಆಯ್ಕೆ ಮಾಡಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಹಾಗೂ ತಾಲೂಕಾ ಅಧ್ಯಕ್ಷರಾದ ಅರುಣಗೌಡ ತೇರದಾಳ ಅವರು ಜಿಲ್ಲಾ ಕಛೇರಿಯಲ್ಲಿ ಆದೇಶ ನೀಡಿ ಸಂಘಟನೆ ಬಗ್ಗೆ ತಿಳಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಅವರು ಆದೇಶ ಪ್ರತಿ ನೀಡಿ ಸಂಘದ ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ಧವಾಗಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಜೊತು ಬೀಳದೇ ಯಾವ ರೈತರಿಗಾದರೂ ಅನ್ಯಾಯವಾದರೆ ಅವರ ನೆರವಿಗೆ ತಕ್ಷಣದಲ್ಲಿ ಬಂದು ಪರಿಹಾರ ಕಂಡುಕೊಳ್ಳಬೇಕು, ನಾಡಿನ ಎಲ್ಲಾ ರೈತರಿಗೆ ಸರಕಾರದಿಂದ ಸಿಗುವಂತಹ ಯೋಜನೆಗಳ ಕುರಿತು ತಿಳಿ ಹೇಳಿ ರೈತರ ಆದಾಯವನ್ನು ದ್ವೀಗುಣ ಮಾಡಿಕೊಳ್ಳುವಂತೆ ಆಗಾಗ ರೈತರನ್ನು ಸೇರಿಸಿ ತರಬೇತಿ, ಕಾರ್ಯಾಗಾರಗಳನ್ನು ಮಾಡುತ್ತಾ ರೈತರ ಏಳಿಗೆಗೆ ಶ್ರಮವಹಿಸಲು ಬದ್ಧವಾಗಿರಬೇಕು.
ರೈತ ಆತ್ಮಹತ್ಯೆಯಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಪಣ ತೊಡಬೇಕು ಎಂದರು. ಪ್ರಕಾಶ ತೇಲಿ ಅವರು ಆದೇಶ ಪ್ರತಿ ಸ್ವೀಕರಿಸಿ ಮಾತನಾಡುತ್ತಾ ನಾಡಿನಲ್ಲಿ ಅನ್ನದಾತನಿಗೆ ದಿನನಿತ್ಯ ಹಲವಾರು ಸಮಸ್ಯೆಗಳು ತಲೆದೋರುತ್ತಿವೆ. ಜನಪ್ರತಿನಿಧಿಗಳು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ, ಎಲ್ಲಾ ಕಡೆ ಲಂಚಬಾಕರೇ ತುಂಬಿಕೊಂಡಿದ್ದಾರೆ. ಅಂತವರ ವಿರುದ್ಧ ರೈತರಿಗೆ ಸರಕಾರಿ ಕೆಲಸಗಳನ್ನು ಲಂಚ ಇಲ್ಲದೇ ನಾವೆಲ್ಲರೂ ಸೇರಿ ಮಾಡಿಕೊಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಬರಗಾಲದಿಂದ ತತ್ತರಿಸಿರುವ ಜನ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತನೆ, ಜೊತೆಗೆ ವಿಜಯಪುರ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ರೈತರನ್ನು ಸಂಘಟನೆಗೆ ತಂದು ರೈತ ಪರ ಹೋರಾಟ ಮಾಡುತ್ತೇನೆ ಎಂದರು. ಈ ವೇಳೆ ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ(ಬ್ಯಾಲ್ಯಾಳ), ತಾ.ಉಪಾಧ್ಯಕ್ಷರಾದ ಮಹಾದೇವಪ್ಪ ತೇಲಿ, ಕಲಕೇರಿ ಹೋಬಳಿ ಅಧ್ಯಕ್ಷರಾದ ಮಹಿಬೂಬ ಬಾಷಾ ಮನಗೂಳಿ, ಮುಖಂಡರಾದ ಮಲ್ಲಿಕಾರ್ಜುನ ಮಹಾಂತಮಠ, ವೀರಣ್ಣಗೌಡ ಚಂ ಬಿರಾದಾರ, ಮಕಬುಲ್‌ಸಾಬ ಡೋ ಕಿಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕಗಳ ಮಾರಾಟದಲ್ಲಿ ಶೇ. 50% ರಿಯಾಯಿತಿ
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಎಲ್ಲಾ ಪ್ರಕಟಣೆಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಏಪ್ರಿಲ್ 2024 ರ ಮಾಹೆಯಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 30 ರವರೆಗೆ ಶೇಕಡ 50% ರಿಯಾಯಿತಿಯ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ. ಆನ್‌ಲೈನ್ www.kuvempubhashabharathi.karnataka.gov.in 50% ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಖರೀದಿಸಬಹುದಾಗಿದ್ದು, ಓದುಗರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ನೇರ ಸಂದರ್ಶನ
ವಿಜಯಪುರ ಕೃಷಿ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಯಂಗ್ ಪ್ರೋಪೇಶಿಯನಲ್-2 ತಾತ್ಕಾಲಿಕ ಹುದ್ದೆಗೆ ಮಾ.28ರಂದು ಬೆಳಗ್ಗೆ 10.30ಕ್ಕೆ ಜೆನೆಟಿಕ್ ಮತ್ತು ಪ್ಲಾಂಟ್ ಬ್ರಿಡಿಂಗ್ ವಿಷಯದಲ್ಲಿ ಕೃಷಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಕರೆಯಲಾಗಿದೆ.
ಸಂದರ್ಶನಕ್ಕೆ ಬರುವಾಗ ವಿದ್ಯಾರ್ಹತೆಗೆ ಸಂಬಂಧಪಟ್ಟ ಮೂಲ ದಾಖಲೆಗಳು ಹಾಗೂ ಎರಡು ಸೆಟ್ ಝರಾಕ್ಸ್ ಪ್ರತಿಗಳು, ಎರಡು ಭಾವಚಿತ್ರಗಳನ್ನು ಅರ್ಜಿ ನಮೂನೆಗೆ ಲಗತ್ತಿಸಿ ಸಂದರ್ಶನದ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕೃಷಿ ಮಾಹಾವಿದ್ಯಾನಿಲಯದ ವಿದ್ಯಾಧಿಕಾರಿ ಭೀಮಪ್ಪ ಎ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.