Breaking
Tue. Dec 17th, 2024

ಯಾವ ರೈತರಿಗೆ ಸಾಲ ಮನ್ನಾ ಆಗಿದೆ? ನಂಬರ್ ಹಾಕಿ ಮೊಬೈಲ್ ನಲ್ಲಿ ಚೆಕ್ ಮಾಡಿ

Spread the love

ರೈತರ ಸಾಲ ಮನ್ನಾ ಮಾಡಿದರೆ ಯಾವುದೆಲ್ಲ ರೈತರ ಸಾಲ ಮನ್ನಾ ಆಗಬಹುದು?

ಈಗಾಗಲೇ 2019ರಲ್ಲಿ ಆಗಿರುವ ವಿಚಾರವನ್ನು ನಾವು ಗಮನಿಸಿದರೆ 50,000ಗಳವರೆಗೆ ಯಾರ ಹೆಸರಿನಲ್ಲಿ ಅಂದರೆ ರೈತರ ಹೆಸರಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಕಮರ್ಷಿಯಲ್ ಬ್ಯಾಂಕುಗಳಲ್ಲಿ ಇರುವ ಸಾಲದ ಮೊತ್ತದ ಆಧಾರದ ಮೇಲೆ ಗರಿಷ್ಠ 50 ಸಾವಿರ ರೂಪಾಯಿಗಳವರೆಗೆ ಸಾಲ ಮನ್ನಾ ಆಗಬಹುದು.ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿರಿ.
https://clws.karnataka.gov.in/clws/pacs/citizenreport/ಹಂತ 2: ಮೇಲಿನ ನೀಡಿರುವ ಯಾವುದಾದರೂ ಒಂದು ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಎರಡನೇ ಲಿಂಕನ್ನು ನೀವು ಕ್ಲಿಕ್ ಮಾಡಿದ Individual loan report ಮೇಲೆ ನಿಮಗೆ ಇಲ್ಲಿ ನಿಮ್ಮ ಆಧಾರ್ ಸಂಖ್ಯೆ ಅಥವಾ ರೇಷನ್ ಕಾರ್ಡ್ ಎರಡರಲ್ಲಿ ಯಾವುದಾದರೂ ಒಂದು ದಾಖಲೆ ಸಂಖ್ಯೆಯನ್ನು ಬಳಸುವ ಮೂಲಕ ನೀವು ನಿಮ್ಮ ಇಲ್ಲಿಯವರೆಗೆ ಸಾಲಮನ್ನಾ ಎಷ್ಟು ಬಾರಿ ಆಗಿದೆ ಮತ್ತು ಎಷ್ಟು ಆಗಿದೆ ಯಾವ ಸರ್ವೇ ನಂಬರ್ ಮೇಲೆ ಆಗಿದೆ ನೋಡಬಹುದು. ಎಷ್ಟು ಸಾಲ ಮನ್ನಾ ಆಗುತ್ತದೆ ಈಗಾಗಲೇ ಚೆಕ್ ಮಾಡಿಕೊಂಡರೆ ನೀವು ಹೀಗೆ ತಿಳಿದುಕೊಳ್ಳಬಹುದಾಗಿದೆ.ಒಂದು ವೇಳೆ ಈ ಮೇಲೆ ಲಭಿಸಿರುವ ಲಿಂಕ್ ಕೆಲಸ ಮಾಡುತ್ತಿಲ್ಲವೆಂದರೆ ಇನ್ನು ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಇದೆ ಲಿಂಕ್ ಮೇಲೆ ಪ್ರೆಸ್ ಮಾಡಿರಿ. ಯಾಕೆಂದರೆ ಎಲ್ಲಾ ರೈತರು ಕೂಡ ಈ ಲಿಂಕ್ ಮೇಲೆ ಪ್ರೆಸ್ ಮಾಡಿ ಮಾಡಿ ಸರ್ವರ್ ಬಿಜಿಯಾಗಿರುತ್ತದೆ.ಇದಕ್ಕಿಂತ ಹೆಚ್ಚಿನ ಹಣ ಯಾವುದೇ ರೀತಿಯಾಗಿ ಸರ್ಕಾರವು ಸಾಲ ಮನ್ನಾ ಮಾಡುವುದಿಲ್ಲ ಏಕೆಂದರೆ ಅದು ಬಹುದೊಡ್ಡ ಮತ್ತುವಾಗುತ್ತದೆ ಈಗಾಗಲೇ ಕೇಂದ್ರ ಸರ್ಕಾರದ ಸಾಲವು 170 ಕೋಟಿ ಏರಿಕೆಯಾಗಿದೆ ಹೀಗಾಗಿ ಪ್ರತಿಯೊಬ್ಬರು ಇದರ ಬಗ್ಗೆ ವಿಚಾರಣೆ ಮಾಡಿಕೊಳ್ಳಬೇಕು ಮತ್ತು ನೀವು ಸಾಲ ಮನ್ನಾ ಮಾಡಬಹುದಾಗಿತ್ತು ಆದರೆ ರಾಜ್ಯ ಸರ್ಕಾರದ ಬೆಂಬಲವು ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ.

ನೀವು ಮಾಡಿರುವ ಯಾವ ಸಾಲ ರೈತರ ಸಾಲವನ್ನಾಗಿ ಮಾಡಿಕೊಂಡು ಮನ್ನಾ ಮಾಡಲಾಗುತ್ತದೆ?

ಅಲ್ಪಾವಧಿ ಬೆಳೆ ಸಾಲ ಮಾತ್ರ 2009 ರಿಂದ ಪಡೆದುಕೊಂಡಿರುವ ಯಾವುದೇ ರೀತಿ ಬೆಳೆಗಳ ಮೇಲೆ ಅಲ್ಪಾವಧಿ ಸಾಲವಿದ್ದರೆ ಮಾತ್ರ ಅದನ್ನು ಮನ್ನಾ ಮಾಡಲು ಅರ್ಹರೆಂದು ಪರಿಗಣನೆ ಮಾಡಲಾಗುತ್ತದೆ.

ಕೃಷಿ ಸಾಲ ಮನ್ನಾ ಎಂದರೇನು?

ಕಳಪೆ ಮುಂಗಾರು ಅಥವಾ ನೈಸರ್ಗಿಕ ವಿಕೋಪ ಉಂಟಾದಾಗ, ರೈತರು ಸಾಲವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಗ್ರಾಮೀಣ ಸಂಕಷ್ಟವು ರಾಜ್ಯಗಳು ಅಥವಾ ಕೇಂದ್ರವನ್ನು ಪರಿಹಾರ ಕಡಿತ ಅಥವಾ ಸಂಪೂರ್ಣ ಸಾಲ ಮನ್ನಾ ನೀಡಲು ಪ್ರೇರೇಪಿಸುತ್ತದೆ. ಮೂಲಭೂತವಾಗಿ, ಕೇಂದ್ರ ಅಥವಾ ರಾಜ್ಯಗಳು ರೈತರ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತವೆ ಮತ್ತು ಬ್ಯಾಂಕುಗಳಿಗೆ ಮರುಪಾವತಿ ಮಾಡುತ್ತವೆ. ಮನ್ನಾಗಳು ಸಾಮಾನ್ಯವಾಗಿ ಆಯ್ದ ಕೆಲವು ಸಾಲದ ಪ್ರಕಾರಗಳು, ರೈತರ ವರ್ಗಗಳು ಅಥವಾ ಸಾಲದ ಮೂಲಗಳು ಅರ್ಹತೆ ಪಡೆಯಬಹುದು. ಉದಾಹರಣೆಗೆ, 2008 ರಲ್ಲಿ, ಕನಿಷ್ಠ ಮತ್ತು ಸಣ್ಣ ರೈತರಿಗೆ (2 ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವವರಿಗೆ) ಬೆಳೆ ಸಾಲ ಮತ್ತು ಹೂಡಿಕೆ ಸಾಲಗಳನ್ನು ಮನ್ನಾ ಮಾಡಲಾಯಿತು; ಇತರೆ ರೈತರಿಗೆ ಕೇವಲ 25 ರಷ್ಟು ಕಡಿತ.

ಕೃಷಿ ಸಾಲ ಮನ್ನಾ ಏಕೆ ಮುಖ್ಯ?

ಭಾರತದಲ್ಲಿನ ಕೃಷಿ ಕ್ಷೇತ್ರವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ – ಛಿದ್ರಗೊಂಡ ಭೂಮಿ ಹಿಡುವಳಿ, ಕ್ಷೀಣಿಸುತ್ತಿರುವ ನೀರಿನ ಟೇಬಲ್ ಮಟ್ಟಗಳು, ಹದಗೆಡುತ್ತಿರುವ ಮಣ್ಣಿನ ಗುಣಮಟ್ಟ, ಹೆಚ್ಚುತ್ತಿರುವ ಇನ್ಪುಟ್ ವೆಚ್ಚಗಳು, ಕಡಿಮೆ ಉತ್ಪಾದಕತೆ. ಮಾನ್ಸೂನ್‌ನ ಈ ಬದಲಾವಣೆಗಳಿಗೆ ಸೇರಿಸಿ. ಔಟ್ಪುಟ್ ಬೆಲೆಗಳು ಲಾಭದಾಯಕವಾಗಿಲ್ಲದಿರಬಹುದು. ರೈತರು ಹೆಚ್ಚಾಗಿ ಖರ್ಚು ಮಾಡಲು ಸಾಲ ಮಾಡುವಂತೆ ಒತ್ತಾಯಿಸಲಾಗುತ್ತದೆ. ಅಲ್ಲದೆ, ಬ್ಯಾಂಕ್ ಸಾಲಕ್ಕೆ ಅರ್ಹರಲ್ಲದ ಅನೇಕ ಸಣ್ಣ ರೈತರು ಖಾಸಗಿ ಮೂಲಗಳಿಂದ ಅತಿಯಾದ ಬಡ್ಡಿದರದಲ್ಲಿ ಸಾಲ ಪಡೆಯುತ್ತಾರೆ. ಅನಿಯಮಿತ ಮುಂಗಾರು ಮತ್ತು ಬೆಳೆ ವೈಫಲ್ಯದ ರೂಪದಲ್ಲಿ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರ ಮೇಲೆ ಪ್ರಕೃತಿ ಸವಾರಿ ಮಾಡಿದಾಗ, ಅವರು ಕಠೋರ ಆಯ್ಕೆಗಳನ್ನು ಎದುರಿಸುತ್ತಾರೆ. ದೇಶದಲ್ಲಿ ನಡೆಯುತ್ತಿರುವ ಹಲವಾರು ರೈತರ ಆತ್ಮಹತ್ಯೆಗೆ ಸಾಲಬಾಧೆಯೇ ಪ್ರಮುಖ ಕಾರಣ. ಸಾಲ ಮನ್ನಾ ಸ್ವಲ್ಪ ಪರಿಹಾರ ನೀಡುತ್ತದೆ.

08.07.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಕರಾವಳಿ ಭಾಗದಲ್ಲಿ ಉತ್ತಮ ಹಾಗೂ ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕೊಡಗು, ಹಾಸನ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರು ಜಿಲ್ಲೆಯ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮಳೆ ಸ್ವಲ್ಪ ಜಾಸ್ತಿ ಇರಬಹುದು. ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಶಿವಮೊಗ್ಗ ಹೆಚ್ಚಿನ ಭಾಗಗಳಲ್ಲಿ ಮಳೆ ಸ್ವಲ್ಪ ಜಾಸ್ತಿ ಇರಬಹುದು.ತುಮಕೂರು, ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲಾ ಭಾಗಗಳಲ್ಲಿ ಅಲ್ಲಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ದಕ್ಷಿಣ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಗದಗ, ವಿಜಯಪುರ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡದ ವಾತಾವರಣದ ಮುನ್ಸೂಚೆನೆ ಇದೆ. ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇದೆ. ಈಗಿನಂತೆ ಜುಲೈ 9 ಅಥವಾ 10ರಿಂದ ದಕ್ಷಿಣ ಕರಾವಳಿ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ. ಉತ್ತರ ಒಳನಾಡು ಹಾಗೂ ಉತ್ತರ ಕರಾವಳಿ ಭಾಗಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.

07.07.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಉತ್ತಮ ಮಳೆಯ ಮುನ್ಸೂಚೆನೆ ಇದೆ. ಕರಾವಳಿ ತೀರ ಭಾಗಗಳಲ್ಲಿ ಬಿಡುವು ಕಡಿಮೆ ಇದ್ದು, ಉತ್ತಮ ಮಳೆಯ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕರಾವಳಿ ತೀರ ಭಾಗಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು.ಕೊಡಗು, ಹಾಸನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚೆನೆ ಇದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಉತ್ತಮ ಮಳೆಯ ಸಾಧ್ಯತೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಹ ಮಳೆಯ ಮುನ್ಸೂಚೆನೆ ಇದೆ. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ.ಮುಂಗಾರು ಸಾಂಪ್ರದಾಯಿಕ ಪಥದಲ್ಲಿ ಸಾಗುವ ಲಕ್ಷಣಗಳಿದ್ದು, ಈಗಿನಂತೆ ಜುಲೈ 15ರಿಂದ ರಾಜ್ಯದಾದ್ಯಂತ ಚುರುಕಾಗುವ ಲಕ್ಷಣಗಳಿವೆ. ಅಲ್ಲಿಯವರೆಗೆ ಕರಾವಳಿ, ಮಲೆನಾಡು ಹೊರತುಪಡಿಸಿ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಕರಾವಳಿಯ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜುಲೈ 10ರಿಂದ ಒಂದೆರಡು ದಿನಗಳ ಮಟ್ಟಿಗೆ ಮಳೆ ಕಡೆಮೆ ಇದ್ದರೂ ನಂತರ ಚುರುಕಾಗುವ ಲಕ್ಷಣಗಳಿವೆ.

06.07.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಭಾಗಗಳಲ್ಲಿ ಅಲ್ಲಲ್ಲಿ ಮಧ್ಯಾಹ್ನ ನಂತರ ಮಳೆಯ ಮುನ್ಸೂಚನೆ ಇದೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಧ್ಯಾಹ್ನ ನಂತರ ಉತ್ತಮ ಮಳೆಯ ಮುನ್ಸೂಚನೆ ಇದೆ. ಅಲ್ಲಲ್ಲಿ ಗುಡುಗು ಇರಬಹುದು. ಕೊಡಗು ಹಾಗೂ ಹಾಸನ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಸಹ ಮಳೆಯ ಮುನ್ಸೂಚೆನೆ ಇದೆ.ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ.
ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ.ದಕ್ಷಿಣ ದ್ರುವ ಭಾಗದಿಂದ ಬರುತ್ತಿರುವ ಮಾರುತಗಳು ದುರ್ಬಲಗೊಳ್ಳುತ್ತಿದ್ದು, ಮುಂದಿನ 3 ಅಥವಾ 4 ದಿನಗಳಲ್ಲಿ ಸಾಂಪ್ರದಾಯಿಕ ಮುಂಗಾರು ಮಾರುತಗಳು ಬಲಗೊಳ್ಳುವ ಲಕ್ಷಣಗಳಿವೆ. ಈಗಿನಂತೆ ಜುಲೈ 10ರಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿದ್ದು, ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ.

05.07.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಮಳೆಯ ಮುನ್ಸೂಚೆನೆ ಇದೆ. ಕರಾವಳಿ ತೀರ ಭಾಗಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು. ಕೊಡಗು ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಹಾಸನ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು.ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾವೇರಿ, ಧಾರವಾಡ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಯಾದಗಿರಿ ಆಂದ್ರಾ ಗಡಿ ಭಾಗಗಳ ಒಂದೆರಡು ಕಡೆ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ.ಈಗಿನಂತೆ ದಕ್ಷಿಣ ದ್ರುವ ಭಾಗದಿಂದ ಬರುತ್ತಿರುವ ಮಾರುತಗಳು ಜುಲೈ 5ರ ನಂತರ ದುರ್ಬಲಗೊಂಡು ಸಾಂಪ್ರದಾಯಿಕ ಮುಂಗಾರು ಮಾರುತಗಳು ಬಲಗೊಳ್ಳುವ ಲಕ್ಷಣಗಳಿವೆ. ಜುಲೈ 9ರಿಂದ ರಾಜ್ಯದಲ್ಲೂ ಮಳೆಯ ಕ್ಷೀಣಿಸುವ ಸಾಧ್ಯತೆಗಳಿವೆ. ನಂತರ ಮುಂಗಾರು ಚುರುಕಾಗಬೇಕಿದೆ. ಈ ನಡುವೆ ರಾಜ್ಯದ ದಕ್ಷಿಣ ಒಳನಾಡು ಭಾಗಗಳಲ್ಲಿ ಒಂದೆರಡು ದಿನ ಮಳೆಯ ಮುನ್ಸೂಚೆನೆ ಇದ್ದು, ಉತ್ತರ ಒಳನಾಡು ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗುತ್ತಿದೆ.

Related Post

Leave a Reply

Your email address will not be published. Required fields are marked *