ಅತ್ಮೀಯ ನಾಗರಿಕರೇ, ನಮ್ಮ ರಾಜ್ಯದಲ್ಲಿ ಅತ್ಯಂತ ಜನಪ್ರಿಯವಾದ ಮತ್ತು ಬಡವರಿಗಾಗಿ ಮೀಸಲಿಟ್ಟ, ಬಡವರ ಸಂಜೀವಿನಿ ಎಂದು ಸುಪ್ರಸಿದ್ಧವಾದ ಯೋಜನೆಯು ಯಶಸ್ವಿನಿ ಯೋಜನೆ. ಈ ಯೋಜನೆಯನ್ನು ಇನ್ನಷ್ಟು ಶ್ರೇಯಸ್ಸು ಗೊಳಿಸಲು ನಮ್ಮ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಇದನ್ನು ಮರು ಜಾರಿಗೊಳಿಸಿದ್ದಾರೆ. ಈ ಯಶಸ್ವಿನಿ ಕಾರ್ಡ್ ಅನ್ನು ಮಾಡಿಸುವುದರಿಂದ ಬಡವರಿಗೆ ತುಂಬಾ ಉಪಯುಕ್ತವಾದ ಸವಲತ್ತುಗಳು ಬರುತ್ತವೆ.
ಹಲವಾರು ಕಾರಣಗಳಿಂದ ಸುಮಾರು ವರ್ಷದಿಂದ ಈ ಯೋಜನೆ ಸ್ಥಗಿತಗೊಂಡಿತು. ಕೆಲವು ಜನರು ಇದನ್ನು ಮರು ಜಾರಿಗೊಳಿಸಲು ಒತ್ತಾಯ ಮಾಡಿದ ಕಾರಣ ನಮ್ಮ ಬೊಮ್ಮಾಯಿಯವರು ಕ್ರಮ ತೆಗೆದುಕೊಂಡು ಬಡವರ ಆರೋಗ್ಯ ದೃಷ್ಟಿಯಿಂದ ಇದನ್ನು ಮರು ಜಾರಿಗೊಳಿಸಿದ್ದಾರೆ.
ಸಹಕಾರಿ ಸಂಘದಲ್ಲಿರುವ ಸದಸ್ಯರಿಗೆ ಈ ಯಶಸ್ವಿನಿ ಎಂಬ ಯೋಜನೆಯಡಿಯಲ್ಲಿ ಆರೋಗ್ಯವನ್ನು ಸೌಲಭ್ಯವು ದೊರೆಯುವುದು. ಈ ಉದ್ದೇಶವನ್ನು ಇಟ್ಟುಕೊಂಡು ರಾಜ್ಯದಲ್ಲಿ 474 ನೆಟ್ವರ್ಕ್ ಆಸ್ಪತ್ರೆಗಳನ್ನು ಗುರುತಿಸಿ ಈ ಯೋಜನೆಯ ಸೌಲಭ್ಯವನ್ನು ನೀಡಿದ್ದಾರೆ. ಈ ಆಸ್ಪತ್ರೆಗಳಲ್ಲಿ 1,650 ಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಸಿಕೊಳ್ಳಲು ಅನುವು ಮಾಡಿದ್ದಾರೆ.
ನಿಮಗೆ ತಿಳಿದಿರಬಹುದು 34 ಲಕ್ಷ ಜನರು ಯಶಸ್ವಿನಿ ಯೋಜನೆಯಡಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಯು ಜನವರಿ ತಿಂಗಳಿಂದ ಪ್ರಾರಂಭವಾಗುತ್ತದೆ. ಈ ವರ್ಷದಲ್ಲಿ 3600 ಜನರು ಈ ಯೋಜನೆ ಲಾಭ ಪಡೆದು ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಸಹಕಾರಿ ಸಂಘದ ಸದಸ್ಯರು ಮತ್ತು ಅವರ ಅವಲಂಬಿತರು ಚಿಕಿತ್ಸೆಗೆ ಗರಿಷ್ಠ 5 ಲಕ್ಷ ರೂಪಾಯಿಗಳನ್ನು ನಿಗದಿ ಮಾಡಿದ್ದಾರೆ. ಈ ಯೋಜನೆಗೆ ಗ್ರಾಮೀಣ ಪ್ರದೇಶದವರು 500 ರೂಪಾಯಿಗಳು ಮತ್ತು ನಗರ ಪ್ರದೇಶದವರು ಒಂದು ಸಾವಿರ ರೋಗವನ್ನು ಕಟ್ಟಿ ಶುಲ್ಕ ಪಾವತಿಸಿ ಸದಸ್ಯರಾಗಬೇಕಾಗಿದೆ. ಇನ್ನು ನಮ್ಮ ಸರ್ಕಾರವು ಪ್ರತಿಷ್ಠಿತ ಜಾತಿ ಮತ್ತು ಪ್ರತಿಷ್ಠಿತ ಪಂಗಡ ಜನರಿಗೆ ಉಚಿತವಾಗಿ ಸದಸ್ಯರಾಗಲು ಅನುವು ಮಾಡಿಕೊಟ್ಟಿದೆ.
ಯಶಸ್ವಿನಿ ಯೋಜನೆಯ ಅಡಿಯಲ್ಲಿ ಬರುವ ಚಿಕಿತ್ಸೆಗಳು?
ಮೂಗು, ಕಿವಿ, ಗಂಟಲು, ಮೂಳೆ, ನರ, ಕಣ್ಣು, ಹೃದಯ ಕರುಳು, ಸಾಮಾನ್ಯ ಶಸ್ತ್ರಚಿಕಿತ್ಸೆ, ಆರ್ಥೋಪೆಡಿಕ್ ಶಸ್ತ್ರಚಿಕಿತ್ಸೆಗಳು, ಮಕ್ಕಳ ಶಸ್ತ್ರಚಿಕಿತ್ಸೆಗಳು, ಆಂಜಿಯೋಪ್ಲ್ಯಾಸ್ಟಿ, ನವಜಾತ ಶಿಶುಗಳ ಆರೈಕೆ, ನಾಡಿಯ ಶಸ್ತ್ರಚಿಕಿತ್ಸೆ, ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ, ನಾಯಿ ಕಚ್ಚಿದೆ, ಸ್ತ್ರೀ ಸಂಬಂಧಿತ ಕಾಯಿಲೆ ಮತ್ತು ಉಳಿದ 1,650 ರೋಗಗಳಿಗೆ ಚಿಕಿತ್ಸೆ ನೀಡಲು ನೆಟ್ವರ್ಕ್ ಆಸ್ಪತ್ರೆಗಳನ್ನು ತೆರೆದಿದ್ದಾರೆ. ಯಶಸ್ವಿನಿ ಅಡಿ ಬರುವ ಚಿಕಿತ್ಸೆಗಳು.ನವಜಾತ ಶಿಶುಗಳ ತೀವ್ರ ನಿಗಾ ಕಾರ್ಡಿಯಾಕ್ ಮತ್ತು ಕಾರ್ಡಿಯೋಥೊರಾಸಿಕ್ ಸರ್ಜರಿ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಮತ್ತು ಎಲ್ಲಿ ಸಲ್ಲಿಸಬೇಕು?
ಅರ್ಜಿ ಸಲ್ಲಿಸುವವರು ಪ್ರತಿ ಸದಸ್ಯರ ಆಧಾರ್ ಕಾರ್ಡ್ ಪಡಿತರ ಚೀಟಿ ಎರಡು ಫೋಟೋ ಮತ್ತು ಪ್ರತಿಷ್ಠಿತ ಜಾತಿ ಮತ್ತು ಪಂಗಡದವರ ಜಾತಿ ಪ್ರಮಾಣ ಪತ್ರ ಮತ್ತು ಅದರ ಆರ್‌ಡಿ ನಂಬರ್ ತೆಗೆದುಕೊಂಡು ನಿಮ್ಮ ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘ ಅಂದರೆ ಸೊಸೈಟಿ ಗೆ ಭೇಟಿಕೊಟ್ಟು ಅಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಬೇಕು. ಅವರು ನಿಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ನಿಮಗೆ ಯಶಸ್ವಿನಿ ಕಾರ್ಡನ್ನು ಮಾಡಿಕೊಡುತ್ತಾರೆ.
ಇದನ್ನೂ ಓದಿ :- ಪಿಎಂ ಕಿಸಾನ್ ಹಣ ಮತ್ತು ಬೆಳೆ ವಿಮಾ ಹಣ ಜಮಾ ಆಗಿಲ್ಲವೇ? ಈ ನಂಬರ್ ಗೆ ಕರೆ ಮಾಡಿ ಮತ್ತು ಹಣ ಪಡೆಯಿರಿ
ಇದನ್ನೂ ಓದಿ :- ಈ ಟ್ರಾಕ್ಟರ್ ಖರೀದಿಸಿ ಜೊತೆಗೆ ರೋಟೋವೇಟರ್ ಮತ್ತು ಒಂದು ಗ್ರಾಂ ಚಿನ್ನವನ್ನು ಬಹುಮಾನವಾಗಿ ಪಡೆಯಿರಿ
ಇದನ್ನೂ ಓದಿ :- ಬೊಮ್ಮಾಯಿಯವರು ನೈಸರ್ಗಿಕ ಕೃಷಿ ಯೋಜನೆಯಡಿ 100 ಕೋಟಿ ರೂ ಬಿಡುಗಡೆ ಮಾಡಿದ್ದಾರೆ