ಪ್ರಿಯ ರೈತ ಬಾಂಧವರೇ, ಈ ಲೇಖನದಲ್ಲಿ ನಿಮಗೆ ತಿಳಿಸುವ ಸಂಗತಿ ಅತಿ ಮುಖ್ಯವಾದದ್ದು ಮತ್ತು ಉಪಯೋಗಕಾರಿ ಆಗುವುದು. ನಮ್ಮ ದೇಶದ ಜನರಿಗೆ ಇತ್ತೀಚೆಗೆ ಡಿಜಿಟಲ್ಲಿಕರಣದ ಬಗ್ಗೆ ಅರಿವು ಮೂಡಿಸುವುದರ ಸಲುವಾಗಿ ನಮ್ಮ ದೇಶದ ಗಣ್ಯ ವ್ಯಕ್ತಿಗಳು ಹಾಗೂ ಹಲವಾರು ಇಂಜಿನಿಯರ್ ಗಳು ಶ್ರಮ ಪಟ್ಟಿದ್ದಾರೆ. ಈ ಶ್ರಮ ಪಟ್ಟಿದ್ದರಿಂದ ಎಲ್ಲಾ ನಿಮ್ಮ ಅಗತ್ಯ ದಾಖಲಾತಿಗಳು ಹಾಗೂ ನಿಮಗೆ ಸಂಬಂಧಿತ ಅಗತ್ಯ ವಸ್ತುಗಳು ಈಗ ನಿಮ್ಮ ಮೊಬೈಲ್ ನಿಂದಲೇ ಪಡೆಯಬಹುದು ಅದರಲ್ಲಿ ಇದು ಕೂಡ ಒಂದು. ಅದೇನೆಂದರೆ ನಿಮ್ಮ ಊರಿನ ಸಂಪೂರ್ಣ ನಕ್ಷೆಯನ್ನು ನೀವು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಹೊಲವು ಎಲ್ಲಿದೆ ನಿಮ್ಮ ಹೊಲಕ್ಕೆ ಬಂಡೆ ದಾರಿ ಮತ್ತು ಕಾಲುದಾರಿ ಎಲ್ಲಿದೆ ಎಂದು ಅತಿ ಸುಲಭವಾಗಿ ತಿಳಿಯಬಹುದು. ಪಕ್ಕದ ಹೊಲದ ರೈತರ ಜೊತೆ ಬಂಡೆ ದಾರಿ ಅಥವಾ ಕಾಲುದಾರಿ ಎಲ್ಲಿದೆ ಎಂದು ಜಗಳವಾಡುವ ಅವಶ್ಯಕತೆ ಇಲ್ಲ ಈಗಲೇ ನಿಮ್ಮ ಹೊಲಕ್ಕೆ ಎಲ್ಲಿ ಕಾಲುದಾರಿದೆ ಎಂದು ತಿಳಿಯಬಹುದು ಈ ನಕ್ಷೆಯ ಮುಖಾಂತರ ತಿಳಿದುಕೊಳ್ಳಬಹುದು.
ನಿಮ್ಮ ಊರಿನ ನಕ್ಷೆಯನ್ನು ಡೌನ್ಲೋಡ್ ಮಾಡುವುದು ಹೇಗೆ?
ಈಗ ನಿಮ್ಮ ಹತ್ತಿರ ಒಂದು ಮೊಬೈಲ್ ಇದ್ದರೆ ಸಾಕು. ಅದರಲ್ಲೇ ನಿಮ್ಮ ಊರಿನ ನಕ್ಷೆಯನ್ನು ಕೇವಲ ಐದು ನಿಮಿಷಗಳಲ್ಲಿ ಡೌನ್ಲೋಡ್ ಮಾಡಬಹುದು. ಮೊದಲು ರೈತರು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
https://landrecords.karnataka.gov.in/service3/
ನಕ್ಷೆ ಚಿತ್ರ
ಕ್ಲಿಕ್ ಮಾಡಿದ ಕೂಡಲೇ ನೀವು ಒಂದು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತೀರಿ. ಅಲ್ಲಿ ನಿಮಗೆ ಕೆಳಗೆ ನೀಡಿರುವ ಚಿತ್ರದ ಹಾಗೆ ಒಂದು ಮುಖಪುಟ ತೆರೆಯುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಿಮ್ಮ ಗ್ರಾಮ ಮತ್ತು ನಿಮಗೆ ಯಾವ ನಕ್ಷೆ ಬೇಕು ಎಂಬ ಆಯ್ಕೆ ಇರುತ್ತವೆ. ಎಲ್ಲವನ್ನು ಸರಿಯಾಗಿ ಆಯ್ಕೆ ಮಾಡಿ ಸರ್ಚ್ (search) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮ್ಮ ಊರಿನ ನಕ್ಷೆ ನಿಮ್ಮ ಮೊಬೈಲ್ ನಲ್ಲಿ ತೆರೆಯುತ್ತದೆ.
ಈ ನಕ್ಷೆಯಿಂದ ರೈತರಿಗೆ ಆಗುವ ಲಾಭಗಳು ಏನು?
ಈ ನಕ್ಷೆಯನ್ನು ಪಡೆಯುವುದರಿಂದ ರೈತರಿಗೆ ತಮ್ಮ ಗ್ರಾಮದ ಗಡಿರೇಖೆ, ಸರ್ವೇ ನಂಬರ್ ಗಡಿ, ತಮ್ಮ ಊರಿನ ರಸ್ತೆಗಳು, ತಮ್ಮ ಊರಿನ ನದಿಗಳು, ತಮ್ಮ ಹೊಲದ ಸರ್ವೇ ನಂಬರ್, ತಮ್ಮ ಊರಿನ ಗುಡ್ಡ, ಹಳ್ಳ, ಕೆರೆ ಮುಂತಾದ ವಿಷಯಗಳನ್ನು ಈ ನಕ್ಷೆಯಲ್ಲಿ ನೋಡಬಹುದು. ರೈತರು ತಮ್ಮ ಊರಿನ ನದಿಗಳು ಯಾವ ದಿಕ್ಕಿಗೆ ಹರಿಯುತ್ತವೆ ಎಂಬ ವಿಷಯವನ್ನು ತಿಳಿದರೆ ಸಾಕು ಅವರು ಯಾವ ಹೊಲಕ್ಕೆ ಯಾವ ಬೆಳೆಯನ್ನು ಬೆಳೆಯಬೇಕು ಯಾವಾಗ ಬೆಳೆಯಬೇಕು ಎಂಬ ಸಂಪೂರ್ಣ ಮಾಹಿತಿ ತಿಳಿಯುತ್ತದೆ. ಹೀಗೆ ತಮ್ಮ ಹೊಲಕ್ಕೆ ಹೋಗುವ ಕಾಲು ದಾರಿಯಲ್ಲಿದೆ ಮತ್ತು ಬಂಡೆ ದಾರಿಯಲ್ಲಿದೆ ಎಂಬ ತಿಳಿದರೆ ಅನಾವಶ್ಯಕ ಜಗಳಗಳು ಕಡಿಮೆಯಾಗುತ್ತವೆ. ನಮ್ಮ ದೇಶದ ಹಲವಾರು ಪ್ರದೇಶಗಳಲ್ಲಿ ಎಂದರೆ ಹಳ್ಳಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ತಮ್ಮ ಊರಿನ ನಕಾಶೆ ಅಥವಾ ನಕ್ಷೆ ಚಿತ್ರದ ಬಗ್ಗೆ ಅರಿವು ಇರುವುದಿಲ್ಲ. ಆ ಅರಿವನ್ನು ಮೂಡಿಸಲು ಅಥವಾ ಎಲ್ಲಾ ಜನರಿಗೆ ತಮ್ಮ ಮೊಬೈಲ್ ನಲ್ಲಿ ತಮ್ಮ ಊರಿನ ನಕ್ಷೆಯನ್ನು ತಿಳಿದುಕೊಳ್ಳಲು ಈ ಆಪ್ ಬಂದಿದೆ. ಈ ಆ್ಯಪ್ ನ ಮೂಲಕ ಜನರು ತಮ್ಮ ಊರಿನ ನಕಾಶೆ ಚಿತ್ರವನ್ನು ತಿಳಿದುಕೊಳ್ಳಬಹುದು.
ಇದನ್ನು ಓದಿ :- https://bhoomisuddi.com/apply-immediately-for-the-government-to-give-free-bus-pass-to-women-from-april-1/ಸರ್ಕಾರದಿಂದ ಏಪ್ರಿಲ್ 1 ರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಡಲು ಆರಂಭ ಈ ಯೋಜನೆಗೆ ಅರ್ಹ ಮಹಿಳೆಯರು ಕೂಡಲೇ ಉಚಿತ ಪಾಸ್ ಪಡೆಯಲು ಅರ್ಜಿಯನ್ನು ಸಲ್ಲಿಸಿ
ಇದನ್ನೂ ಓದಿ :- ಪಿಎಂ ಕಿಸಾನ್ 14 ನೇಯ ಕಂತಿನ ಫಲಾನುಭವಿಗಳ ಪಟ್ಟಿ ಬಿಡುಗಡೆ
ರೈತರು ನಿಮ್ಮ ಹಳ್ಳಿಯ ಎಲ್ಲಾ ಫಲಾನುಭವಿಗಳ ಪಟ್ಟಿಯಲ್ಲಿ ಅದರಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ