ವಿವಿಧ ಕೀಟಗಳು ಕೃಷಿಯಲ್ಲಿ ಪ್ರತಿ ವರ್ಷ ಶೇ. 13.6 ರಷ್ಟು ನಷ್ಟವನ್ನುಂಟು ಮಾಡುತ್ತವೆ. ಹೀಗೆ ಕೀಟಗಳಿಂದಾಗುವ ನಷ್ಟವನ್ನು ನಿಯಂತ್ರಣದಲ್ಲಿರಿಸಲು ಕೀಟನಾಶಕಗಳ ಬಳಕೆ ಮಾಡಲಾಗುತ್ತದೆ. ಇದರಿಂದಾಗಿ ಮನುಕುಲ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಇದಕ್ಕಾಗಿ ಕೀಟನಾಶಕಗಳ ಕಡಿಮೆ ಬಳಕೆಯ ಕುರಿತು ವಿಜಯಪುರ ಕೃಷಿ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
ಕೀಟ ನಿರ್ವಹಣೆಯಲ್ಲಿ ಜೈವಿಕ ನಿಯಂತ್ರಣವು ಒಂದು ಪರಿಸರ ಸ್ನೇಹಿ ಮಾರ್ಗವಾಗಿದೆ. ಇದರಲ್ಲಿ ಕೀಟ ಪರ ಭಕ್ಷಕಗಳು, ಪರಾವಲಂಬಿಗಳು, ದುಂಡಾಣುಗಳು, ಶಿಲೀಂಧ್ರಗಳು ಮತ್ತು ನಂಜಾಣುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಕೀಟ ನಿರ್ವಹಣೆಗೆ ಜೈವಿಕ, ಭೌತಿಕ ಹಾಗೂ ಯಾಂತ್ರಿಕ ವಿಧಾನಗಳ ಅಳವಡಿಕೆಯ ಮೂಲಕ ಕೀಟಗಳ ಆರ್ಥಿಕ ನಷ್ಟ ರೇಖೆಯನುಸಾರ ಕೀಟನಾಶಕಗಳ ಬಳಕೆ ಮಾಡಬೇಕು. ಹಸಿರು ಮತ್ತು ನೀಲಿ ಲೇಬಲ್ ಹೊಂದಿರುವ ಪರಿಸರ ಸ್ನೇಹಿ ಕೀಟನಾಶಕಗಳನ್ನು ಮಾತ್ರ ಬಳಸುವುದರಿಂದ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳನ್ನು ಪಡೆಯಬಹುದು.
ಕೀಟ ನಾಶಕವನ್ನು ಮುಂಜಾನೆ ಮತ್ತು ಸಾಯಂಕಾಲ ಸಮಯದಲ್ಲಿ ಸಿಂಪರಣೆ ಮಾಡುವುದರಿಂದ ಉದ್ದೇಶಪೂರ್ವಕವಾಗಿ ಹಾನಿಯಾಗುವ ಅಪಾಯವನ್ನು ಕಡಿಮೆ ಮಾಡಬಹುದು. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ನ್ಯಾನೋ ಯೂರಿಯಾ ಬಳಸುವ ವಿಧಾನ ಮತ್ತು ಅದರ ಉಪಯೋಗಗಳು
ಬಾಳೆಹಣ್ಣಿನ ಬೇಸಾಯ ಮಾಡುವುದು ಹೇಗೆ ಎಂದು ತಿಳಿಯೋಣ